ದೇವರು ರಾಷ್ಟ್ರಗಳನ್ನು ನಿರ್ಮಿಸುವುದಕ್ಕಾಗಿ ತನ್ನ ಜನರನ್ನು ಉಪಯೋಗಿಸಿಕೊಳ್ಳಲು ತನ್ನನ್ನು ತಾನು ಮಿತಿಗೊಳಿಸಿಕೊಳ್ಳುವುದಿಲ್ಲ, ಆತನು ತನ್ನ ಚಿತ್ತವನ್ನು ವಿರೋಧಿಸುವವರನ್ನು ಅಥವಾ ನಂಬದವರನ್ನೂ ಸಹ ಬಳಸಿಕೊಳ್ಳುತ್ತಾರೆ.
ಆದರೆ, ದೇವರು ಏನು ಮಾಡುತ್ತಿದ್ದಾರೆಂದು ಆತನಿಗೆ ತಿಳಿದಿದೆ..!!
ದೇವರು ನಿಯಂತ್ರಣದಲ್ಲಿದ್ದಾರೆ, ಆದರೂ ಆತನ ಚಿತ್ತವನ್ನು ಸಾಧಿಸಲು ಮನುಷ್ಯರ ಮೂಲಕ, ಅನ್ಯಜನಾಂಗಗಳ ಮೂಲಕ (ವಿಶ್ವಾಸಿಗಳಲ್ಲದವರ) ಕಾರ್ಯ ಮಾಡಲು ಆರಿಸಿಕೊಳ್ಳುತ್ತಿದ್ದಾರೆ..
ಕೆಲಸದ ಸ್ಥಳದಲ್ಲಿರುವ ಕ್ರೈಸ್ತರು ಸಹ ಇಂದು ಕ್ರೈಸ್ತರಲ್ಲದ ಜನರ ಮತ್ತು ಸಂಸ್ಥೆಗಳ ನಿರ್ಧಾರಗಳ ಮತ್ತು ಕ್ರಿಯೆಗಳ ಮೂಲಕ ದೇವರು ಸಕ್ರಿಯರಾಗಿದ್ದಾರೆ ಎಂಬ ಭರವಸೆಯಲ್ಲಿ ಜೀವಿಸುತ್ತಾರೆ..
ನಮ್ಮ ಬಾಸ್, ಸಹೋದ್ಯೋಗಿಗಳು, ಗ್ರಾಹಕರು ಮತ್ತು ಪೂರೈಕೆದಾರರು, ಪ್ರತಿಸ್ಪರ್ಧಿಗಳು, ನಿಯಂತ್ರಕರು ಅಥವಾ ಅಸಂಖ್ಯಾತ ಇತರ ನಟರ ಕ್ರಮಗಳು ನಾವು ಅಥವಾ ಅವರೂ ಸಹ ಗುರುತಿಸಲಾಗದಂತೆ ದೇವರ ರಾಜ್ಯದ ಕೆಲಸವನ್ನು ಮುಂದುವರೆಸಬಹುದು..
ಅದು ನಮ್ಮನ್ನು ಹತಾಶೆ ಮತ್ತು ಅಹಂಕಾರದಿಂದ ತಡೆಯಬೇಕು..
ನಿಮ್ಮ ಕೆಲಸದ ಸ್ಥಳದಲ್ಲಿ ಕ್ರೈಸ್ತ ಜನರು ಮತ್ತು ಮೌಲ್ಯಗಳು ಇಲ್ಲದಿರುವಂತೆ ತೋರುತ್ತಿದ್ದರೆ, ಹತಾಶರಾಗಬೇಡಿ – ದೇವರು ಇನ್ನೂ ಕಾರ್ಯ ಮಾಡುತ್ತಿದ್ದಾರೆ..
ಮತ್ತೊಂದೆಡೆ, ನಿಮ್ಮನ್ನು ಅಥವಾ ನಿಮ್ಮ ಸಂಸ್ಥೆಯನ್ನು ಕ್ರೈಸ್ತರ ಸದ್ಗುಣದ ಮಾದರಿಯಾಗಿ (ಪರಿಪೂರ್ಣ ಉದಾಹರಣೆ) ನೋಡುವುದಕ್ಕಾಗಿ ನೀವು ಪ್ರಲೋಭನೆಗೆ ಒಳಗಾಗಿದ್ದರೆ, ಹುಷಾರಾಗಿರಿ!
ದೇವರು, ಕಡಿಮೆ ಗೋಚರಿಸುವ(ಕಾಣುವ) ಸಂಪರ್ಕವನ್ನು ಹೊಂದಿರುವವರ ಮೂಲಕ ಹೆಚ್ಚಿನದನ್ನು ನೀವು ಎಣಿಸುವುದಕ್ಕಿಂತಲೂ ಅಧಿಕವಾಗಿ ಸಾಧಿಸುತ್ತಿರಬಹುದು..
ದೇವರು ತನ್ನ ಜನರ ಕಣ್ಣಿಗೆ ಕಾಣುವುದಕ್ಕಿಂತಲೂ ಅತಿ ಅಧಿಕವಾದ ಕಾರ್ಯದಲ್ಲಿದ್ದಾರೆ..
ವಿಶ್ವಾಸಿಗಳಲ್ಲದವರ ಪ್ರಜ್ಞಾಹೀನ ವಿಧೇಯತೆಯನ್ನೂ ಬಳಸಿ – ಅಂತಿಮವಾಗಿ, ಆತನ ವಾಕ್ಯದಲ್ಲಿ ಎಲ್ಲವೂ ನೆರವೇರುತ್ತದೆ ಎಂದು ಆತನು ಖಚಿತಪಡಿಸಿಕೊಳ್ಳುತ್ತಾನೆ..
’’ಆದುದರಿಂದ ಸರ್ವಶಕ್ತನಾದ ಕರ್ತನು ತನ್ನ ಆಲಯದಲ್ಲಿ ಕೆಲಸಮಾಡಲು ಪ್ರತಿಯೊಬ್ಬರನ್ನು ಉತ್ಸುಕನನ್ನಾಗಿ ಮಾಡಿದರು….’’ (ಹಗ್ಗಾಯ 1:14)
February 23
And let us consider how we may spur one another on toward love and good deeds. Let us not give up meeting together, as some are in the habit of