ನಮಗಾಗಿ ಇರುವ ದೇವರ ಚಿತ್ತವನ್ನು ಕಂಡುಹಿಡಿಯುವ ಕೀಲಿಗಳಲ್ಲಿ ಒಂದು ಕೀಲಿ ನಮ್ಮ ದೀನತೆಯಲ್ಲಿದೆ..
ನಿಮಗೆ ಚೆನ್ನಾಗಿ ತಿಳಿದಿದೆ ಎಂದು ನೀವು ಯೋಚಿಸುವ ಯೋಜನೆಗಳನ್ನು ಎಣಿಕೆಯನ್ನು/ಹುರುಳನ್ನು ಬಿಟ್ಟುಬಿಡಿ..
ಗರ್ವಿಷ್ಠತೆ, ಹೆಮ್ಮೆ ಮತ್ತು ಅಹಂಕಾರವು ಕಲ್ಲಿನ ನೆಲದಂತಿದ್ದು ಅದು ಎಂದಿಗೂ ಆಧ್ಯಾತ್ಮಿಕ ಫಲವನ್ನು ನೀಡುವುದಿಲ್ಲ..
ದೀನತೆಯು ಫಲವತ್ತಾದ ಮಣ್ಣು, ಅಲ್ಲಿ ಆಧ್ಯಾತ್ಮಿಕತೆಯು ಬೆಳೆಯುತ್ತದೆ ಮತ್ತು ಏನು ಮಾಡಬೇಕೆಂದು ತಿಳಿಸುವ ಸ್ಫೂರ್ತಿಯ ಫಲವನ್ನು ನೀಡುತ್ತದೆ..
ಹೊಗಳಿಕೆ ಅಥವಾ ಮನ್ನಣೆಯ ಬಯಕೆಯಿಂದ ಪ್ರೇರೇಪಿಸಲ್ಪಟ್ಟಂಥ ವ್ಯಕ್ತಿಯು ಆತ್ಮರಿಂದ ಕಲಿಸಲ್ಪಡುವುದಕ್ಕೆ ಅರ್ಹನಾಗುವುದಿಲ್ಲ..
ಗರ್ವವನ್ನು ಹೊಂದಿರುವ ವ್ಯಕ್ತಿ ಅಥವಾ ತನ್ನ ಆತನ/ಆಕೆಯ ಭಾವನೆಗಳು ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಅನುಮತಿಸುವಂಥ ವ್ಯಕ್ತಿಯನ್ನು ಆತ್ಮರು ಶಕ್ತಿಯುತವಾಗಿ ನಡೆಸುವುದಿಲ್ಲ..
ದೇವರು ನಮ್ಮ ಮುಂದೆ ಇಡುವ ಮಾರ್ಗವು ನಾವು ಯೋಜಿಸಿರುವ ಮಾರ್ಗಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಬಹುದು ಮತ್ತು ಅದನ್ನು ಗುರುತಿಸಲು ದೀನತೆಯ ಅಗತ್ಯವಿರುತ್ತದೆ..
ನಾವು ಇತರರ ಪರವಾಗಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತಿರುವಾಗ, ನಾವು ನಮ್ಮ ಬಗ್ಗೆ ಮಾತ್ರ ಯೋಚಿಸುವುದಕ್ಕಿಂತ ಹೆಚ್ಚು ಸುಲಭವಾಗಿ ಸ್ಫೂರ್ತಿ ಪಡೆಯುತ್ತೇವೆ. ಇತರರಿಗೆ ಸಹಾಯ ಮಾಡುವ ಪ್ರಕ್ರಿಯೆಯಲ್ಲಿ, ಕರ್ತನು ನಮ್ಮ ಸ್ವಂತ ಪ್ರಯೋಜನಕ್ಕಾಗಿ “ಪಿಗ್ಗಿಬ್ಯಾಕ್” ನಿರ್ದೇಶನಗಳನ್ನು ಮಾಡಬಹುದು..
ನಮ್ಮ ಸ್ವರ್ಗೀಯ ತಂದೆಯು ನಮ್ಮನ್ನು ಈ ಭೂಮಿಯ ಮೇಲೆ ಇರಿಸಿದ್ದು ವಿಫಲವಾಗಲು ಅಲ್ಲ ಆದರೆ ಮಹಿಮಾನ್ವಿತವಾಗಿ ಯಶಸ್ವಿಯಾಗಲು..
ಕೆಲವೊಮ್ಮೆ ಅವಿವೇಕತನದಿಂದ ನಮ್ಮ ಸ್ವಂತ ಅನುಭವ ಮತ್ತು ಸಾಮರ್ಥ್ಯವನ್ನು ಅವಲಂಬಿಸಿ ಜೀವನವನ್ನು ಎದುರಿಸಲು ನಾವು ಪ್ರಯತ್ನಿಸುತ್ತೇವೆ..
ಏನು ಮಾಡಬೇಕೆಂದು ಅರಿತುಕೊಳ್ಳಲು ಪ್ರಾರ್ಥನೆ ಮತ್ತು ದೈವಿಕ ಸ್ಫೂರ್ತಿಯ ಮೂಲಕ ನಾವು ಹುಡುಕುವುದು/ಅರಸುವುದು ಹೆಚ್ಚು ಬುದ್ಧಿವಂತಿಕೆಯಾದುದಾಗಿದೆ. ಅಗತ್ಯವಿದ್ದಾಗ, ಆತನ ಪ್ರೇರಿತ ಉದ್ದೇಶಗಳನ್ನು ಸಾಧಿಸಲು ನಾವು ದೈವೀಕ ಸಹಾಯ ಮತ್ತು ಶಕ್ತಿಗೆ ಅರ್ಹರಾಗಬಹುದು ಎಂದು ನಮ್ಮ ವಿಧೇಯತೆಯು ನಮಗೆ ಭರವಸೆ ನೀಡುತ್ತದೆ..
ಭಾವನೆ ಅಥವಾ ಪ್ರೇರಣೆಯು ದೇವರಿಂದ ಬರುತ್ತದೆ ಎಂಬುದಕ್ಕೆ ಎರಡು ಸೂಚಕಗಳೆಂದರೆ ಅದು ನಿಮ್ಮ ಹೃದಯದಲ್ಲಿ ಶಾಂತಿ ಮತ್ತು ಪ್ರಶಾಂತವಾದ, ಬೆಚ್ಚಗಿನ ಆನಂದದ ಭಾವನೆಯನ್ನು ಉಂಟುಮಾಡುತ್ತದೆ..
ಸ್ವರ್ಗದಲ್ಲಿರುವ ನಮ್ಮ ತಂದೆಯೊಂದಿಗೆ ಸಂವಹನ ಮಾಡುವುದು ಕ್ಷುಲ್ಲಕ ವಿಷಯವಲ್ಲ. ಅದೊಂದು ಪವಿತ್ರವಾದ ಸವಲತ್ತಾಗಿದೆ..
’’ಆದದರಿಂದ ನೀವು ದೇವರಿಂದ ಆರಿಸಿಕೊಂಡವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.…..’’ (ಕೊಲೊಸ್ಸೆ 3:12)
January 2
There is no wisdom, no insight, no plan that can succeed against the Lord. —Proverbs 21:30. No matter how fresh the start nor how great the plans we have made this