ಕ್ರೈಸ್ತರಾದ ನಾವು ಏಕಾಂಗಿಯಾಗಿ/ತಮ್ಮ ಸ್ವಂತ ಶಕ್ತಿಯ ಮೇಲೆ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ.
ಆದರೂ, ನಮ್ಮ ಜೀವನದ ಪ್ರಮುಖ ಕ್ಷೇತ್ರಗಳು ಅಪಾಯದಲ್ಲಿದ್ದಾಗ, ದೇವರನ್ನು ಮಾತ್ರ ಅವಲಂಬಿಸಿಕೊಳ್ಳುವುದು ಒಳಿತು ಎಂದು ಹೇಳುವುದು ಮಾಡುವುದಕ್ಕಿಂತ ಸುಲಭದ್ದಾಗಿದೆ; ಮತ್ತು ಹಾಗಾಗಿ ನಮ್ಮೊಂದಿಗೆ ಮಾತನಾಡುವ ಅವಕಾಶವನ್ನೂ ನಾವು ದೇವರಿಗೆ ನೀಡುವುದಿಲ್ಲ.
ನಾವು ನಮ್ಮ ಹೃದಯ ಮತ್ತು ಮನಸ್ಸನ್ನು ಕಠಿಣಗೊಳಿಸಿಕೊಳ್ಳುತ್ತೇವೆ, ಅದು ದೇವರ ಪ್ರೀತಿಗೂ ಕೂಡ ನಮ್ಮನ್ನು ತಿರುಗಿಬೀಳುವಂತೆ ಮಾಡುತ್ತದೆ, ಮತ್ತು ನಾವು ಏನು ಮಾಡಬೇಕೆಂದುಕೊಳ್ಳುತ್ತೇವೋ ಅದನ್ನೇ ಮಾಡುತ್ತೇವೆ ಹೊರೆತು ನಾವು ಏನು ಮಾಡಬೇಕೆಂದು ದೇವರು ಬಯಸಿದ್ದಾರೋ ಅದನ್ನು ಮಾಡುವುದಿಲ್ಲ.
ನನ್ನನ್ನು ನೀವು–ಕರ್ತನೇ, ಕರ್ತನೇ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವದು ಯಾಕೆ?
ನೀವು ಮುಚ್ಚಲ್ಪಟ್ಟಿರುವ ಮನಸ್ಸನ್ನು ಹೊಂದಿರುವಾಗ, ಖಂಡಿತವಾಗಿ ದೇವರು ನಿಮ್ಮೊಂದಿಗೆ ಮಾತನಾಡಲು ಹೋಗುವುದಿಲ್ಲ.
ನಾವು ಆ ಹೆಮ್ಮೆಯ ಮನಸ್ಥಿತಿಯನ್ನು ಬಿಟ್ಟುಬಿಡಬೇಕು ಮತ್ತು ನಮ್ಮ ಸ್ವಂತ ಶಕ್ತಿಯ ಮೇಲೆ ಎಲ್ಲವನ್ನೂ ಲೆಕ್ಕಾಚಾರ ಮಾಡುವುದನ್ನು ನಿಲ್ಲಿಸಬೇಕು – ಇದು ಆತನ ಆಶೀರ್ವಾದವನ್ನು ಪಡೆಯಲು ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆಯುವ ಕೀಲಿಯಾಗಿದೆ
”ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ” (ಕೀರ್ತನೆ 143:10)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good