ದೇವರು ನಮಗೆ ವಾಗ್ದಾನವನ್ನು ನೀಡುತ್ತಾರೆ ಮತ್ತು ಆ ವಾಗ್ದಾನದಲ್ಲಿ ನಮ್ಮ ವಿಶ್ವಾಸವನ್ನು ಪರೀಕ್ಷಿಸುತ್ತಾರೆ.
ದೇವರ ಪರೀಕ್ಷೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಯೋ ಅದು ನಮ್ಮ ಜೀವನಕ್ಕಾಗಿ ಇರುವ ಆತನ ಕನಸಿಗೆ ನಾವು ಸಿದ್ಧರಿದ್ದೇವೆಯೇ ಅಥವಾ ಇಲ್ಲವೇ ಎಂದು ತೋರಿಸುತ್ತೇವೆ – ಆದ್ದರಿಂದ ಬಿಟ್ಟುಕೊಡಬೇಡಿ..
ದೇವರು ಅಬ್ರಹಾಮನನ್ನು ಪರೀಕ್ಷಿಸಿದರು. ಅಬ್ರಹಾಮ ಮೂಲಕವೇ ಎಲ್ಲಾ ರಾಷ್ಟ್ರಗಳು ಆಶೀರ್ವದಿಸಲ್ಪಡುವುದಾಗಿತ್ತು ಮತ್ತು ಅವನು ವಿಶ್ವಾಸದ ಪಿತಾಮಹಾನಾಗಲು ಸಿದ್ಧನಾಗಿದ್ದಾನೆಯೇ ಎಂಬುದನ್ನು ದೇವರು ತಿಳಿದುಕೊಳ್ಳಬೇಕಾಗಿತ್ತು. ನಾವು ಪ್ರೀತಿಸುವ ಜನರನ್ನು ಪರೀಕ್ಷೆಗೆ ಒಳಪಡಿಸುವ ಕಲ್ಪನೆಯನ್ನು ನಾವು ಇಷ್ಟಪಡುವುದಿಲ್ಲ, ಆದರೆ ನಮ್ಮ ಸ್ವಂತ ಆಧ್ಯಾತ್ಮಿಕ ಬೆಳವಣಿಗೆಗಾಗಿ ದೇವರು ನಮ್ಮನ್ನು ಪರೀಕ್ಷಿಸಬೇಕು ಎಂದು ಬೈಬಲ್ ಅರ್ಥಮಾಡಿಸುತ್ತದೆ..
ಅವರ ಸಂಬಂಧವು ಬೆಳೆಯಲು ದೇವರು ಅಬ್ರಹಾಮನನ್ನು ಪರೀಕ್ಷಿಸಿದರು. ಇದು ದೇವರೊಂದಿಗೆ ಒಂದು ರೀತಿಯ ಆಟವಾಗಿರಲಿಲ್ಲ. ಅಬ್ರಹಾಮನು ಅವರನ್ನು ಸಂಪೂರ್ಣವಾಗಿ ನಂಬಿದ್ದಾನೆಯೇ ಎಂದು ದೇವರು ನಿಜವಾಗಿಯೂ ತಿಳಿದುಕೊಳ್ಳಲು ಬಯಸಿದರು ಮತ್ತು ಮತ್ತು ಅಬ್ರಹಾಮನು ದೇವರ ವಾಗ್ದಾನವನ್ನು ಹೊರತುಪಡಿಸಿ ಬೇರೇನೂ ಅವಲಂಬಿಸದ ಪರಿಸ್ಥಿತಿಯಲ್ಲಿ ಇರಿಸಲ್ಪಡುವವರೆಗೂ ಅವನು ಅದನ್ನು ಕಂಡುಕೊಳ್ಳಲು ಯಾವುದೇ ಮಾರ್ಗವಿರಲಿಲ್ಲ..
ಕೆಲವೊಮ್ಮೆ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಹೋಗಲು ಅನುಮತಿಸಲು ದೇವರು ನಮ್ಮನ್ನು ಪರೀಕ್ಷಿಸಬೇಕಾಗುತ್ತದೆ. ಎಲ್ಲವೂ ಸುಗಮವಾಗಿದ್ದರೆ, ಎಲ್ಲವೂ ಆಶೀರ್ವಾದವಾಗಿದ್ದರೆ, ಅನುಮಾನಕ್ಕೆ ಅವಕಾಶವಿಲ್ಲದಿದ್ದರೆ, ನಾವು ದೇವರನ್ನು ಸಂಪೂರ್ಣವಾಗಿ ನಂಬಲು ಕಲಿಯುವುದಿಲ್ಲ. ನಾವು ಅವರನ್ನು ನಂಬುತ್ತೇವೆಯೇ ಎಂದು ದೇವರು ನಿಜವಾಗಿಯೂ ತಿಳಿದುಕೊಳ್ಳಲು ಬಯಸುತ್ತಾರೆ.
ಈ ಹೋರಾಟವು ನಮ್ಮ ತ್ರಾಣವನ್ನು/ತಡೆದುಕೊಳ್ಳುವ ಶಕ್ತಿಯನ್ನು ನಿರ್ಮಿಸುತ್ತದೆ, ನಮ್ಮ ತಾಳ್ಮೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ (ಕಷ್ಟಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯ) ಎಂಬುದನ್ನು ನೆನಪಿಡಿ..
ದೇವರು ಅಬ್ರಹಾಮನನ್ನು ದೇವರೇ ಮಾಡದಿರುವಂಥದನ್ನು ಮಾಡುವುದಕ್ಕೆ ಕೇಳಲಿಲ್ಲ..
ತಂದೆಯಾದ ದೇವರು ತಾನು ಪ್ರೀತಿಸಿದ ತನ್ನ ಮಗನನ್ನು, ತನ್ನ ಏಕೈಕ ಪುತ್ರನನ್ನು ತ್ಯಾಗಮಾಡಲು ಸಿದ್ಧರಾಗಿದ್ದಾಗ, ಅವರ ಪರವಾಗಿರಲು ಯಾವ ದೇವದೂತರು ಇರಲಿಲ್ಲ. ಅದನ್ನು ನಿಲ್ಲಿಸಲು ಅವರಿಗೆ ಹೇಳುವ ಯಾವುದೇ ಮಾನವ ಸ್ವರವೂ ಇರಲಿಲ್ಲ..
ಅಬ್ರಹಾಮನನ್ನು ಎಲ್ಲಾ ಜನಾಂಗಗಳಿಗೆ ಆಶೀರ್ವಾದವನ್ನಾಗಿ ಮಾಡುವೆನು ಎಂಬ ತನ್ನ ವಾಗ್ದಾನವನ್ನು ಉಳಿಸಿಕೊಳ್ಳಲು ಅಗತ್ಯವಿರುವ ಎಲ್ಲವನ್ನೂ ದೇವರು ಮಾಡಿದರು.
ತನ್ನ ಸ್ವಂತ ಮಗನನ್ನೇ ಬಲಿಕೊಟ್ಟು , ದೇವರು ತನ್ನ ವಾಗ್ದಾನವನ್ನು ಉಳಿಸಿಕೊಂಡರು. ಅವರ ಪ್ರೀತಿ ಎಷ್ಟು ದೊಡ್ಡದು. ಅದಕ್ಕಾಗಿಯೇ, ಅಸಾಧ್ಯವಾದ ಕಠಿಣ ಅಥವಾ ಅಸಂಬದ್ಧವೆಂದು ತೋರುವ ಪರೀಕ್ಷೆಯ ನಡುವೆಯೂ ಸಹ, ನಾವು ಅವರ ಜೀವದ ವಾಗ್ದಾನವನ್ನು ನಂಬಬಹುದು/ಭರವಸಿಸಬಹುದು..
’’ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ….’’( 1 ಕೊರಿಂಥ 15:58)
February 23
And let us consider how we may spur one another on toward love and good deeds. Let us not give up meeting together, as some are in the habit of