Welcome to JCILM GLOBAL

Helpline # +91 6380 350 221 (Give A Missed Call)

ವಿಶ್ವಾಸದ ಘೋಷಣೆಗಳು

ನಾನು, ನನ್ನ ಕುಟುಂಬ ಮತ್ತು ನನ್ನ ಭವಿಷ್ಯದ ಮೇಲೆ ವಿಶ್ವಾಸದ ಮತ್ತು ಜಯದ ಸಕಾರಾತ್ಮಕ ನುಡಿಗಳನ್ನು ಮಾತ್ರ ನುಡಿಯುತ್ತೇನೆ/ಮಾತನಾಡುತ್ತೇನೆ. ನನ್ನ ಪರಿಸ್ಥಿತಿಯನ್ನು ವಿವರಿಸಲು ನಾನು ನನ್ನ ನುಡಿಗಳನ್ನು ಬಳಸುವುದಿಲ್ಲ, ಬದಲಿಗೆ ನನ್ನ ಪರಿಸ್ಥಿತಿಯನ್ನು ಬದಲಾಯಿಸಲು ನನ್ನ ನುಡಿಗಳನ್ನು ಬಳಸುತ್ತೇನೆ. ನಾನು ನನ್ನ ಪರವಾಗಿರುವಂಥವುಗಳನ್ನು, ಉತ್ತಮ ತಿರುವುಗಳನ್ನು, ಗುಣಪಡಿಸುವಿಕೆಯನ್ನು ಮತ್ತು ಪುನರ್ ಸ್ಥಾಪನೆಯನ್ನು ಕೂಗಿ ಕರೆಯುತ್ತೇನೆ. ನನ್ನ ಸಮಸ್ಯೆಗಳು ಎಷ್ಟು ದೊಡ್ಡದಾಗಿದೆ ಎಂಬುದರ ಕುರಿತು ನಾನು ದೇವರೊಂದಿಗೆ ಮಾತನಾಡುವುದಿಲ್ಲ, ಬದಲಾಗಿ ನನ್ನ ದೇವರು ಎಷ್ಟು ದೊಡ್ಡವರು ಎಂಬುದರ ಕುರಿತು ನನ್ನ ಸಮಸ್ಯೆಗಳ ಜೊತೆ ನಾನು ಮಾತನಾಡುತ್ತೇನೆ . ಇದೇ ನನ್ನ ಘೋಷಣೆ.

ದೈವ ಆರೋಗ್ಯದ ಘೋಷಣೆಗಳು

ನಾನು ದಿನದಿಂದ ದಿನಕ್ಕೆ ದೇವರ ವಾಕ್ಯದ ಬೆಳಕಿನಿಂದ ನಡೆಯುತ್ತೇನೆ. ಈ ಲೋಕದಲ್ಲಿ ಅಸ್ತಿತ್ವದಲ್ಲಿರುವ ನೈಸರ್ಗಿಕ ಅಥವಾ ಸ್ವಾಭಾವಿಕ ಪರಿಸ್ಥಿತಿಗಳಿಂದ ನಾನು ಕದಲುವುದಿಲ್ಲ. ದೇವರ ವಾಕ್ಯವು ನನ್ನ ದೇಹವನ್ನು ಬೆಳಗಿಸುವ ಬೆಳಕಾಗಿದೆ. ನನ್ನ ಆರೋಗ್ಯಕ್ಕಾಗಿ ಇರುವ ದೇವರ ಉದಾರವಾದ ಪೂರ್ವಸಿದ್ಧತೆಯ ಬಗ್ಗೆ ನಾನು ಜಾಗೃತನಾಗಿದ್ದೇನೆ ಮತ್ತು ನಾನು ಅವುಗಳನ್ನು ಆನಂದಿಸುತ್ತಿದ್ದೇನೆ ಏಕೆಂದರೆ ದೇವರ ವಾಕ್ಯದ ಶಕ್ತಿಯಿಂದ ನನ್ನ ದೇಹವು ಚೈತನ್ಯಗೊಳ್ಳುತ್ತದೆ ಆಮೆನ್.

ನಾನು ಹೇಳುವುದನ್ನು ನಾನು ಹೊಂದಿಕೊಳ್ಳುತ್ತೇನೆ, ಯೇಸುವಿನ ನಾಮದಲ್ಲಿ
ನಾನು ಬಲಶಾಲಿಯಾಗಿದ್ದೇನೆ 
ನಾನು ಆರೋಗ್ಯಶಾಲಿಯಾಗಿದ್ದೇನೆ
ನಾನು ಆಶೀರ್ವದಿಸಲ್ಪಟ್ಟಿದ್ದೇನೆ 
ನಾನು ಶಕ್ತಿಶಾಲಿಯಾಗಿದ್ದೇನೆ
ನಾನು ಅಭಿಷೇಕಿಸಲ್ಪಟ್ಟಿದ್ದೇನೆ  
ನಾನು ಬಿಡುಗಡೆ ಹೊಂದಿದವನಾಗಿದ್ದೇನೆ
ನಾನು ದೇವರ ಪ್ರಿಯನಾದವನಾಗಿದ್ದೇನೆ
ನಾನು ದೇವರಿಂದಲೂ ಮತ್ತು ಜನರಿಂದಲೂ ಸಹಾಯವನ್ನು ಹೊಂದಿದವನಾಗಿದ್ದೇನೆ
ನಾನು ಏನನ್ನು ಕಾಣಲು ಬಯಸುತ್ತೇನೊ ಅದನ್ನು ನುಡಿಯುತ್ತೇನೆ ನಾನು ಏನನ್ನು ನೋಡುತ್ತಿದ್ದೇನೊ ಅದನ್ನಲ್ಲ
ನಾನು ಅಮೂಲ್ಯವಾದ ಬೀಜವಾಗಿದ್ದೇನೆ
ನಾನು ನನ್ನ ದೇವರ  ಮನೆಯ ಒಳ್ಳೆಯ ನೆಲದಲ್ಲಿ ಬಿತ್ತಲ್ಪಟ್ಟಿದ್ದೇನೆ  
ನಾನು ನನ್ನ ಪ್ರಭುವಿನ ಅಂಗಳದಲ್ಲಿರುವ ತಾಳೆ ಮರದ ಹಾಗೆ ಫಲಭರಿತನಾಗಿರುತ್ತೇನೆ 
ನಾನು ಸಕಾಲದಲ್ಲಿ ಫಲ ನೀಡುವವನಾಗಿದ್ದೇನೆ
ನಾನು ಪ್ರಭುವಿನಲ್ಲಿ ಪಚ್ಚೆ ಪಸಿರುಗಳಿಂದ ತುಂಬಿರುವವನಾಗಿದ್ದೇನೆ
ನಾನು ವೃದ್ಧಾಪ್ಯದಲ್ಲಿಯೂ ತಾಜಾ ಹಾಗೂ ಸಮೃದ್ಧಿಯುಳ್ಳವನಾಗಿರುತ್ತೇನೆ
ನನ್ನ ಎಲೆಗಳು ಒಣಗುವುದಿಲ್ಲ ಮತ್ತು ನಾನು ಮಾಡುವ ಎಲ್ಲಾ ಕಾರ್ಯಗಳು ಸಮೃದ್ಧಿಯನ್ನು ಹೊಂದುತ್ತವೆ,ಯೇಸುವಿನ ನಾಮದಲ್ಲಿ. 
ಎಲ್ಲಾ ಕಾರ್ಯಗಳು ನನ್ನ ಒಳಿತಿಗಾಗಿ ಆಗುತ್ತಿವೆ,ಯೇಸುವಿನ ನಾಮದಲ್ಲಿ.
ಕ್ರಿಸ್ತಯೇಸುವಿನಲ್ಲಿ ನಾನು ಎಲ್ಲಾ ಆಧ್ಯಾತ್ಮಿಕ ಆಶೀರ್ವಾದಗಳನ್ನು ಸ್ವೀಕರಿಸಿರುವವನಾಗಿದ್ದೇನೆ

ನಾನು ಜೀವಿಸುವ ಆತ್ಮನಾಗಿದ್ದೇನೆ
ನನ್ನ  ಆತ್ಮವು ಪ್ರಾಣವನ್ನು ಹೊಂದಿದೆ
ನನ್ನ ಆತ್ಮ ಮತ್ತು ಪ್ರಾಣಗಳು ಭೌತಿಕ ಶರೀರದಲ್ಲಿ ನೆಲೆಸಿವೆ
ನನ್ನ ಆತ್ಮವು ನನ್ನ ಪ್ರಾಣಕ್ಕೆ ಆದೇಶಿಸುತ್ತದೆ, ನನ್ನ  ಪ್ರಾಣವು ಅದಕ್ಕೆ  ಕಿವಿಗೊಡುತ್ತದೆ, ಅದನ್ನು ಸ್ವೀಕರಿಸುತ್ತದೆ ಮತ್ತು  ನನ್ನ ದೇಹಕ್ಕೆ ಸೂಚನೆಗಳನ್ನು ನೀಡುತ್ತದೆ ಮತ್ತು  ಆಗ ನನ್ನ ಶರೀರವು ಅದಕ್ಕೆ ವಿಧೇಯವಾಗುತ್ತದೆ

ಯೇಸುವಿನ ನಾಮದಲ್ಲಿ,   ನಾನು ನನ್ನ ದೇಹಕ್ಕೆ ದೇವರ ಅಮರವಾದ ಜೀವವು ಸ್ಪಷ್ಟವಾದುದು ಮತ್ತು ಅದು ಯಾವಾಗಲೂ ನನ್ನ ಜೀವನದಲ್ಲಿ ವ್ಯಕ್ತವಾಗುತ್ತಿದೆ ಎಂದು  ನುಡಿಯುತ್ತೇನೆ,
ನಾನು ನನ್ನ ಶರೀರದ ಪ್ರತಿಯೊಂದು ವಿವರಣೆಗಳಿಗೆ  ಜೀವವನ್ನು ನುಡಿಯುತ್ತೇನೆ
ನಾನು ನನ್ನ ಮನಸ್ಸಿಗೆ ಕ್ರಿಸ್ತರ ಮನಸ್ಸಿನ ಹಾಗೆ ಪರಿಪೂರ್ಣವಾಗಿರುವಂತೆ ನುಡಿಯುತ್ತೇನೆ ಮತ್ತು ನೀನು ದೇವರ ವಾಕ್ಯದಿಂದ  ಸರಿ ಹೊಂದು ಎಂದು ನಿನಗೆ ಆದೇಶಿಸಿತ್ತೇನೆ
ನಾನು ನನ್ನ ಟೆಂಡನ್ ಗಳು ಮತ್ತು ನರಗಳಿಗೆ ಜೀವವನ್ನು ನುಡಿಯುತ್ತೇನೆ
ನಾನು ನನ್ನ ಸ್ನಾಯಗಳು  ಮತ್ತು ಸ್ನಾಯುಪದರಗಳಿಗೆ ಶಕ್ತಿಯನ್ನು ನುಡಿಯುತ್ತೇನೆ 
ನಾನು ನನ್ನ ಹೃದಯಕ್ಕೆ ಹುರುಪನ್ನು ನುಡಿಯುತ್ತೇನೆ 
ನಾನು ನನ್ನ ಶ್ವಾಸಕೋಶ ಮತ್ತು ಅದರ ಅಂಗಾಂಶಗಳಿಗೆ ಸರಿಯಾದ ಉಸಿರಾಟ ಮತ್ತು ಸಂಚಲನೆಯ ಅನುಪಾತವನ್ನು ಪಾಲಿಸಲು ನುಡಿಯುತ್ತೇನೆ
ನನ್ನ ಮೂತ್ರಕೋಶ, ಲಿವರ್ ಮತ್ತು ಪ್ಯಾಂಕ್ರಿಯಾಸ್ ಗಳಿಗೆ ಪರಿಪೂರ್ಣತೆಯನ್ನು ನುಡಿಯುತ್ತೇನೆ
ನನ್ನ ರಕ್ತದ ಪ್ರತಿಯೊಂದು ಕಣದಲ್ಲಿಯೂ ಜೀವವಿದೆ
ನನ್ನ ಮೂಳೆಗಳು, ಕೀಲುಗಳು ಮತ್ತು ಅಸ್ಥಿಮಜ್ಜೆಗಳು ಜೋಡಣೆಗೊಂಡಿವೆ, ಹಾಗೂ  ಶಕ್ತಿಭರಿತವಾಗಿಯೂ ಮತ್ತು ಸದೃಢವಾಗಿಯೂ ಇವೆ
ನನ್ನ ಬೆರಳುಗಳು ಅತ್ಯುತ್ತಮವಾಗಿ ಕಾರ್ಯ ಮಾಡುತ್ತವೆ.
ನನ್ನ  ಕಣ್ಣುಗಳು ಸ್ಪಷ್ಟವಾದ ಹಾಗೂ ಪರಿಪೂರ್ಣವಾದ ದೃಷ್ಟಿಯನ್ನು ಹೊಂದಿವೆ ಮತ್ತು 
ನನ್ನ ಕಿವಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ
ನನ್ನ ಚರ್ಮವು ಈಗ ತಾನೆ ಹುಟ್ಟಿದ ಮಗುವಿನ ಹಾಗೆಯೂ ಹಾಗೂ ದೇವರ ಸೌಂದರ್ಯದ ಹಾಗೆಯೂ  ಕೋಮಲವಾಗಿ ಹಾಗೂ ಆರೋಗ್ಯವಾಗಿಯೂ ಇದೆ
ನನ್ನ ಕೂದಲಿನ ಅಂಗಾಂಶಗಳು ಬಲವಾಗಿವೆ. ನನ್ನ  ಕೂದಲಿಗೆ ಸೂಕ್ತ ಸ್ಥಳದಲ್ಲಿ ಇರುವಂತೆ ಆದೇಶಿಸುತ್ತೇನೆ ಮತ್ತು ಎಲ್ಲಿ ಬೆಳವಣಿಗೆಯ ಅವಶ್ಯಕತೆ ಇದೆಯೋ ಆ ಅಂಗಾಂಶಗಳಿಗೆ ನಾನು ಬೆಳವಣಿಗೆಯನ್ನು ಆದೇಶಿಸುತ್ತೇನೆ
ನನ್ನ ಹಲ್ಲುಗಳು, ವಸಡುಗಳು,ದವಡೆ ಮೂಳೆಗಳು ಮತ್ತು ಅಲ್ಲಿನ ರಕ್ತ ಸಂಚಲನೆಗಳೆಲ್ಲವೂ ಆರೋಗ್ಯವಾಗಿಯೂ, ಬಲವಾಗಿಯೂ ಮತ್ತು  ಪರಿಪೂರ್ಣವಾಗಿಯೂ ಇವೆ
ನನ್ನ ಎಲ್ಲಾ ಹಾರ್ಮೋನುಗಳು ಮತ್ತು ನರಗಳ ರಾಸಾಯನಿಕ ವಾಹಕಗಳು ಪರಸ್ಪರ ಪರಿಪೂರ್ಣವಾದ  ಸೌಹಾರ್ದತೆಯಲ್ಲಿ ಇವೆ ಮತ್ತು ತಮ್ಮ ಕಾರ್ಯಗಳನ್ನು ಸಾಧಾರಣವಾಗಿ ನಿರ್ವಹಿಸುತ್ತಾ ಇವೆ.
ನನ್ನ ಜೀರ್ಣ ವ್ಯವಸ್ಥೆಯು ಜೀರ್ಣಿಸಲು, ,ಹೀರಲು ಮತ್ತು ಸೇವಿಸಿದ ಎಲ್ಲಾ  ಆಹಾರವನ್ನು  ಸಂಯೋಜಿಸಲು ಸಮರ್ಥವಾಗಿದೆ ಮತ್ತು ಜೀರ್ಣಕ್ರಿಯೆಯ ತ್ಯಾಜ್ಯ ವಸ್ತುಗಳು ನಿಯಮಿತವಾಗಿ ವಿಸರ್ಜಿಸಲ್ಪಡುತ್ತವೆ 
ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಬೇಕಾದಷ್ಟು ಮತ್ತು ಉತ್ತಮವಾದ ಚಲನೆಯನ್ನು ಹೊಂದಿರುವ ಒಳ್ಳೆಯ ವೀರ್ಯಾಣುಗಳನ್ನು ಉತ್ಪಾದಿಸಿ ಶೇಖರಿಸುತ್ತಾ ಇದೆ/ ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಸಮಯಕ್ಕೆ ಸರಿಯಾಗಿ ಅಂಡಾಶಯಗಳನ್ನು ಉತ್ಪಾದಿಸುತ್ತದೆ, ಭ್ರೂಣವನ್ನು ಹೆರಿಗೆಯ ಸಮಯದವರೆಗೂ ಸಂರಕ್ಷಿಸಿ ಪೋಷಿಸುತ್ತದೆ                                                                                                        
ನನ್ನ ಶರೀರದ ಪ್ರತಿಯೊಂದು ಅಂಗಾಂಗವೂ,ಪ್ರತಿಯೊಂದು ಅಂಗಾಂಶವೂ ಅದನ್ನು ದೇವರು ಯಾವ ಕಾರ್ಯವನ್ನು ಮಾಡಲು ಸೃಷ್ಟಿಸಿದರೊ ಆ ಕಾರ್ಯವನ್ನು ಅದು ಪರಿಪೂರ್ಣವಾಗಿ  ಮಾಡುತ್ತಿದೆ ಮತ್ತು ನಾನು ನನ್ನ ದೇಹದಲ್ಲಿ  ಯಾವುದೇ ರೀತಿಯ  ಅಸಮರ್ಪಕವಾದ ಕ್ರಿಯೆ ಮತ್ತು ಅಸಮರ್ಪಕವಾದ ರಚನೆಯನ್ನು ವರ್ಜಿಸುತ್ತೇನೆ,ಯೇಸುವಿನ ನಾಮದಲ್ಲಿ. 
ನನ್ನ ಸಂಪೂರ್ಣ ಮಾನವ ಅಂಗರಚನೆ ಮತ್ತು ಶರೀರ ರಚನೆಯು ಕ್ರಿಸ್ತ ಯೇಸುವಿನಲ್ಲಿ ಪರಿಪೂರ್ಣವಾಗಿದೆ. ಅಲ್ಲೇಲ್ಲೂಯ! ಆಮೆನ್.     
                        
ಪಿತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಸುತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಪವಿತ್ರಾತ್ಮ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ

ಮಹೋನ್ನತದಿ ದೇವರಿಗೆ ಸ್ತುತಿಯೂ ಮತ್ತು ಮಹಿಮೆಯೂ ಸಲ್ಲಲಿ

Archives

December 27

FAITH DECLARATIONS I DECLARE I am equipped for every good work God has planned for me. I am anointed and empowered by The Creator of the universe. Every bondage, every

Continue Reading »

December 26

FAITH DECLARATIONS I DECLARE I survive, I thrive, I prosper despite every difficulty that may come my way. I know every setback is a setup for a comeback. I do

Continue Reading »

December 17

FAITH DECLARATIONS I DECLARE I put actions behind my faith. I demonstrate my faith by taking bold steps to move towards what God has put in my heart. My faith

Continue Reading »

December 16

FAITH DECLARATIONS I DECLARE that I live as a healer I am sensitive to the needs of those around me. I lift the fallen, restore the broken, and encourage the

Continue Reading »

December 15

FAITH DECLARATIONS I DECLARE that I have a sound mind filled with good thoughts, not thoughts of defeat. By faith, I am well able. I am anointed. I am equipped.

Continue Reading »

December 14

FAITH DECLARATIONS I DECLARE that I use my words to bless people. I speak favor and victory over my family, friends, and loved ones. I help call out their seeds

Continue Reading »

December 13

FAITH DECLARATIONS I DECLARE that I am walking in new seasons of growth. I don’t get stagnant nor hold on to the old. I am open to change knowing that

Continue Reading »

December 12

FAITH DECLARATIONS I DECLARE I am special, extraordinary and supernatural. I am not average! I have been custom- made. I am one of a kind. Of all the things God

Continue Reading »

December 11

FAITH DECLARATIONS I DECLARE Ephesians 3:20 over my life. God does exceedingly, abundantly above all that I ask or think. I honor God and seek Him First and all His

Continue Reading »