ಯೇಸುವಿನ ರಕ್ತವು ನಿಮಗೆ ಮರೆವನ್ನು(ಜ್ಞಾಪಕ ಶಕ್ತಿಯ ನಷ್ಟ) ನೀಡುವುದಿಲ್ಲ, ಆದರೆ ಅದು ನಿಮ್ಮ ಗತವನ್ನು ಜೀವನವನ್ನೂ(ಹಳೆಯ) ಮೀರಿದ ಜೀವನವನ್ನು ನಿಮಗೆ ನೀಡುತ್ತದೆ.
ಸೈತಾನನು ದೇವರ ಮಕ್ಕಳಿಗೆ; ಅವರ ಹದಿಹರೆಯದಲ್ಲಾದ ತಪ್ಪುಗಳು, ದಾಂಪತ್ಯ ಜೀವನದಲ್ಲಾದ ಗೊಂದಲಗಳು, ಪೋಷಕರಾಗಿ ಪಾಲನೆ ಮಾಡುವಾಗ ಆದ ತಪ್ಪುಗಳು, ಅವರ ವ್ಯಾಪಾರದಲ್ಲಾದ ನಷ್ಟಗಳು ಮತ್ತು ಅವರ ಹಿಂದಿನ ಜೀವನದಲ್ಲಿ ಗರ್ವದಿಂದ ಮಾಡಿದಂಥ ಕಾರ್ಯಗಳನ್ನು ನೆನಪಿಸಲು ಇಷ್ಟಪಡುತ್ತಾನೆ.
ಅವುಗಳನ್ನು ಪಾವತಿಸಲು/ಪ್ರಾಯಶ್ಚಿತ್ತ ಮಾಡಲು ನೀವು ನಿಮ್ಮ ಸ್ವಂತ ಶಕ್ತಿಯಿಂದ ಪ್ರಯತ್ನಿಸುತ್ತಲೇ ಇರಬಹುದು, ಆದರೆ ವಾಸ್ತವವೆಂದರೆ, ನೀವು ನಿಜವಾಗಿಯೂ ಹಿಂದಿನದನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
ಅದರಿಂದ ನೀವು ಕಲಿಯಬಹುದು, ನಿಜವಾಗಿಯೂ ಪಶ್ಚಾತ್ತಾಪ ಪಡಬಹುದು ಮತ್ತು ಅದನ್ನೂ ಮೀರಿ ಹೋಗಲು ದೇವರ ಕೃಪೆಯನ್ನು ಮಾತ್ರ ಸ್ವೀಕರಿಸಬಹುದು.
ನಮ್ಮ ಭೂತಕಾಲವನ್ನು/ಗತಿಸಿಹೋದ ಘಟನೆಗಳನ್ನು ಅಳಿಸಿಹಾಕುವುದು ದೇವರ ಕೃಪೆ ಆಗಿದೆ ; ಮತ್ತು ನಮ್ಮ ಭವಿಷ್ಯವನ್ನು ಮರುರೂಪಿಸುವುದು ಕೂಡ ದೇವರ ಕೃಪೆಯೇ ಆಗಿದೆ.
”ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು(ನಮ್ಮ ಹಳೆಯ ಮಾರ್ಗಗಳನ್ನು ತ್ಯಜಿಸುವುದು) ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು….” (ರೋಮ 6:4)
March 31
Now to him who is able to do immeasurably more than all we ask or imagine, according to his power that is at work within us, to him be glory