ಒಂಟಿತನವನ್ನು ಅನುಭವಿಸಲು ನಾವು ದೈಹಿಕವಾಗಿ ಪ್ರಸ್ತುತವಾಗಿ ಇರಬೇಕಾದ ಅಗತ್ಯವಿಲ್ಲ. ನಾವು ಅಕ್ಷರಶಃ ಇತರರಿಂದ ಸುತ್ತುವರೆದಿರುವಾಗಲೂ ನಮ್ಮಲ್ಲಿ ಅನೇಕರು ನಮ್ಮ ಒಂಟಿತನದ ಕೆಲವು ಸಮಯವನ್ನು ಅನುಭವಿಸಿರಬಹುದು..
ನಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ, ಪ್ರತಿಯೊಬ್ಬರೂ ಒಬ್ಬಂಟಿಯಾಗಿ ಇರುತ್ತಾರೆ ಅಥವಾ ಒಂಟಿತನವನ್ನು ಅನುಭವಿಸುತ್ತಾರೆ..
ನೀವು ದೈಹಿಕವಾಗಿ ಒಂಟಿಯಾಗಿರಬಹುದು ಅಥವಾ ಜನರೊಂದಿಗೆ ಸುತ್ತುವರೆದಿರಬಹುದು, ಆದರೆ ನೀವು ಎಂದಿಗೂ ಒಂಟಿಯಾಗಿರಬೇಕಾಗಿಲ್ಲ – ದೇವರು ಯಾವಾಗಲೂ ನಿಮ್ಮೊಂದಿಗಿದ್ದಾರೆ..!
ಆತನ ವಾಕ್ಯದಲ್ಲಿ ಉತ್ತರವನ್ನು ಈಗಾಗಲೇ ನಮಗೆ ತಿಳಿಸಿರುವ ವಿಷಯಗಳಿಗೆ ನಾವು ಆಗಾಗ್ಗೆ ಪ್ರಶ್ನೆಗಳನ್ನು ಕೇಳುತ್ತೇವೆ..
“ದೇವರೇ? ನೀನು ಇದ್ದೀಯಾ?”
“ಹೌದು, ನಾನು ಇಲ್ಲಿಯೇ ಇದ್ದೇನೆ.”
“ದೇವರೇ, ನಾನು ಏಕಾಂಗಿತನವನ್ನು ಅನುಭವಿಸುತ್ತಿದ್ದೇನೆ.”
“ನೀವು ಒಂಟಿತನವನ್ನು ಅನುಭವಿಸಬಹುದು, ಆದರೆ ನೀವು ಒಬ್ಬಂಟಿಯಾಗಿಲ್ಲ.”
“ದೇವರೇ, ನೀನು ನನ್ನ ಕೈ ಬಿಡುವುದಿಲ್ಲ ತಾನೇ?
“ಪ್ರಿಯ ಮಗುವೇ, ನಾನು ಈಗಾಗಲೇ ನಿನಗೆ ಹೇಳಿದ್ದೇನೆ ಮತ್ತು ನಿಮಗೆ ಭರವಸೆ/ಖಾತರಿ ನೀಡಲು ಅದನ್ನು ನನ್ನ ವಾಕ್ಯದಲ್ಲಿ ಲಿಖಿತಗೊಳಿಸಿದ್ದೇನೆ. ನಾನು ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ ಮತ್ತು ನಿನ್ನನ್ನು ತೊರೆಯುವುದಿಲ್ಲ. ” “ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ಪ್ರೀತಿ ಮಾಡದಿದ್ದಲ್ಲಿ ನಿಮಗಾಗಿ ಸಾಯಲು ನನ್ನ ಮಗ ಯೇಸುವನ್ನು ಕಳುಹಿಸುತ್ತಿದ್ದೇನೆ?”
ನಮ್ಮ ಒಳ್ಳೆಯ ತಂದೆಯಾಗಿ, ಅವರು ಅಲ್ಲಿದ್ದಾರೆ ಮತ್ತು ನಾವು ಒಬ್ಬಂಟಿಯಾಗಿಲ್ಲ ಎಂದು ನಮಗೆ ಎಷ್ಟು ಬಾರಿ ದೇವರ ಭರವಸೆ ಬೇಕಾಗಿದೆ?
ನೀವು ಏಕಾಂಗಿ ಅಥವಾ ಒಂಟಿತನವನ್ನು ಅನುಭವಿಸಿದರೆ, ಇಂದು ದೇವರ ಆಶ್ವಾಸನೆಗಳನ್ನು ನೆನಪಿಸಿಕೊಳ್ಳಿ..
ದೇವರು ಬದಲಾಗುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬುದನ್ನು ನೆನಪಿಡಿ, ಆದ್ದರಿಂದ ಅವರು ಹೇಳಿದಂತೆ ಮಾಡವವರಾಗಿದ್ದರೆ ಎಂದು ನೀವು ಅವರನ್ನು ನಂಬಬಹುದು..
ಪರ್ವತಗಳನ್ನು ಮತ್ತು ಸಾಗರಗಳನ್ನು ಸೃಷ್ಠಿಸಿದ ದೇವರು ನಿಮ್ಮೊಂದಿಗಿದ್ದಾರೆ. ಸೂರ್ಯಾಸ್ತದ ಸೃಷ್ಠಿಕರ್ತನು ನಿಮ್ಮೊಂದಿಗೆ ನಿಜವಾದ ಸಂಬಂಧವನ್ನು ಬಯಸುತ್ತಾರೆ. ಸ್ವಲ್ಪ ಸಮಯ ಕೊಟ್ಟು ಯೋಚಿಸಿ – ನೀವು ಒಬ್ಬಂಟಿಯಾಗಿಲ್ಲ, ಆದರೆ ನಿಮ್ಮ ಪಕ್ಕದಲ್ಲಿ ಇಡೀ ಜಗತ್ತಿನ ದೇವರು ಇದ್ದಾರೆ! ಯಾವುದೇ ಕಷ್ಟದ ಕ್ಷಣದಲ್ಲಿ, ದೇವರು ನಿಮ್ಮೊಂದಿಗಿದ್ದಾರೆ, ಅವರು ನಿಮಗಾಗಿ ಇದ್ದಾರೆ ಮತ್ತು ನಿಮಗೆ ಉತ್ತಮವಾದುದನ್ನು ಅವರು ಬಯಸುತ್ತಾರೆ ಎಂದು ತಿಳಿದುಕೊಳ್ಳುವ ದೃಢ ಭರವಸೆಯನ್ನು ನೀವು ಹೊಂದಿರಬಹುದು.
ದೇವರು ನಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುವಷ್ಟು ದೊಡ್ಡವರಾಗಿದ್ದಾರೆ. ಇನ್ನೂ ಹೆಚ್ಚಾಗಿ, ಅವರು ನಮ್ಮ ಜೀವನದಲ್ಲಿ ಪ್ರತಿ ಸಣ್ಣ ಸಮಸ್ಯೆಯ ಬಗ್ಗೆಯೂ ಕಾಳಜಿ ವಹಿಸುವಷ್ಟು ದೊಡ್ಡವರಾಗಿದ್ದಾರೆ. ಒಂಟಿತನವು ನಿಮ್ಮ ಜೀವನದ ಒಂದು ದೊಡ್ಡ ಭಾಗವಾಗಿರಲಿ ಅಥವಾ ಸ್ವಲ್ಪವೇ ಆಗಿರಲಿ, ದೇವರು ನಿಮಗಾಗಿ ಆ ಭಾರವನ್ನು ಹೊರಲು ಬಯಸುತ್ತಾರೆ.
ಯೇಸು ಈ ಭೂಮಿಗೆ ಬಂದರು ಮತ್ತು ನಾವು ಜೀವಿಸಿದಂತೆಯೇ ಜೀವಿಸಿದರು. ನಾವು ಹೊಂದಿದ್ದ ಅನೇಕ ಅನುಭವಗಳು ಮತ್ತು ಭಾವನೆಗಳನ್ನು ಅವರೂ ಅನುಭವಿಸಿದರು. ಅವರನ್ನು ಸಾರ್ವಜನಿಕವಾಗಿ ತಿರಸ್ಕರಿಸಲಾಯಿತು ಮತ್ತು ಅವರ ಸ್ನೇಹಿತರಿಂದ ಕೈಬಿಡಲಾಯಿತು. ಯೇಸು ಏಕಾಂಗಿಯಾಗಿದ್ದರು. ನೀವು ಏನನ್ನು ಅನುಭವಿಸುತ್ತಿದ್ದೀರಿ ಎಂದು ಅವರಿಗೆ ತಿಳಿದಿದೆ ಮತ್ತು ಪ್ರತಿ ಕ್ಷಣದಲ್ಲಿಯೂ ಅವರು ನಿಮ್ಮೊಂದಿಗೆ ಇರುತ್ತಾರೆ, ನಿಮ್ಮನ್ನು ಸಾಂತ್ವನಗೊಳಿಸಲು ಸಿದ್ಧರಾಗಿದ್ದಾರೆ.
ದೇವರು ಯಾವಾಗಲೂ ನಿಮ್ಮೊಂದಿಗಿದ್ದಾರೆ. ವಾಸ್ತವವಾಗಿ, ಅವರು ನಮಗೆ ತುಂಬಾ ಹತ್ತಿರವಾಗಲು ಬಯಸಿದರೆಂದರೆ ಯೇಸು ನಮ್ಮೊಂದಿಗೆ ವಾಸಿಸಲು ಈ ಭೂಮಿಗೆ ಬಂದರು. ನಂತರ ಅವರು ನಮ್ಮ ಹೃದಯದಲ್ಲಿ ನೆಲೆಸಲು ಪವಿತ್ರಾತ್ಮರನ್ನು ಕಳುಹಿಸಿದರು. ಅವರು ನಿಮ್ಮೊಂದಿಗೆ ಎಷ್ಟು ಸಂಬಂಧವನ್ನು ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ!
”ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ…..” (ಯೆಹೋಶುವ 1:5)
May 10
He who heeds discipline shows the way to life, but whoever ignores correction leads others astray. —Proverbs 10:17. Discipline is not only essential for us, but also for those who