ಬದಲಾವಣೆಗೆ ಮತ್ತು ಏಳಿಗೆಗೆ ಖಚಿತವಾಗಿ ಪ್ರೋತ್ಸಾಹಿಸುವ/ಉತ್ತೇಜಿಸುವ ಮೂಲವಾಗಿರುವ ಒಂದು ಆಶ್ರಯ ಸ್ಥಳವೆಂದರೆ ದೇವರ ವಾಕ್ಯವಾಗಿದೆ.
ಬದಲಾವಣೆಯ ಒಳ್ಳೆಯತನದ ಬಗ್ಗೆ ಮತ್ತು ಪ್ರತಿ ಹಂತದಲ್ಲೂ ದೇವರ ಉಪಸ್ಥಿತಿಯ ಬಗ್ಗೆ ಪವಿತ್ರಗ್ರಂಥವು ತುಂಬಾ ತಿಳಿಸುತ್ತದೆ
ಆತನ ವಾಕ್ಯವನ್ನು ನೋಡಿ, ಮತ್ತು ಆತನು ಅನಿಶ್ಚಿತತೆಯ ಸಮಯದಲ್ಲಿ ಮಾರ್ಗದರ್ಶನ ನೀಡುತ್ತಾನೆ.
ಯಾವಾತನು ಸಮುದ್ರದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ.
ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ; ಇಲ್ಲವೆ ಹಳೇ ಸಂಗತಿಗಳನ್ನು ಯೋಚಿಸಬೇಡಿರಿ.
ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು, ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡುವೆನು.
ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು.
ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ.
ದೇವರು ನಿಮ್ಮೊಂದಿಗೆ ಈ ಜೀವನ ಪಯಣವನ್ನು ನಡೆಸುತ್ತಿದ್ದಾರೆ – ಅವರ ಉಪಸ್ಥಿತಿ/ಪ್ರಸನ್ನತೆ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ, ನಿಮಗೆ ಮಾರ್ಗದರ್ಶನ ನೀಡುತ್ತದೆ.
”ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು…..”( 2 ಕೊರಿಂಥ 5:17)
March 31
Now to him who is able to do immeasurably more than all we ask or imagine, according to his power that is at work within us, to him be glory