ನಾವು ನಮ್ಮ ಆಯ್ಕೆಗಳನ್ನು ವಿಶ್ವಾಸಾರ್ಹವಲ್ಲದ ಅಧಿಕಾರಿಗಳ ಮೇಲೆ, ಹಾಗು ಸಂಸ್ಕೃತಿ, ಸಂಪ್ರದಾಯ, ಕಾರಣಗಳು, ಭಾವನೆಗಳು ಮತ್ತು ಈ ಲೋಕ ನಮಗೆ ಏನು ಹೇಳುತ್ತದೆ ಎಂಬುದರ ಮೇಲೆ ಆಧರಿಸಿರುವುದರಿಂದ ನಮಗೆ ಅನೇಕ ತೊಂದರೆಗಳು ಸಂಭವಿಸುತ್ತವೆ.
ಅತ್ಯುನ್ನತ ನಡತೆಯ ಆಯ್ಕೆಗಳು ನಿಮ್ಮ ಬದ್ಧತೆಗಳಿಗೆ ಸತ್ಯ ಮತ್ತು ನಂಬಿಗಸ್ತಿಕೆಯನ್ನು ಆಧರಿಸಿವೆ – ಸರಿಯಾದ ಆಯ್ಕೆಗಳನ್ನು ಮಾಡಲು, ಒಳ್ಳೆಯ ಆಯ್ಕೆಗಳನ್ನು ಮಾಡಲು, ದೇವರು ಗೌರವಿಸುವ ಆಯ್ಕೆಗಳನ್ನು ಧೈರ್ಯ ಮಾಡಿ.
ನಮ್ಮ ಜೀವನದಲ್ಲಿ ಆಯ್ಕೆಗಳನ್ನು ಮಾಡಲು ದೇವರ ವಾಕ್ಯವು ಆಳವಾದ ಜ್ಞಾನವನ್ನು ಒದಗಿಸುತ್ತದೆ.
ಮಹತ್ವದ ನಿರ್ಧಾರಗಳನ್ನು ಎದುರಿಸುವಾಗ ದೇವರ ಮಾರ್ಗದರ್ಶನವನ್ನು ಅವಲಂಬಿಸಲು ಪವಿತ್ರಗ್ರಂಥದ ಸಲಹೆಯನ್ನು ನೆನಪಿಡಿ: ”ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.”
ನಿಮ್ಮ ಹೃದಯದ ಸುತ್ತಲೂ ಸುತ್ತಲಾಗಿರುವ ಸತ್ಯದ ಬಲದಿಂದ ನೀವು ಮುಂದುವರಿಯಬೇಕು(ದೃಢವಾಗಿ ನಂಬಿದವುಗಳಲ್ಲಿ ನೆಲೆಯಾಗಿರಬೇಕು), ಈ ಎಲ್ಲ ವಿಷಯಗಳನ್ನುನಿಮಗೆ ನಿಜವಾಗಿಯೂ ಕಲಿಸಿದವನು ಆತನೆಂದು(ದೇವರು) ದೇವರಿಂದ ಭರವಸೆ ಪಡೆಯಲಾಗಿದೆ.
ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸುತ್ತೇನೆ.
”ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರದಿಂದ ಬಿತ್ತುವವನು ಶರೀರದಿಂದ ನಾಶನವನ್ನು ಕೊಯ್ಯುವನು. ಆದರೆ ಆತ್ಮನಿಂದ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು. ಒಳ್ಳೆದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.” (ಗಲಾತ್ಯ 6:7-9)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good