ಪ್ರೀತಿಯು ಸ್ವಯಂ ಇಚ್ಛೆಯಿಂದ ಕೊಡುವುದಾಗಿದೆ ಹೊರೆತು ಸ್ವಯಂ ಸೇವೆಮಾಡಿಕೊಳ್ಳುವ ಸ್ವಾರ್ಥವಲ್ಲ..
ಕ್ರೈಸ್ತ ಧರ್ಮದ ಮುಖ್ಯ ಅಂಶವೆಂದರೆ ನಾವು ಮಾಡುವ ಕಾರ್ಯವಲ್ಲ ಆದರೆ ನಾವು ನಿರ್ವಹಿಸುವ ಸಂಬಂಧಗಳು ಮತ್ತು ಅದರಿಂದ ಉಂಟಾಗುವ ವಾತಾವರಣವಾಗಿದೆ..
ಕೆಲವೊಮ್ಮೆ, ನಾವು ನಮ್ಮ ಸ್ವಂತ ವಿಷಯಗಳಲ್ಲಿ ಎಷ್ಟು ತೊಡಗಿಸಿಕೊಳ್ಳುತ್ತೇವೆ ಎಂದರೆ ಜೀವನದಲ್ಲಿ ಜನರೇ ‘ಆದ್ಯತೆ’ ಎಂಬುದನ್ನು ಮರೆತುಬಿಡುತ್ತೇವೆ..!
ಯೇಸುವು ನಿರಂತರವಾಗಿ ಹತಾಶೆಗಳನ್ನು ಎದುರಿಸಿದರು, ಆದರೆ ಅವರು ಯಾವಾಗಲೂ ಜನರಿಗಾಗಿ ಸಮಯವನ್ನು ಮೀಸಲಿಟ್ಟರು..
ಯಾವಾಗಲೂ ಸಂವಹನ ನಡೆಸಿ, ಮತ್ತು ನೀವು ಪ್ರೀತಿಸುವವರಿಗಾಗಿ ಸಮಯವನ್ನು ಮೀಸಲಿಡಿ..
ಭಾವನೆಗಳು ಪರಸ್ಪರ ಇದ್ದಾಗ ಪ್ರಯತ್ನಗಳು ಸಮಾನವಾಗಿರುತ್ತದೆ ಎಂಬುದನ್ನು ನೆನಪಿಡಿ..!!
’’ಪ್ರೀತಿ ಬಹು ತಾಳ್ಮೆಯುಳ್ಳದ್ದು, ಕರುಣೆಯುಳ್ಳದ್ದು; ಪ್ರೀತಿಯು ಹೊಟ್ಟೇಕಿಚ್ಚು ಪಡುವದಿಲ್ಲ, ಹೊಗಳಿ ಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ,ಮರ್ಯಾದೆ ಗೆಟ್ಟು ನಡೆಯುವದಿಲ್ಲ, ಸ್ವಾರ್ಥತೆಯನ್ನು ಬಯಸುವದಿಲ್ಲ, ಬೇಗನೆ ಕೋಪಗೊಳ್ಳುವದಿಲ್ಲ, ಕೆಟ್ಟದ್ದನ್ನು ಯೋಚಿಸುವದಿಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ…..’’ (1 ಕೊರಿಂಥ 13:4-5,7)
April 3
It is because of him that you are in Christ Jesus, who has become for us wisdom from God — that is, our righteousness, holiness and redemption. —1 Corinthians 1:30