ನಿಮ್ಮ ಮನಸ್ಸು ಕೋಳಿಗಳ ಜೊತೆ ಕುಕ್ಕುತ್ತಾ ಅದಕ್ಕೆ ಅಂಟಿಕೊಂಡಿದ್ದರೆ ಹದ್ದುಗಳಂತೆ ಮೇಲೇರಲು ಸಾಧ್ಯವಿಲ್ಲ..!
ಮೇಲಿರುವಂಥವುಗಳ ಮೇಲೆ ನಿಮ್ಮ ಮನಸ್ಸಿಡಿರಿ. ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ.
ನೀವು ಯೋಚಿಸುವ ವಿಧಾನವನ್ನು ಬದಲಾಯಿಸಿಕೊಳ್ಳುವುದು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಅದು ನಿಮ್ಮ ಆಶೀರ್ವಾದಗಳು ಹೇಗೆ ಹರಿಯುತ್ತದೆ ಎಂಬುದನ್ನು ಬದಲಾಯಿಸುತ್ತದೆ.
ಕೆಲವೊಮ್ಮೆ ಇದನ್ನು ಮಾಡುವುದಕ್ಕಿಂತ ಸುಲಭವಾಗಿ ಹೇಳಬಹುದು, ಆದ್ದರಿಂದ ಪವಿತ್ರ ಗ್ರಂಥದ ವಾಕ್ಯಗಳನ್ನು ಅನ್ವಯಿಸಿಕೊಳ್ಳಲು ಕೆಲವು ಪ್ರಾಯೋಗಿಕ ವಿಧಾನಗಳು ಇಲ್ಲಿವೆ:
1. ನಕಾರಾತ್ಮಕ ಆಲೋಚನೆಯನ್ನು ಬರೆಯಿರಿ.
2. ಅದನ್ನು ವಿವರಿಸಿ (ವಾಸ್ತವವಾಗಿ ಅದನ್ನು ಶಬ್ದಕೋಶದಲ್ಲಿ ನೋಡಿ).
3. ಆ ನಕಾರಾತ್ಮಕ ಆಲೋಚನೆಯ ಬಗ್ಗೆ ದೇವರ ವಾಕ್ಯವು ಏನು ಹೇಳುತ್ತದೆ ಎಂಬುದನ್ನು ನೋಡಿ. ಅದನ್ನು ಬರೆಯಿರಿ. ಅದನ್ನು ನೆನಪಿಟ್ಟುಕೊಳ್ಳಿ.
4. ದೇವರ ವಾಕ್ಯವನ್ನು ಜೋರಾಗಿ ನುಡಿಯಿರಿ
5. ವಾಕ್ಯವನ್ನು ಧ್ಯಾನಿಸಿ ಮತ್ತು ನಿಮಗೆ ಕಲಿಸಲು ಮತ್ತು ಅದರಿಂದ ಹೊರಬರುವಂತೆ ನಿಮಗೆ ಸಹಾಯ ಮಾಡಲು ಪವಿತ್ರಾತ್ಮರಿಗೆ ಅವಕಾಶ ಮಾಡಿಕೊಡಿ ಮತ್ತು ಅದು ಈಗಾಗಲೇ ಮುಗಿದಿದೆ ಎಂದು ದೇವರಿಗೆ ಧನ್ಯವಾದ ಹೇಳುತ್ತಿರಿ.
6. ಅಧ್ಯಯನ ಮಾಡಲು ಮತ್ತು ಹೆಚ್ಚಿನ ತಿಳುವಳಿಕೆಯನ್ನು ಪಡೆಯಲು ಅದಕ್ಕೆ ಸಂಬಂಧಿತ ಬೋಧನೆಗಳನ್ನು ಆಲಿಸಿ.
’’ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ….’’ (ಕೊಲೊಸ್ಸೆ 3:1-2)