ಅನೇಕರು ಅರಿಯದೆ ಆಧ್ಯಾತ್ಮಿಕ ಗುಲಾಮಗಿರಿಯಲ್ಲಿ ಜೀವಿಸುತ್ತಿದ್ದಾರೆ..
ಯಶಸ್ಸು, ಹಣ, ವೈಯಕ್ತಿಕ ಸೌಕರ್ಯ ಮತ್ತು ಪ್ರಣಯ ಪ್ರೀತಿಯ ಸುಳ್ಳು ದೇವರುಗಳನ್ನು ಅವರು ಬೆನ್ನಟ್ಟುತ್ತಾರೆ, ದೇವರ ದೈವೀಕ ಶಕ್ತಿಯನ್ನು ಹೊರತುಪಡಿಸಿ ಆ ಯಾವುದೇ ವಸ್ತುಗಳಿಂದ ತುಂಬಲು ಸಾಧ್ಯವಾಗದ ಶೂನ್ಯತೆಯನ್ನು ಅವರು ಇನ್ನೂ ಹೊಂದಿದ್ದಾರೆಂದು ಅರಿತುಕೊಳ್ಳಲು ಮಾತ್ರವೇ ಸಾಧ್ಯ..!
ಕ್ರೈಸ್ತರ ವಿಶ್ವಾಸದ ಪ್ರಮುಖ ಸಂದೇಶ – ಸುವಾರ್ತೆ – ಯೇಸು ಕ್ರಿಸ್ತನು ನಮ್ಮನ್ನು ಪಾಪದ ಗುಲಾಮಗಿರಿಯಿಂದ ರಕ್ಷಿಸುತ್ತಾನೆ ಮತ್ತು ಈ ಜೀವನದಲ್ಲಿ ಮತ್ತು ಅದರಾಚೆಗೂ ಸತ್ಯವಾದ ಬಿಡುಗಡೆಯನ್ನು ನೀಡುತ್ತಾನೆ ಎಂಬುದೇ.
ಕ್ರಿಸ್ತನ ಅನುಯಾಯಿಗಳು ಇನ್ನೂ ಪಾಪದೊಂದಿಗೆ ಹೋರಾಡುತ್ತಿರುವಾಗ, ಅವರು ಇನ್ನು ಮುಂದೆ ಅದಕ್ಕೆ ಗುಲಾಮರಾಗಿರುವುದಿಲ್ಲ. ಕ್ರಿಸ್ತನ ಶಕ್ತಿಯ ಮೂಲಕ, ಆತನ ಜನರು ದುರಾಶೆ, ಗರ್ವ, ಹೆಮ್ಮೆ, ಅಶ್ಲೀಲತೆ, ವ್ಯಸನ, ನಿಂದನೀಯ ನಡವಳಿಕೆ, ಹೊಟ್ಟೆಬಾಕತನ, ಸ್ವಾರ್ಥ ಮತ್ತು ಸೂರ್ಯನ ಕೆಳಗೆ(ಆಕಾಶದ ಕೆಳಗೆ) ಇರುವ ಯಾವುದೇ ಇತರ ಪಾಪಗಳ ಬಂಧನದಿಂದ ಮುಕ್ತರಾಗಬಹುದು..
ತಾನು ಕೊಡುವ ಸ್ವಾತಂತ್ರ್ಯದ ಅಥವಾ ಬಿಡುಗಡೆಯ ಬಗ್ಗೆ ಯೇಸು ಹೇಳಿದ್ದು ಇಲ್ಲಿದೆ:
ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾಗಿಯೂ ನೀವು ನನ್ನ ಶಿಷ್ಯರಾಗುವಿರಿ.ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು. ( ಯೋವಾನ್ನ 8:31-32)..
ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ–ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ–ಪಾಪ ಮಾಡುವವನು ಪಾಪಕ್ಕೆ ಗುಲಾಮನಾಗಿದ್ದಾನೆ. ಗುಲಾಮನು ಮನೆಯಲ್ಲಿ ಯಾವಾಗಲೂ ಇರುವದಿಲ್ಲ; ಆದರೆ ಮಗನು ಯಾವಾಗಲೂ ಇರುತ್ತಾನೆ. ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ. (ಯೋವಾನ್ನ 8: 34-36)..
ದೇವರು ಮನುಷ್ಯರನ್ನು ಸೃಷ್ಠಿಸಿದ್ದಾರೆ ಹೊರೆತು , ರೋಬೋಟ್ಗಳನ್ನಲ್ಲ. ಯೇಸು ಕ್ರಿಸ್ತನ ಮೂಲಕ ಆತನು ನಮಗೆ ನೀಡುವ ಬಿಡುಗಡೆಯನ್ನು ನಾವು ಸ್ವೀಕರಿಸಬೇಕಾಗಿಲ್ಲ. ಆತನು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ರಕ್ಷಣೆಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸ್ವತಂತ್ರ ಇಚ್ಛೆಯನ್ನು ನೀಡುತ್ತಾರೆ. ಆದರೆ ನಿಜವಾದ ಜನರು ತಿಳಿದಿದ್ದರೂ/ಅರಿತಿದ್ದರೂ ಕೂಡ ಸತ್ಯವನ್ನು ತಿರಸ್ಕರಿಸಿದಾಗ ಅವರು ಕೊನೆಗೊಳ್ಳುವ ನಿಜವಾದ ಸ್ಥಳ ನರಕವಾಗಿದೆ ಎಂದು ಬೈಬಲ್ ಎಚ್ಚರಿಸುತ್ತದೆ..
ಅಂತೆಯೇ, ಕ್ರಿಸ್ತನನ್ನು ಆರಿಸಿಕೊಳ್ಳುವವರು ಪ್ರತಿಯೊಂದು ತಿರುವಿನಲ್ಲಿಯೂ ಆತನಿಗೆ ವಿಧೇಯರಾಗಲು ಬಲವಂತವೆನಿಲ್ಲ. ಆದರೆ, ಅತ್ಯುತ್ತಮ ಜೀವನವು ಆತನನ್ನು ಗೌರವಿಸಲು(ಮಹಿಮೆಪಡಿಸಲು) ಮೀಸಲಿಟ್ಟ ಜೀವನವಾಗಿದೆ ಎಂದು ದೇವರು ಸ್ಪಷ್ಟಪಡಿಸುತ್ತಾರೆ..
ದೇವರ ವಾಕ್ಯವು ಕ್ರಿಸ್ತನಲ್ಲಿರುವ ಸ್ವಾತಂತ್ರ್ಯವನ್ನು/ಬಿಡುಗಡೆಯನ್ನು ಸೂಚಿಸುತ್ತದೆ. ಮತ್ತು ದೇವರು ನಮಗೆ ನೀಡುವ ಸ್ವಾತಂತ್ರ್ಯವನ್ನು ಹೇಗೆ ಹಿಡಿದುಕೊಳ್ಳುವುದು ಎಂದು ಯೋಚಿಸುವುದಕ್ಕೆ ನಿಮ್ಮನ್ನು ಬಿಟ್ಟು ಬಿಡುವುದಿಲ್ಲ. ಇದು ನಮ್ಮ ಮುರಿಯಲ್ಪಟ್ಟಿರುವ ಜೀವನವನ್ನು ಒಪ್ಪಿಕೊಳ್ಳುವುದರೊಂದಿಗೆ ಮತ್ತು ನಾವು ಪಾಪದ ಗುಲಾಮರು ಎಂದು ಒಪ್ಪಿಕೊಳ್ಳುವ ಮೂಲಕ ಪ್ರಾರಂಭವಾಗುತ್ತದೆ. ಮತ್ತು ಇದು ಯೇಸುವನ್ನು ಆಯ್ಕೆಮಾಡಿಕೊಳ್ಳುವುದರೊಂದಿಗೆ ಮತ್ತು ಪ್ರತಿದಿನವೂ ಆತನನ್ನು ಅನುಸರಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಆತನು ಮಾತ್ರ ಗುಲಾಮಗಿರಿಯ ಬಂಧನಗಳನ್ನು ಮುರಿದು ನಮ್ಮನ್ನು ನಿಜವಾದ ಸ್ವಾತಂತ್ರ್ಯದತ್ತ ಕೊಂಡೊಯ್ಯಬಲ್ಲನು, ಈಗಲೂ ಮತ್ತು ಎಂದೆಂದಿಗೂ..
’’ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ……’’ (ಗಲಾತ್ಯ 5:13)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross