ಆಧ್ಯಾತ್ಮಿಕ ಹಗೆತನದ ಲೋಕದಲ್ಲಿ ಕ್ರೈಸ್ತರು ಜೀವಿಸುತ್ತಿದ್ದಾರೆ, ಅಲ್ಲಿ ನಮ್ಮ ವಿಶ್ವಾಸವನ್ನು ರಾಜಿ ಮಾಡಿಕೊಳ್ಳುವ ಪ್ರಲೋಭನೆಯು ಪ್ರತಿದಿನವೂ ನಮ್ಮೊಂದಿಗೇ ಇರುತ್ತದೆ.
ರಾಜಿ ಮಾಡಿಕೊಂಡ ಜೀವನದೊಂದಿಗೆ ಬದುಕುವುದಕ್ಕಿಂತ ಪ್ರಾಮಾಣಿಕತೆ/ಯಥಾರ್ಥತೆಯಿಂದ ಸಾಯುವುದು ಬಹಳ ಉತ್ತಮ – ಭೂಮಿಯ ಮೇಲಿನ ಯಾವುದೂ ನರಕಕ್ಕೆ ಹೋಗಲು ಯೋಗ್ಯವಲ್ಲ.
ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡುತ್ತಿರುವವನು ಬಯಲಿಗೆ ಬರುವನು.
ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ ತನ್ನ ಯಥಾರ್ಥತೆಯಲ್ಲಿ ನಡೆಯುವ ದರಿದ್ರನು ಶ್ರೇಷ್ಠನು.
ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
ಸುಳ್ಳಾಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.
ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿಸಲ್ಪಡುವರು.
ಒಳ್ಳೇಮನಸ್ಸಾಕ್ಷಿ ಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು.
”ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವುಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು…”(1 ಪೂರ್ವಕಾಲದ ಇತಿಹಾಸ 29:17)
February 23
And let us consider how we may spur one another on toward love and good deeds. Let us not give up meeting together, as some are in the habit of