ದೇವರ ಸಹಾಯವು/ಅನುಗ್ರಹವು ಅಸೂಯೆ ಮತ್ತು ಟೀಕೆಗಳನ್ನು ತರುತ್ತದೆ
ಈ ಲೋಕದಲ್ಲಿ ನೀವು ಜನರ ಗಮನಕ್ಕೆ ಬರುವಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದಾಗ, ಅವರು ನಿಮ್ಮ ಬಗ್ಗೆ ಮಾತನಾಡುತ್ತಾರೆ ಮತ್ತು ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಮತ್ತು ಪ್ರಾಮಾಣಿಕರಾಗಿದ್ದರೂ ನಿಮ್ಮನ್ನು ಟೀಕಿಸುತ್ತಾರೆ.
ಆಕ್ರಮಣಕಾರಿಯಾಗಬೇಡಿ(ಸಿಟ್ಟುಮಾಡಿಕೊಳ್ಳಬೇಡಿ) ಅಥವಾ ವಿರೋಧಿಸಬೇಡಿ(ಅಸಮಾಧಾನ ವ್ಯಕ್ತಪಡಿಸಬೇಡಿ)
ದೇವರು ನಿಮಗಾಗಿ ಏನನ್ನು ಇಟ್ಟಿರುವರೋ ಅದನ್ನು ಮನುಷ್ಯನು ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ
ಆದ್ದರಿಂದ, ನೀವು ಹೆಚ್ಚು ಸಹಾಯವನ್ನು ಹೊಂದಿರುವವರಾಗಿದ್ದಾಗ, ತಾಳ್ಮೆಯಿಂದಿರಿ ಮತ್ತು ಅವರ ಅಲ್ಪ(ಲಘುವಾದ) ಅಸೂಯೆ ಮತ್ತು ಟೀಕೆಗಳನ್ನು ಸಹಿಸಿಕೊಳ್ಳಿ, ಏಕೆಂದರೆ ನಿಮಗೆ ಕೆಡುಕು ಮಾಡಿದವರು ಹೇಗಾದರೂ ಬತ್ತಿ(ಒಣಗಿ) ಹೋಗುತ್ತಾರೆ ಎಂದು ಕರ್ತನು ವಾಗ್ದಾನ ಮಾಡಿದ್ದಾರೆ.
ದುರ್ಮಾರ್ಗಿಗಳಿಗೋಸ್ಕರ ಕೋಪಿಸಿಕೊಳ್ಳಬೇಡ; ಇಲ್ಲವೆ ನೀನು ಅಕ್ರಮ ಮಾಡುವವರಿಗೆ ವಿರೋಧವಾಗಿ ಹೊಟ್ಟೇಕಿಚ್ಚು ಪಡಬೇಡ. ಅವರು ಹುಲ್ಲಿನ ಹಾಗೆ ಬೇಗ ಕೊಯ್ಯಲ್ಪಟ್ಟು ಹಸುರಾದ ಸೊಪ್ಪಿನ ಹಾಗೆ ಬಾಡಿಹೋಗುವರು. (ಕೀರ್ತನೆ 37:1-2)
March 31
Now to him who is able to do immeasurably more than all we ask or imagine, according to his power that is at work within us, to him be glory