ನೀವು ಮಾಡಬಹುದಾದ ಎಲ್ಲವನ್ನೂ ಮಾಡಿದ ನಂತರ, ಕರ್ತನನ್ನು ನಿರೀಕ್ಷಿಸಿ.
ದೇವದಲ್ಲಿ ಭರವಸೆಯಿಡಿ ಮತ್ತು ಅವರಿಗೆ ನಿಮ್ಮ ಸ್ತುತಿಯರ್ಪಣೆಯು ಎಂದಿಗೂ ನಿಲ್ಲದಿರಲಿ.
ಅಕಾಲಿಕವಾಗಿ ಯಾವುದರಿಂದಲೂ ಹೊರಬರಲು ಪ್ರಯತ್ನಿಸಬೇಡಿ – ಅದು ತನ್ನ ಕೆಲಸವನ್ನು ತಾನು ಮಾಡಲಿ ಇದರಿಂದ ನೀವು ಪ್ರಬುದ್ಧರಾಗುತ್ತೀರಿ ಮತ್ತು ಚೆನ್ನಾಗಿ ಅಭಿವೃದ್ಧಿ ಹೊಂದುತ್ತೀರಿ.
ಕೆಲವು ಜನರು ತಿಳಿದುಕೊಂಡಿರುವಂತೆ, ಪ್ರಭುವು ತಾನು ವಾಗ್ದಾನ ಮಾಡಿದ್ದನ್ನು ತಡವಾಗಿ ನೆರವೇರಿಸುವುದಿಲ್ಲ. ದೇವರು ನಿಮ್ಮ ವಿಷಯದಲ್ಲಿ ಇನ್ನೂ ತಾಳ್ಮೆಯಿಂದಿದ್ದಾನಷ್ಟೆ. ಯಾವ ವ್ಯಕ್ತಿಯೂ ಕಳೆದುಹೋಗಬಾರದೆಂಬುದು ದೇವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯಗಳನ್ನು ಪರಿವರ್ತಿಸಿಕೊಂಡು, ಪಾಪ ಮಾಡುವುದನ್ನು ನಿಲ್ಲಿಸಬೇಕೆಂಬುದು ದೇವರ ಅಪೇಕ್ಷೆ.
ಎಲ್ಲದರ ಮೂಲಕ ನಾನು ಕಲಿತದ್ದು ಇಲ್ಲಿದೆ
ಬಿಟ್ಟುಕೊಡಬೇಡಿ; ತಾಳ್ಮೆ ಕಳೆದುಕೊಳ್ಳಬೇಡಿ
ಕರ್ತನೊಂದಿಗೆ ಒಂದಾಗಿ ಬೆಸೆದುಕೊಂಡಿರಿ
ನಿರ್ಭಯವಾಗಿರಿ ಮತ್ತು ಧೈರ್ಯಶಾಲಿಯಾಗಿರಿ ಮತ್ತು ಎಂದಿಗೂ ನೀರಿಕ್ಷೆ ಕಳೆದುಕೊಳ್ಳಬೇಡಿ.
ಹೌದು, ಕರ್ತನಿಗಾಗಿ ಕಾದಿರಿ – ಏಕೆಂದರೆ ಆತನು ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ.
”ಆ ತಾಳ್ಮೆಯು ಸಿದ್ದಿಗೆ ಬಂದಾಗ ನೀವು ಸಂಪೂರ್ಣರೂ ಸಿದ್ಧವಾದವರೂ ಯಾವದರಲ್ಲಿಯೂ ಕಡಿಮೆಯಿಲ್ಲದವರೂ ಆಗಿರುವಿರಿ….” (ಯಾಕೋಬ 1:4)
March 31
Now to him who is able to do immeasurably more than all we ask or imagine, according to his power that is at work within us, to him be glory