ನಮ್ಮ ಜೀವನದಲ್ಲಿ ಆ ಕೆಲವು ಸಂಬಂಧಗಳು ನಮ್ಮ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ನಮ್ಮ ಜೀವನದಲ್ಲಿ ದೇವರ ಯೋಜನೆಗಳು ಮತ್ತು ಉದ್ದೇಶಗಳನ್ನು ಸಕ್ರಿಯಗೊಳಿಸುತ್ತದೆ.
ಈ ದೈವಿಕ ಸಂಬಂಧಗಳ ಘಾತೀಯ (ಅತಿ ವೇಗವಾಗಿ ಬೆಳೆಯುತ್ತಿರುವ) ಶಕ್ತಿಯಿಂದಾಗಿ ಸಾಧಾರಣವಾಗಿ ನೀವು ಸಾಧಿಸಲು ಹಲವು ವರ್ಷಗಳನ್ನು ತೆಗೆದುಕೊಂಡಿರುವುದಕ್ಕಿಂತ ಅತೀ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅವುಗಳನ್ನು ಗುರುತಿಸಿ ಮತ್ತು ಕಾಪಾಡಿ ಅಥವಾ ಪಾಲಿಸಿ.
ಸಿಹಿ ಸ್ನೇಹಗಳು ಮನಸ್ಸನ್ನು ಚೇತನಗೊಳಿಸುತ್ತವೆ ಮತ್ತು ನಮ್ಮ ಹೃದಯಗಳನ್ನು ಆನಂದದಿಂದ ಜಾಗೃತಗೊಳಿಸುತ್ತವೆ, ಏಕೆಂದರೆ ಒಳ್ಳೆಯ ಸ್ನೇಹಿತರು ದೇವರ ಪ್ರಸನ್ನತೆಯ ಸುವಾಸನೆಯ ಧೂಪವನ್ನು ನೀಡುವ ಅಭಿಷೇಕದ ಎಣ್ಣೆಯಂತೆ.
ಒಳ್ಳೆಯ ಸ್ನೇಹವು ಚಿನ್ನಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಮತ್ತು ಕಷ್ಟಕರವಾದ ಪರೀಕ್ಷೆಗಳ/ಸಮಯಗಳಲ್ಲಿ ವಿಶ್ವಾಸದಿಂದ ತಾಳ್ಮೆಯಿಂದ ಇರಲು ನಮಗೆ ಸಹಾಯ ಮಾಡುತ್ತದೆ.
ಹೇಗಾದರೂ, ದೇವರಲ್ಲಿ ವಿಶ್ವಾಸದೊಂದಿಗೆ ಬಂಧಿಸಲ್ಪಡದ ಸ್ನೇಹವು ನಮಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ನಮ್ಮ ಹೃದಯವನ್ನು ಕೆಡಿಸಬಹುದು.
ಸ್ನೇಹವು ನಮ್ಮ ಜೀವನದಲ್ಲಿ ಎಷ್ಟು ಪ್ರಯೋಜನಕಾರಿಯಾಗುತ್ತದೆಯೋ ಹಾಗೆಯೇ ಅವುಗಳು ನಮ್ಮ ಸದ್ಗುಣಗಳಿಗೆ ವಿನಾಶಕಾರಿಯೂ ಆಗಬಹುದು
ಆದ್ದರಿಂದ ನಾವು ಯಾರೊಂದಿಗೆ ಸ್ನೇಹಿತರಾಗಿದ್ದೇವೆ ಮತ್ತು ಇತರರೊಂದಿಗೆ ಹೇಗೆ ಸಮಯ ಕಳೆಯುತ್ತೇವೆ ಎಂಬುದರ ಕುರಿತು ನಾವು ವಿವೇಚನೆ ಮತ್ತು ಪ್ರಾಮಾಣಿಕತೆಯಿಂದ ಜೀವಿಸಬೇಕು
ದೇವರು ಮತ್ತು ಆತನ ಪವಿತ್ರ ವಾಕ್ಯದಿಂದ ಒಬ್ಬರನ್ನೊಬ್ಬರು ಪ್ರೀತಿಸಬೇಕು ಮತ್ತು ಇತರರನ್ನು ದಯೆ ಮತ್ತು ನಮ್ರತೆಯಿಂದ ನಡೆಸಿಕೊಳ್ಳಬೇಕು ಎಂಬುದಕ್ಕಾಗಿ ನಾವು ಕರೆಯಲ್ಪತ್ತಿದ್ದೇವೆ. ಆದರೆ ಇದರರ್ಥ ನಮ್ಮ ಮೇಲೆ ಭ್ರಷ್ಟ ಅಥವಾ ಕೆಟ್ಟ ಪ್ರಭಾವ ಬೀರುವವರೊಂದಿಗೆ ಸಮಯ ಕಳೆಯಬೇಕು ಎಂಬುದಾಗಿ ಅಲ್ಲ.
ನಮ್ಮಂತೆಯೇ ನಾವು ಅವರನ್ನು ಪ್ರೀತಿಸುತ್ತಾ ಅವರ ಕಾರ್ಯಗಳನ್ನು ಗದರಿಸುವಲ್ಲಿ(rebuke) ನಾವು ಪ್ರಾಮಾಣಿಕವಾಗಿರಬಹುದು.
”ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ.”(ಜ್ಞಾನೋಕ್ತಿ 27:9)
March 31
Now to him who is able to do immeasurably more than all we ask or imagine, according to his power that is at work within us, to him be glory