ನೀವು ತೆಗೆದುಕೊಳ್ಳಬೇಕಾದ ನಿರ್ಧಾರಗಳಿಗೆ ದೇವರಿಂದ ಜ್ಞಾನವನ್ನು ಪಡೆದುಕೊಳ್ಳುವುದು ನಿಷ್ಪ್ರಯೋಜಕವಾದ ಅನ್ವೇಷಣೆಯಲ್ಲ.
ನಿಮ್ಮ ನಿರ್ಧಾರದ ಬಗ್ಗೆ ದೇವರು ಏನು ಹೇಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬೈಬಲ್ ಪವಿತ್ರಗ್ರಂಥವನ್ನು ಅಧ್ಯಯನ ಮಾಡಬೇಕಾಗುತ್ತದೆ.
ಜ್ಞಾನವೆಂದರೆ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ವಿವೇಚಿಸುವ/ಗ್ರಹಿಸುವ ಸಾಮರ್ಥ್ಯ. ಇದು ನಮಗೆ ಸರಿಯಾಗಿ ಆಯ್ಕೆ ಮಾಡುವ ಅಥವಾ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುವ ಒಂದು ಕೊಡುಗೆಯಾಗಿದೆ. ತಿಳುವಳಿಕೆಯು ಶಕ್ತಿಯಾಗಿದ್ದರೆ, ಜ್ಞಾನವು ಆ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂಥದ್ದಾಗಿದೆ – ತಿಳುವಳಿಕೆಯ ಪ್ರಾಯೋಗಿಕ ಅನ್ವಯಿಸುವಿಕೆ ಅಥವಾ ನಮ್ಮ ದೈನಂದಿನ ಜೀವನದಲ್ಲಿ ಆ ತಿಳುವಳಿಕೆಯನ್ನು ಅನ್ವಯಿಸುವ ಸಾಮರ್ಥ್ಯವಾಗಿದೆ.
ನಾವು ವಿದ್ಯಾವಂತರಾಗಿರಬಹುದು ಅಥವಾ ಬುದ್ಧಿವಂತರಾಗಿರಬಹುದು, ಆದರೆ ಜ್ಞಾನವಿಲ್ಲದಿದ್ದರೆ, ನಮ್ಮ ಶಿಕ್ಷಣ ಅಥವಾ ಬುದ್ಧಿವಂತಿಕೆ ವ್ಯರ್ಥವಾಗಬಹುದು. ಒಬ್ಬ ಬುದ್ದಿವಂತ ವ್ಯಕ್ತಿಯು ಹೆಚ್ಚು ಖ್ಯಾತಿ, ಹಣ ಮತ್ತು ಅದೃಷ್ಟವನ್ನು ಗಳಿಸಬಹುದು, ಆದರೆ ಜ್ಞಾನವಂತನು ಹೆಚ್ಚು ಸ್ನೇಹಿತರು, ಗೌರವ ಮತ್ತು ದೇವರ ಸಹಾಯವನ್ನು ಗಳಿಸುತ್ತಾನೆ.
ಜನರಿಂದ ಪಡೆಯುವ ಜ್ಞಾನ ಮತ್ತು ದೇವರಿಂದ ಪಡೆಯುವ ಜ್ಞಾನ ಎರಡೂ ಇದೆ. ಮೊದಲನೆಯದು ವಾಕ್ಚಾತುರ್ಯದಿಂದ ತುಂಬಿರಬಹುದು ಆದರೆ ವಿಷಯದಲ್ಲಿ ಕಡಿಮೆ ಇರುತ್ತದೆ, ಆದರೆ ಎರಡನೆಯದು ಕೇಳುವುದಕ್ಕೆ ಸುಂದರವಾಗಿಲ್ಲದಂತೆ ಕಾಣಬಹುದು ಆದರೆ ಸಂಪೂರ್ಣ ಶಕ್ತಿಯಿಂದ ತುಂಬಿರುವಂಥದ್ದಾಗಿದೆ.
ದೇವರ ಜ್ಞಾನವು; ತಿಳುವಳಿಕೆಯನ್ನು ಅನ್ವಯಿಸಿಕೊಳ್ಳಲು ನಮಗೆ ಸಹಾಯ ಮಾಡುವ ದೇವರ ಆಶೀರ್ವಾದವಾಗಿದೆ.
ಈ “ದೇವರ ಜ್ಞಾನವು” ಪ್ರಪಂಚದಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಯಾವುದಕ್ಕಿಂತಲೂ ಭಿನ್ನವಾದುದ್ದಾಗಿದೆ. ಇದು ದೇವರಿಂದ ಮಾತ್ರವೇ ಬರುತ್ತದೆ, ಆದರೆ ದೇವರಲ್ಲಿ ಅವರ ಜ್ಞಾನಕ್ಕಾಗಿ ನೀವು ಕೇಳಬಹುದು/ವಿಜ್ಞಾಪಿಸಬಹುದು.
ಪವಿತ್ರ ಬೈಬಲ್ ನಲ್ಲಿರುವ ದೇವರ ವಾಕ್ಯವನ್ನು ಓದುವುದರಲ್ಲಿ ಮತ್ತು ಕಲಿಯುವುದರಲ್ಲಿ ತಾಳ್ಮೆಯಿಂದಿರಿ. ಪವಿತ್ರಗ್ರಂಥದ ವಾಕ್ಯಗಳು ಸೂಚನೆಗಳು, ಎಚ್ಚರಿಕೆಗಳು ಮತ್ತು ನಾವು ಈ ಲೋಕದಲ್ಲಿ ಹೇಗೆ ಜೀವಿಸಬೇಕು ಮತ್ತು ನಡೆಯಬೇಕು ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಒಳಗೊಂಡಿವೆ. ದೇವರ ವಾಕ್ಯವನ್ನು ನೀವು ಎಷ್ಟು ಹೆಚ್ಚು ತಿಳಿದಿರುತ್ತೀರೋ ಅಷ್ಟು ಹೆಚ್ಚಾಗಿ ನೀವು ಜ್ಞಾನವುಳ್ಳವರಾಗುತ್ತೀರಿ.
”ಜ್ಞಾನವನ್ನು ಕಂಡು ಕೊಳ್ಳುವವನೂ(ಕೌಶಲ್ಯಪೂರ್ಣ ಮತ್ತು ದೈವಭಕ್ತ) ವಿವೇಕವನ್ನು(ದೇವರ ವಾಕ್ಯ ಮತ್ತು ಜೀವನದ ಅನುಭವಗಳಿಂದ ಕಲಿಯುವುದು) ಸಂಪಾದಿಸಿಕೊಳ್ಳುವವನೂ ಧನ್ಯನು(ಆಶೀರ್ವದಿತ, ಅದೃಷ್ಟಶಾಲಿ ಎಂದು ಪರಿಗಣಿಸಲಾಗುವ, ಮೆಚ್ಚುಗೆ ಪಡೆಯುವ). (ಜ್ಞಾನೋಕ್ತಿ 3:13)
February 23
And let us consider how we may spur one another on toward love and good deeds. Let us not give up meeting together, as some are in the habit of