ನಮಗೆ ಎಷ್ಟೇ ಸಹಾಯ ಅಥವಾ ದಯೆ ಇದ್ದರೂ ನಮಗೆಲ್ಲರಿಗೂ ನಿರ್ದೇಶನ ಬೇಕು.
ದೇವರ ವಾಕ್ಯದ ಸತ್ಯ ಮತ್ತು ಉತ್ತಮ ಜೀವನಕ್ಕಾಗಿ ಇರುವ ಅದರ ತತ್ವಗಳು ಮನುಷ್ಯನ ಇಂದ್ರಿಯಗಳಿಗೆ ಇಷ್ಟವಾಗದಿರಬಹುದು, ಆದರೆ, ನಮ್ಮ ಇಂದ್ರಿಯಗಳು ಹೇಳುವುದನ್ನು ನಾವು ಮಾಡಿದರೆ, ಯಾವುದೇ ಗೊತ್ತು ಗುರಿ ಇಲ್ಲದೆ ನಾವು ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಜಿಗಿಯುತ್ತೇವೆ, ಮತ್ತು ನಮ್ಮ ಕರೆ ಮತ್ತು ಆಶೀರ್ವಾದವನ್ನು ಕಳೆದುಕೊಳ್ಳುತ್ತೇವೆ.
ಒಳ್ಳೇ ಮನುಷ್ಯನ ಹೆಜ್ಜೆಗಳು ಕರ್ತನಿಂದ ದೃಢವಾಗುತ್ತವೆ;
ಆತನು ಅವನ ಮಾರ್ಗದಲ್ಲಿ ಸಂತೋಷ ಪಡುತ್ತಾನೆ.
ಅವನು ಬಿದ್ದು ಹೋದಾಗ್ಯೂ ಪೂರ್ಣ ವಾಗಿ ಕೆಡವಲ್ಪಡುವದಿಲ್ಲ.
ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ.
ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ;
ಆದರೆ ನೀತಿವಂತನು ಕೈಬಿಡಲ್ಪಟ್ಟದ್ದನ್ನೂ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆಬೇಡುವದನ್ನೂ ನಾನು ನೋಡಲಿಲ್ಲ.
”ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ–ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ…..”(ಯೆಶಾಯ 48:17)
December 26
See to it that you do not refuse him who speaks. If they did not escape when they refused him who warned them on earth, how much less will we,