ಯಶಸ್ಸಿನ ಆಲೋಚನೆಗಳೆಂದರೆ ಸಾಮಾನ್ಯವಾಗಿ ಹಣ, ಪ್ರಭಾವ ಅಥವಾ ಖ್ಯಾತಿಯನ್ನು ಒಳಗೊಂಡಿರುತ್ತವೆ ಎಂದುಕೊಳ್ಳುತ್ತೇವೆ – ಆದರೆ ಇದು ಯಶಸ್ಸಿನ ತಪ್ಪಾದ ವ್ಯಾಖ್ಯಾನ. ಈ ತಪ್ಪು ವ್ಯಾಖ್ಯಾನವು ದೇವರ ಮೇಲಿನ ನಿಮ್ಮ ಪ್ರಭಾವಕ್ಕೆ ಅಡ್ಡಿಯಾಗುತ್ತದೆ, ಆದ್ದರಿಂದ ಜಾಗರೂಕರಾಗಿರಿ. ಸೈತಾನನು ಯಶಸ್ಸಿನ ಈ ತಪ್ಪಾದ ಅರ್ಥಗಳನ್ನು ಅನುಮಾನ, ಭಯ, ಗೊಂದಲ ಮತ್ತು ಅಪನಂಬಿಕೆಯ ಸಾಧನಗಳೊಂದಿಗೆ ಬಳಸಿ ನೀವು ಅದನ್ನು ತೆಗೆದು ಬಿಸಾಡುವಂತೆ ಮಾಡುತ್ತಾನೆ (ಸೋಲನ್ನು ಸ್ವೀಕರಿಸುವಂತೆ ಅಥವಾ ಅದನ್ನು ಬಿಟ್ಟುಬಿಡುವಂತೆ) ಏಕೆಂದರೆ ನೀವು “ಸೋತುಹೋದವನಂತೆ ಭಾವಿಸುತ್ತೀರಿ” ..
ಹೇಗಾದರೂ, ಯಶಸ್ಸಿನ ಸರಿಯಾದ ವ್ಯಾಖ್ಯಾನವು “ವಿಫಲತೆಯ ಕೋಲನ್ನು”ಸೈತಾನನಿಂದ ದೂರವಿರಿಸುತ್ತದೆ.
ಯಶಸ್ಸು ಎಂದರೆ ದೇವರ ವಾಕ್ಯ ಮತ್ತು ಚಿತ್ತಕ್ಕೆ ಪಟ್ಟುಹಿಡಿದು ನಿಂತ ವಿಧೇಯತೆಯಾಗಿದೆ.
ದೇವರು ನಿಮಗೆ ನೀಡಿರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು, ಈ ಭೂಮಿಯ ಮೇಲೆ ನಿಮಗಾಗಿ ದೇವರು ನೀಡಲಾಗಿರುವ ನಿಯೋಜನೆಯನ್ನು (assignment) ಪೂರ್ಣಗೊಳಿಸುವುದೇ ಯಶಸ್ಸಾಗಿದೆ.
ಯಶಸ್ಸು ಒಂದು ಪ್ರಯಾಣವಾಗಿದೆ, ಒಂದು ನಿರ್ಧಿಷ್ಟ ಸ್ಥಾನವಲ್ಲ ಮತ್ತು ಇದು ನಿರಂತರ ನಡೆಯುತ್ತಿರುವ ಒಂದು ಕ್ರಿಯೆಯಾಗಿದೆ.
ಈ ಲೋಕದ ದೃಷ್ಟಿಯಲ್ಲಿ ನೀವು ಸೋತವರಂತೆ ಕಾಣಿಸಬಹುದು ಆದರೆ ದೇವರ ದೃಷ್ಟಿಯಲ್ಲಿ ನಿಮ್ಮ ಉತ್ತಮ ಹೃದಯದ ಸ್ಥಿತಿಯಿಂದಾಗಿ ನೀವು ಗೆಲ್ಲುತ್ತೀರಿ.
ಯಶಸ್ಸನ್ನು ಒಂದು ಕ್ಷಣದಲ್ಲಿ ಅಳೆಯಲಾಗುವುದಿಲ್ಲ, ಇದನ್ನು ಜೀವಮಾನವಿಡೀ ಅಳೆಯಲಾಗುತ್ತದೆ – ನೀವು ಇನ್ನಿಂಗ್ಸ್ ಅನ್ನು ಕಳೆದುಕೊಳ್ಳಬಹುದು ಆದರೆ ಇನ್ನೂ ಪಂದ್ಯವನ್ನು ಗೆಲ್ಲಬಹುದು.
ಈ ಲೋಕದಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿಯು ಪಡೆಯುವ ಸಂಪತ್ತು, ಅಧಿಕಾರ ಮತ್ತು ಜನಪ್ರಿಯತೆಯ ಪ್ರಮಾಣವನ್ನು ಅಳೆಯುವ ಮೂಲಕ ಈ ಜಗತ್ತು ಯಶಸ್ಸನ್ನು ವ್ಯಾಖ್ಯಾನಿಸುತ್ತದೆ.
ಯಶಸ್ಸಿನ ಲೌಕಿಕ ವ್ಯಾಖ್ಯಾನಗಳು ಮೋಸಗೊಳಿಸುವುದಾಗಿದೆ ಮತ್ತು ದುರಂತವಾದುದಾಗಿದೆ ಏಕೆಂದರೆ ಅವು ಕ್ಷಣಿಕ ಮತ್ತು ಹಾದುಹೋಗುವವುಗಳನ್ನು ಕೇಂದ್ರೀಕರಿಸುತ್ತವೆ ಮತ್ತು ನಿತ್ಯವಾದುದನ್ನು (ಚಿರವಾದುದನ್ನು) ಮತ್ತು ಶಾಶ್ವತವಾದದ್ದನ್ನು ನಿರ್ಲಕ್ಷಿಸುತ್ತವೆ.
ಆಧ್ಯಾತ್ಮಿಕವಾದುದು ಮತ್ತು ನಿರಂತರವಾದವುಗಳ ನೆಲೆಗಟ್ಟಿನಲ್ಲಿ ಹಾಗೂ ಪ್ರಭುವಿನೊಂದಿಗೆ ಕೊನೆಗೊಳ್ಳುವ ಶಾಶ್ವತ ಜೀವನ ಮತ್ತು ಆನಂದದ ವಿಷಯಗಳಲ್ಲಿ ಪವಿತ್ರ ಗ್ರಂಥವು ಯಶಸ್ಸನ್ನು ವ್ಯಾಖ್ಯಾನಿಸುತ್ತದೆ.
ಲೌಕಿಕ ಯಶಸ್ಸು ನಮ್ಮ ಬಡ್ತಿ(promtion) ಮತ್ತು ಸಂತೃಪ್ತಿಯ ಮೇಲೆ ಕೇಂದ್ರೀಕೃತವಾಗಿದ್ದರೆ, ಪವಿತ್ರಗ್ರಂಥದ(Biblical) ಯಶಸ್ಸು ದೇವರ ವಿಧೇಯತೆ ಮತ್ತು ಮಹಿಮಾನ್ವಿತತೆಯ ಮೇಲೆ ಕೇಂದ್ರೀಕೃತವಾಗಿದೆ.
ದೇವರಿಗೆ ವಿಧೇಯವಾಗುವುದೇ ಯಶಸ್ಸಾಗಿದೆ, ಅದು ದೇವರ ಆತ್ಮರಿಂದ ಶಕ್ತಿಯುತವಾಗಿದೆ, ದೇವರ ಮೇಲಿನ ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ದೇವರ ಸಾಮ್ರಾಜ್ಯದ ಪ್ರಗತಿಯ ಕಡೆಗೆ ಮಾರ್ಗದರ್ಶಿಸಲ್ಪಡುತ್ತದೆ.
ಪಶ್ಚಾತ್ತಾಪ ಪಟ್ಟು ಯೇಸು ಕ್ರಿಸ್ತನನ್ನು ನಂಬಲು ದೇವರ ಆಜ್ಞೆಯನ್ನು ಪಾಲಿಸುವುದರೊಂದಿಗೆ ಯಶಸ್ಸು ಪ್ರಾರಂಭವಾಗುತ್ತದೆ.
ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ; ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವರೆಂದು ತಿಳಿದಿದ್ದೀರಲ್ಲಾ. ಯಾಕಂದರೆ ನೀವು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿದ್ದೀರಿ.(ಕೊಲೊಸ್ಸೆ 3:23-24)
March 31
Now to him who is able to do immeasurably more than all we ask or imagine, according to his power that is at work within us, to him be glory