ಸತ್ಯವನ್ನು ಸುಳ್ಳಿನಿಂದ ಮಾರ್ಪಡಿಸಲಾಗಿರುವ ಮತ್ತು ಸುಳ್ಳುಗಳೇ ಸತ್ಯವಾಗಿರುವಂಥ ಲೋಕದಲ್ಲಿ ಇಂದು ನಾವು ಜೀವಿಸುತ್ತಿದ್ದೇವೆ ; ಭಾವನೆಗಳು ಸತ್ಯವನ್ನು ಬದಲಿಸಿವೆ ಮತ್ತು ದೇವರ ಸಾಮ್ರಾಜ್ಯಕ್ಕೆ ಸೇರಿದ ಸ್ಥಳಗಳನ್ನು ಆಕ್ರಮಿಸಲು ಅಥವಾ ಮುತ್ತಿಗೆ ಹಾಕಲು ನಾವು ಸುಳ್ಳಿನ ತಂದೆಗೆ ಅನುಮತಿಸಿದ್ದೇವೆ.
ದೇವರ ವಾಕ್ಯದ ಮೇಲೆ ದೃಢವಾದ ನಿಲುವು ತೆಗೆದುಕೊಳ್ಳಿ ಏಕೆಂದರೆ ದೇವರ ವಾಕ್ಯ ಮಾತ್ರವೇ ಸತ್ಯ, ಮತ್ತು ಅದು ಎಂದಿಗೂ ವ್ಯರ್ಥವಾಗಿ ಹಿಂತಿರುಗುವುದಿಲ್ಲ!
ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ.
ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರುವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸಬೇಡ.
ನಿನ್ನಿಂದ ಎರಡನ್ನು ಕೇಳಿಕೊಂಡಿದ್ದೇನೆ; ನಾನು ಸಾಯುವದಕ್ಕಿಂತ ಮುಂಚೆ ಅವುಗಳನ್ನು ಕೊಡುವದಕ್ಕೆ ಹಿಂತೆಗೆಯಬೇಡ;
ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;
ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ–ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
”ದೇವರ ಮಾರ್ಗವಾದರೋ ಸಂಪೂರ್ಣವಾದದ್ದು; ಕರ್ತನ ವಾಕ್ಯವು ಪುಟಕ್ಕೆ ಹಾಕಿದ್ದಾಗಿದೆ; ಆತನು ತನ್ನಲ್ಲಿ ಭರವಸವಿಟ್ಟವರೆಲ್ಲರಿಗೆ ಗುರಾಣಿಯಾಗಿದ್ದಾನೆ.”….. (ಕೀರ್ತನೆ 18:30)
March 31
Now to him who is able to do immeasurably more than all we ask or imagine, according to his power that is at work within us, to him be glory