ಪ್ರೀತಿಯಲ್ಲಿ ನಡೆಯಲು ಗುಣಮಟ್ಟದ ನಿರ್ಧಾರ ತೆಗೆದುಕೊಳ್ಳಿ..
ಈ ರೀತಿಯ ಪ್ರೀತಿಯು ನೀವು ಹೇಗೆ “ಭಾವಿಸುತ್ತೀರಿ” ಎಂಬುದರ ಮೇಲೆ ಅವಲಂಬಿತವಾಗಿಲ್ಲ..
ಬದಲಾಗಿ, ದೇವರು ನಿಮ್ಮನ್ನು ನಡೆಸಿಕೊಳ್ಳುವಂತೆಯೇ(ಸತ್ಕರಿಸುವಂತೆಯೇ) ಇತರರನ್ನು ನಡೆಸಿಕೊಳ್ಳುವಲ್ಲಿ ದೇವರಿಗೆ ವಿಧೇಯನಾಗಲು ನೀವು ಮಾಡುವ ಆಯ್ಕೆಯಾಗಿದೆ..!
ಒಳ್ಳೆಯದನ್ನು ಮಾಡಲು ಅಪೇಕ್ಷಿಸುವ ಮಟ್ಟದಲ್ಲಿ ಮತ್ತು ನಾವು ಬಯಸದೇ ಇರುವಂಥ ಒಳ್ಳೆಯದನ್ನು ಇಚ್ಛಿಸುವ ಮಟ್ಟದಲ್ಲಿ, ನಾವು ಸಂಪೂರ್ಣವಾಗಿ ದೇವರ ಕೃಪೆಯ ಮೇಲೆ ಅವಲಂಬಿತರಾಗಿದ್ದೇವೆ, ಆ ನಿರ್ಧಾರವನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುವ ಪವಿತ್ರಾತ್ಮರ ಮೂಲಕ ದೇವರ ಹಸ್ತವಾಗಿದೆ..
ಇದು ನಮ್ಮ ಶಕ್ತಿ ಅಥವಾ ನಮ್ಮ ಸ್ವಂತ ಪ್ರಯತ್ನವಲ್ಲ. ದೇವರು ನಮ್ಮನ್ನು ಪ್ರೀತಿಸುವ ರೀತಿಯಲ್ಲಿಯೇ ಇತರರನ್ನು ಯಾವುದೇ ಶರತ್ತಿಲ್ಲದೇ ಪ್ರೀತಿಸುವ ನಿರ್ಧಾರವನ್ನು ನಾವು ಸಂಪೂರ್ಣವಾಗಿ ದೇವರ ಮೂಲಕ ಮತ್ತು ದೇವರೊಂದಿಗೆ ಮಾಡವುದಾಗಿದೆ..
ದೇವರು ನಿಮಗೆ ಕೊಡದೇ ಇರುವ ಯಾವುದನ್ನೂ ನೀವು ಹೊಂದಿದ್ದೀರಿ?…
ತಂದೆಯಾದ ದೇವರೇ ಸ್ತೋತ್ರ! ಯೇಸುವೇ ಸ್ತೋತ್ರ! ಪವಿತ್ರಾತ್ಮರೇ ಸ್ತೋತ್ರ!
‘’ಆದದರಿಂದ ನೀವು ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಸರಿಸುವವರಾಗಿರ್ರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ…..’’ (ಎಫೆಸಿ 5:1-2)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross