ನಮ್ಮ ಹೃದಯವನ್ನು ಪ್ರೀತಿ, ಆರಾಧನೆ ಮತ್ತು ಅದ್ಭುತಕ್ಕಾಗಿ ರಚಿಸಲಾಗಿದೆ, ಆದರೆ ನಮ್ಮಲ್ಲಿ ಹೆಚ್ಚಿನವರು ಪ್ರತಿದಿನವೂ ಎದುರಿಸುತ್ತಿರುವುದನ್ನೇ ಎದುರಿಸುತ್ತಾರೆ – ನೀವು ಮನೆಯನ್ನು ನಿರ್ವಹಿಸುತ್ತಿರುವ ಪೋಷಕರಾಗಿರಲಿ, ಗಡುವನ್ನು/ಅವಧಿಯನ್ನು ಹೊಂದಿರುವ ವಿದ್ಯಾರ್ಥಿಯಾಗಿರಲಿ ಅಥವಾ ಅನಿಶ್ಚಿತತೆಯ ಸಮಯದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಪ್ರಯತ್ನಿಸುತ್ತಿರುವ ವೃತ್ತಿಪರರಾಗಿರಲಿ – ನಾವು ಆತಂಕ ಮತ್ತು ಒತ್ತಡಕ್ಕೆ ಲೆಕ್ಕವಿಲ್ಲದಷ್ಟು ಕಾರಣಗಳನ್ನು ಎದುರಿಸುತ್ತಿದ್ದೇವೆ..
ಒತ್ತಡವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಏಕೆಂದರೆ ಅದು ಮೌನ/ನಿಶ್ಯಬ್ದ ಹಂತಕ ..! ದೇವರ ವಾಕ್ಯದೊಂದಿಗೆ ಒತ್ತಡವನ್ನು ಎದುರಿಸಿ..!!
ಒತ್ತಡ ಮತ್ತು ಚಿಂತೆ ದೇವರೊಂದಿಗೆ ಗಂಭೀರ ವ್ಯವಹಾರವಾಗಿದೆ. ನಂತರ ಅವು ನಿಮ್ಮ ಜೀವನವನ್ನು ಆಳಲು ಬಿಡಬೇಡಿ. ಅವು ನಿಮಗೆ ಬಲೆಯಾಗಬಹುದು..
ನಮ್ಮ ಒಳ್ಳೆಯ ಮತ್ತು ಪ್ರೀತಿಯ ಸೃಷ್ಟಿಕರ್ತನು ನದಿಯ ಬಳಿಯಲ್ಲಿ ಬೆಳೆದ ಮರದಂತೆ ಜೀವಿಸಲು ನಮ್ಮನ್ನು ಸೃಷ್ಠಿ ಮಾಡಿದರು, ನಮ್ಮ ಬೇರುಗಳನ್ನು ಅವರ ಜೀವ ನೀಡುವ ಹೊಳೆಯಲ್ಲಿ ಆಳವಾಗಿ ಕಳುಹಿಸಿ ಮತ್ತು ಅವನ ಒದಗಿಸುವಿಕೆ ಮತ್ತು ಪೋಷಣೆಯ ದೃಢತೆಯಲ್ಲಿ ಎತ್ತರವಾಗಿ ಮತ್ತು ಬಲವಾಗಿ ಬೆಳೆಯುವಂತೆ ಮಾಡಲು.
ದೇವರಿಗೆ ಸ್ತೋತ್ರವಾಗಲಿ, ಕ್ರಿಸ್ತನು ನಮ್ಮ ಭಾರವನ್ನು ಆತನ ಪಾದಗಳಲ್ಲಿ ಇಡಲು ನಮ್ಮನ್ನು ಕೈಬೀಸಿ ಕರೆಯುತ್ತಾರೆ ಮತ್ತು ಆಹ್ವಾನಿಸುತ್ತಾರೆ. ಎಂದಿಗೂ ಎಲ್ಲವನ್ನೂ ನಮ್ಮ ಮೇಲೆ ನಾವೇ ಹೊತ್ತುಕೊಂಡು ಸಾಗಿಸಲು ನಮ್ಮನ್ನು ಉದ್ದೇಶಿಸಿರಲಿಲ್ಲ. ಆತನಲ್ಲಿ ನೆಲೆಗೊಳ್ಳಲು, ನಮ್ಮ ಗಮನವನ್ನು ಆತನ ಕಡೆಗೆ ತಿರುಗಿಸಲು, ಆತನನ್ನು ಆರಾಧಿಸಲು ನಮ್ಮ ಹೃದಯಗಳನ್ನು ತಿರುಗಿಸಲು, ಆತನಲ್ಲಿ ವಿಶ್ರಾಂತಿ ಪಡೆಯಲು ಹಾಗೂ ಪ್ರಾರ್ಥನೆ ಮತ್ತು ಮನವಿಯ ಮೂಲಕ ನಮ್ಮ ಪರಿಸ್ಥಿಗಳಲ್ಲಿ ನಮ್ಮ ಪರವಾಗಿ ಕಾರ್ಯ ಮಾಡಲು ಆತನನ್ನು ಆಮಂತ್ರಿಸಲು ನಮಗೆ ಕಲಿಸುವ ಮೂಲಕ ನಮ್ಮ ಜೀವನದಲ್ಲಿ ಒತ್ತಡವನ್ನು ಸಮೀಪಿಸಲು ಮತ್ತು ಅದನ್ನು ನಿರ್ವಹಿಸುವ ಮಾರ್ಗಗಳನ್ನು ಅವರು ನಮಗೆ ಒದಗಿಸಿದ್ದಾರೆ..
ದೇವರ ವಾಗ್ದಾನಗಳು ನಿಮ್ಮ ಜೀವನದಲ್ಲಿ ನಿಜವಾಗುವವರೆಗೆ ನಿಮ್ಮನ್ನು ಪರಿಪೂರ್ಣ ಶಾಂತಿಯಿಂದ ಇರಿಸಿಕೊಳ್ಳಲು, ದೇವರ ವಾಗ್ದಾನದ ಕುರಿತು ಧ್ಯಾನಿಸಲು ಮತ್ತು ಮಾತನಾಡಲು/ನುಡಿಯಲು ಸಮಯವನ್ನು ಕಳೆಯಿರಿ..
ದೇವರಿಂದ ಬರುವ ಸದಾ ಹರಿಯುವ ನಿತ್ಯ ಜೀವದಿಂದ ಆಳವಾಗಿ ಕುಡಿಯಲು ನೆಲೆಗೊಳ್ಳಲು ನೀವು ಮಾಡಲ್ಪಟ್ಟಿದ್ದೀರಿ. ಆತನನ್ನು ನಂಬಿ ಮತ್ತು ಆತನಿಗೆ ಹತ್ತಿರವಾಗಿ ಇರಿ, ಮತ್ತು ನೀವು ಬರ ಮತ್ತು ಬಿರುಗಾಳಿಯ ಮೂಲಕವೂ ಬಲವಾಗಿ ನಿಲ್ಲುತ್ತೀರಿ..
ಏನಿಲ್ಲವೆಂದರೂ ನಾವು ಆತಂಕಪಡಬೇಕು ಎಂಬುದು ನಿಜವೇ? ಕ್ರೈಸ್ತರಿಗೆ ಈ ಆಜ್ಞೆಯು ಈ ಲೋಕದ ತರ್ಕವನ್ನು ತಲೆಕೆಳಗಾಗಿ ಮಾಡುತ್ತದೆ. ನಿಮ್ಮ ಹೊರೆಗಳನ್ನು ದೇವರ ಬಳಿಗೆ ತನ್ನಿ ಮತ್ತು ಅವರು ಏನು ಮಾಡುತ್ತಾರೆಂದು ನೋಡಿ..
ಯೇಸುವಿನ ಶಾಂತಿಯು ಈ ಲೋಕ ನೀಡುವ ಯಾವುದೇ ಶಾಂತಿಗಿಂತ ವಿಭಿನ್ನವಾಗಿದೆ. ಆರ್ಥಿಕ ಭದ್ರತೆ, ಸಂಬಂಧಾತ್ಮಕ ದೃಢೀಕರಣ ಅಥವಾ ಸಾಂಕ್ರಾಮಿಕ-ಮುಕ್ತ ಜಗತ್ತಿಗಿಂತ ಉತ್ತಮವಾಗಿದೆ. ಕ್ರಿಸ್ತನ ಶಾಂತಿ, ನಿಮಗೆ ಆತನ ಕೊಡುಗೆ, ಇವೆಲ್ಲವನ್ನೂ ಅದು ಮೀರಿಸುತ್ತದೆ – ನಿಮ್ಮ ಹೃದಯವು ತೊಂದರೆಗೊಳಗಾಗುವುದನ್ನು ಆತನು ಬಯಸುವುದಿಲ್ಲ..
ನಿಮಗೆ ಬೇಕಾಗಿರುವುದು ಹೊಸ/ನೂತನ ಮತ್ತು ಸಕಾರಾತ್ಮಕ ಮನಸ್ಥಿತಿ ಎಂದು ಈ ಲೋಕ ನಿಮಗೆ ಹೇಳಬಹುದು. ಸಕಾರಾತ್ಮಕ ಸಲಹೆಗಳು ಮತ್ತು ತಂತ್ರಗಳು ಒಂದು ಕ್ಷಣ ಸಹಾಯಕವಾಗಿದ್ದರೂ, ಅವು ದೇವರಲ್ಲಿ ಕಂಡುಬರುವ ನಿಜವಾದ ಜೀವ ಮತ್ತು ಶಾಂತಿಯ ಆಳವಾದ ಅಡಿಪಾಯವನ್ನು ನಿರ್ಮಿಸುವುದಿಲ್ಲ. ಅವರ ಆತ್ಮವು ನಿಮ್ಮ ಮನಸ್ಸನ್ನು ಆಳಲು ಅನುಮತಿಸಿ ಮತ್ತು ಕಣ್ಮರೆಯಾಗದಂತೆ ಅವರು ನಿಮ್ಮನ್ನು ಹೇಗೆ ಶಾಶ್ವತವಾದ ಕಡೆಗೆ ಕರೆದೊಯ್ಯುತ್ತಾರೆ ಎಂಬುದನ್ನು ಗಮನಿಸಿ..
ಯೇಸುವಿನ ಮರಣ ಮತ್ತು ಪುನರುತ್ಥಾನದ ವರ್ಣನಾತೀತ ಶಕ್ತಿಯ ಮೂಲಕ, ಜೀವನದ ದೊಡ್ಡ ಮತ್ತು ಸಣ್ಣ ಎರಡೂ ಸವಾಲುಗಳನ್ನು ಎದುರಿಸಲು ನಮಗೆ ಸಾಧ್ಯವೇ ಎಂದು ನಾವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ನಾವು ನಮ್ಮ ಒತ್ತಡವನ್ನು ಮತ್ತು ಚಿಂತೆಯನ್ನು ಆತನಿಗೆ ಬಿಡುಗಡೆಗೊಳಿಸುವುದು ಮಾತ್ರವಲ್ಲ, ಆತನಲ್ಲಿನ ನಮ್ಮ ವಿಶ್ವಾಸವು ನಮ್ಮನ್ನು ವಿಜಯಶಾಲಿಯನ್ನಾಗಿ ಮಾಡುತ್ತದೆ ಎಂದು ಎಂದು ನಾವು ಆನಂದಿಸುತ್ತೇವೆ!..
’’ಆ ದೃಢ ನಂಬಿಕೆಯನ್ನು ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು…..’’( ಹಿಬ್ರಿಯ 10:35)
January 21
You see, at just the right time, when we were still powerless, Christ died for the ungodly. Very rarely will anyone die for a righteous man, though for a good