ನೀವು ಸಮೃದ್ಧಿಯ ಸ್ಥಳದಿಂದ ಕಾರ್ಯನಿರ್ವಹಿಸುವಾಗ, ನೀವು ಸತ್ಯವಾಗಿಯೂ ದೇವರ ಒಳ್ಳೆಯತನ ಮತ್ತು ದೂರದೃಷ್ಠಿಯ ವ್ಯವಸ್ಥೆಯನ್ನು ನಂಬುತ್ತೀರಿ ಎಂದು ಹೇಳುತ್ತಿದ್ದೀರಿ ಎಂದರ್ಥ.
ಸಮೃದ್ಧಿ ಎಂದರೆ ದೇವರು ನಿಮ್ಮ ಒಳಿತಿಗಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ನಂಬುವುದು, ಏನೇ ಆದರೂ ನಿಮ್ಮ ವಿಶ್ವಾಸವು ಅಲುಗಾಡದಿರುವುದು(ಚಂಚಲವಾಗದಿರುವುದು)
ಇವೆಲ್ಲವನ್ನೂ ಸಾಧಿಸಲು ನಿಮ್ಮಲ್ಲಿ ಕಾರ್ಯ ಮಾಡುತ್ತಿರುವ ದೇವರ ಪ್ರಬಲ ಶಕ್ತಿಯನ್ನು ಎಂದಿಗೂ ಅನುಮಾನಿಸಬೇಡಿ. ಅವನು ನಿಮ್ಮ ಶ್ರೇಷ್ಠ ವಿನಂತಿಯನ್ನು, ನಿಮ್ಮ ಅತ್ಯಂತ ನಂಬಲಾಗದ ಕನಸನ್ನೂ ಹಾಗು ನಿಮ್ಮಅಸಾಧಾರಣ ಕಲ್ಪನೆಯನ್ನೂ ಮೀರಿ ಅನಂತವಾಗಿ ಹೆಚ್ಚಿನದನ್ನು ಸಾಧಿಸುತ್ತಾರೆ! ಆತನು ಅವೆಲ್ಲವನ್ನೂ ಮೀರಿಸುತ್ತಾರೆ, ಏಕೆಂದರೆ ಆತನ ಅದ್ಭುತ ಶಕ್ತಿಯು ನಿಮ್ಮನ್ನು ನಿರಂತರವಾಗಿ ಶಕ್ತಿಯುತನನ್ನಾಗಿ ಮಾಡುತ್ತದೆ.
ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ.
”ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು….”(ಎಫೆಸಿ 3:20)
March 31
Now to him who is able to do immeasurably more than all we ask or imagine, according to his power that is at work within us, to him be glory