ನಮಗೆ ಎದುರಾಗುವ ಪರೀಕ್ಷೆಗಳ ಮಧ್ಯೆ ನಾವು ದೇವರನ್ನು ನಿರೀಕ್ಷಿಸುತ್ತಾ ಇದ್ದಾಗ, ದೇವರು ಇದ್ದಕ್ಕಿದ್ದಂತೆ ಮಹತ್ವದ ತಿರುವುಗಳನ್ನು ನೀಡುತ್ತಾರೆ.
ನಾವು ಹೇಗೆ ಕಾಯುತ್ತೇವೆ ಎಂಬುದು ನಾವು ಎಷ್ಟು ಸಮಯ ಕಾಯುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ – ದೇವರಲ್ಲಿನ ವಿಶ್ವಾಸವು, ನಮ್ಮ ಶ್ರೇಷ್ಠತೆಗೆ ನಮ್ಮನ್ನು ಮುನ್ನಡೆಸುವ ಮಿಶ್ರಣದ ಅಂತಿಮ ಅಂಶವಾಗಿದೆ.
ಕರ್ತನಲ್ಲಿ ಶಾಂತವಾಗಿರು
ಮೌನವಾಗಿದ್ದು ಆತನಿಗಾಗಿ ಎದುರುನೋಡು
ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
ಕೋಪವನ್ನು ನಿಲ್ಲಿಸು; ಉರಿಯನ್ನು ಬಿಟ್ಟುಬಿಡು;
ಹೇಗಾದರೂ ಕೇಡುಮಾಡದ ಹಾಗೆ ಕೋಪಿಸಿಕೊಳ್ಳಬೇಡ.
ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು;
ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು.
ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆಯನ್ನು ಲಕ್ಷಿಸಿದನು.
ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ;
ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು
ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು. ( ಯೆಶಾಯ 30:18)
March 31
Now to him who is able to do immeasurably more than all we ask or imagine, according to his power that is at work within us, to him be glory