ದೇವರು ಕರುಣಾಮಯಿಯಾಗಿರುವುದರಿಂದ ಅವರು ಏನು ಮಾಡುತ್ತಾರೋ ಅದು ಕೃಪೆಯಾಗಿದೆ.
ಕೃಪೆಯೆಂದರೆ ನಾವು ಅರ್ಹರಲ್ಲದಿದ್ದರೂ; ನನ್ನ ಮತ್ತು ನಿಮ್ಮ ಪರವಾಗಿ ದೇವರ ಶಕ್ತಿ, ಸಾಮರ್ಥ್ಯ, ಅಧಿಕಾರವನ್ನು ಬಳಸುವ ದೇವರ ಇಚ್ಛೆ ಅಥವಾ ಬಯಕೆಯಾಗಿದೆ.
ನಮ್ಮ ಕಡೆಗಿರುವ ದೇವರ ಪ್ರತಿಯೊಂದು ಕಾರ್ಯವೂ ಆತನ ಕೃಪೆಯನ್ನು ಒಳಗೊಂಡಿರುತ್ತದೆ.
ಆತನ ಕೃಪೆಯನ್ನು ತಿಳಿಯಲು ನಾವು ಆತನ ಬಗ್ಗೆ ಅರಿವನ್ನು ಅಥವಾ ಜ್ಞಾನವನ್ನು ಹೊಂದಿರಬೇಕು.
ದೇವರ ಮತ್ತು ನಮ್ಮ ಕರ್ತನಾದ ಯೇಸುವಿನ ಬಗೆಗಿನ ಜ್ಞಾನದ ಮೂಲಕ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.
ದೇವರ ಸೃಷ್ಟಿಕಾರ್ಯ, ಅವರ ದೂರದೃಷ್ಟಿ, ಪಾಪಿಯ ಬಗ್ಗೆ ಅವರ ದೃಢನಿಶ್ಚಯ/ಸಂಪೂರ್ಣ ಮನವರಿಕೆ, ಅವರು ನೀಡಿರುವ ರಕ್ಷಣೆಯ ಕೊಡುಗೆ, ಸಂತರನ್ನು ಸಜ್ಜುಗೊಳಿಸುವುದು ಮತ್ತು ಅವರು ನಮಗಾಗಿ ಈಗಾಗಲೇ ಸಿದ್ಧಪಡಿಸಿರುವ ಭವಿಷ್ಯ; ಇವೆಲ್ಲವೂ ಸಹ ದೇವರ ಕೃಪೆಯೇ ಆಗಿದೆ.
ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ
”ಕರ್ತನ ಕನಿಕರಗಳಿಂದಲೇ ನಾವು ನಾಶವಾಗಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ, ಅವು ಪ್ರತಿ ಮುಂಜಾನೆಯೂ ಹೊಸದಾಗಿರುವವು….”(ಪ್ರಲಾಪ 3:22-23)
March 31
Now to him who is able to do immeasurably more than all we ask or imagine, according to his power that is at work within us, to him be glory