ದೇವರು ನಮ್ಮೊಂದಿಗಿದ್ದಾರೆ ಮತ್ತು ನಮ್ಮಲ್ಲಿ ಸದಾಕಾಲವು ಇದ್ದಾರೆ – ಆತನನ್ನು ತಲುಪಿ..!
ಕ್ರಿಸ್ತನನ್ನು ಹೆಚ್ಚು ಅರಿತುಕೊಳ್ಳುವುದು ಮತ್ತು ಆತನೊಂದಿಗೆ ಸಮಯ ಕಳೆಯುವುದು, ಆತನೊಂದಿಗೆ ನಿಕಟ ಸಂಬಂಧವನ್ನು ಹೊಂದುವುದು ನಮ್ಮ ಜೀವನದಲ್ಲಿರುವ ಮೇಲ್ನೋಟವು (ಆಳವಿಲ್ಲದಿರುವಿಕೆಗಳು) ಮಸುಕಾಗುವಂತೆ ಮಾಡುತ್ತದೆ..
ದೃಢ ಭರವಸೆಯು ಆತ್ಮೀಯತೆಯ ಹೃದಯದಲ್ಲಿದೆ. ನಾವು ಯಾರನ್ನು ಹೆಚ್ಚು ನಂಬುತ್ತೇವೆಯೋ, ಅವರನ್ನು ನಮ್ಮ ಹತ್ತಿರಕ್ಕೆ ಬರಲು ಬಿಡುತ್ತೇವೆ..
ದೃಢ ಭರವಸೆಯು/ನಂಬಿಕೆಯು ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಎಷ್ಟು ಸತ್ಯವೋ ಅದು ಇತರ ಮನುಷ್ಯರೊಂದಿಗಿನ ನಮ್ಮ ಸಂಬಂಧಗಳಲ್ಲಿಯೂ ಅಷ್ಟೇ ಸತ್ಯವಾಗಿದೆ..
ದೇವರು ಆತನನ್ನು ಭರವಸಿಸುವವರಿಗೆ ನಿಕಟವಾಗಿರುತ್ತಾನೆ ಎಂದು ಪವಿತ್ರ ಗ್ರಂಥದ ವಾಕ್ಯಗಳು ನಮಗೆ ಪ್ರಕಟಪಡಿಸುತ್ತದೆ. ನಾವು ದೇವರನ್ನು ಎಷ್ಟು ಹೆಚ್ಚು ನಂಬುತ್ತೇವೆಯೋ/ ದೃಢ ಭರವಸೆಯಿಡುತ್ತೇವೆಯೋ ಅಷ್ಟು ನಿಕಟವಾಗಿ ನಾವು ಆತನನ್ನು ಅರಿತುಕೊಳ್ಳುತ್ತೇವೆ..
ದೇವರಿಗೆ ಹತ್ತಿರವಾಗಲು ಮತ್ತು ಆತನು ನಮ್ಮ ಹತ್ತಿರಕ್ಕೆ ಬರುವಂತೆ ಮಾಡುವ ರಹಸ್ಯವು ಪವಿತ್ರ ಬೈಬಲ್ ನಲ್ಲಿ ಸ್ಪಷ್ಟವಾಗಿ ಪ್ರಕಟವಾಗಿದೆ: ಕ್ರಿಸ್ತನಲ್ಲಿ ವಿಶ್ವಾಸವಿಡುವ ಮೂಲಕ ನಾವು ದೇವರಿಗೆ ಹತ್ತಿರವಾಗುತ್ತೇವೆ,ಆತನು ಮಾತ್ರವೇ ನಮಗೆ ಪ್ರವೇಶವನ್ನು ನೀಡುತ್ತಾರೆ..
ಯಾರ ಹೃದಯವು ತನ್ನ ವಾಗ್ದಾನಗಳನ್ನು ಸಂಪೂರ್ಣವಾಗಿ ನಂಬಿ ಭರವಸೆ ಇಟ್ಟು ಮತ್ತು ಅದರಂತೆ ಜೀವಿಸುವುದನ್ನು ದೇವರು ನೋಡಿದಾಗ, ದೇವರು ಆ ವ್ಯಕ್ತಿಯನ್ನು ಬಲವಾಗಿ ಬೆಂಬಲಿಸಲು ಬರುತ್ತಾರೆ ಮತ್ತು ಅವರಿಗೆ ತನ್ನನ್ನು ತಾನು ಪ್ರಕಟಪಡಿಸುತ್ತಾರೆ..
ದೇವರು ನಿಮ್ಮೊಂದಿಗೆ ಅನ್ಯೋನ್ಯತೆಯನ್ನು ಬಯಸುತ್ತಾರೆ. ಅದನ್ನು ಸಾಧ್ಯವಾಗಿಸಲು ಕ್ರಿಸ್ತನು ಶಿಲುಬೆಯ ಮೇಲೆ ಎಲ್ಲಾ ಕಠಿಣ ಕಾರ್ಯವನ್ನು ಈಗಾಗಲೇ ಮಾಡಿದ್ದಾರೆ. ಆತನಿಗೆ ಬೇಕಾಗಿರುವುದು ನೀವು ಆತನನ್ನು ನಂಬುವುದಾಗಿದೆ. ನಿಮ್ಮ ಪೂರ್ಣ ಹೃದಯದಿಂದ ನೀವು ಆತನನ್ನು ಭರವಸಿಸಬೇಕು/ನಂಬಬೇಕೆಂದು ದೇವರು ಬಯಸುತ್ತಾರೆ..
ನಾವು ಆತನನ್ನು ಹೆಚ್ಚು ನಂಬಬೇಕಾದ ಸ್ಥಳಗಳು ಮತ್ತು ಸಂದರ್ಭಗಳಲ್ಲಿ ದೇವರೊಂದಿಗಿನ ಅನ್ಯೋನ್ಯತೆಯು ಅತಿ ಹೆಚ್ಚಾಗಿ ಸಂಭವಿಸುತ್ತದೆ..
’’ಆಶ್ರಯಿಸಿರಿ ಸರ್ವೇಶನನೂ ಆತನ ಶಕ್ತಿಯನೂ; ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು…..’’(1 ಪೂ.ಕಾ.ಇ 16:11)
February 5
This is love: not that we loved God, but that he loved us and sent his Son as an atoning sacrifice for our sins. —1 John 4:10. God loved us