ನಿಮ್ಮ ದೃಷ್ಟಿಕೋನವನ್ನು ದೇವರ ವಾಗ್ದಾನಗಳಿಗೆ ಬದಲಾಯಿಸುವ ಸಮಯ ಇದಾಗಿದೆ.
ನೀವು ಸಿಲುಕಿಕೊಂಡವರಾಗಿದ್ದೀರ ಎಂದು ನೀವು ಭಾವಿಸಿದರೆ, ನಿಮಗಾಗಿ ಉದ್ದೇಶಿಸದೇ ಇರುವ ಮಾರ್ಗವನ್ನು ತೆಗೆದುಕೊಳ್ಳಬೇಡಿ – ನೀವು ಮಾಡದಿದ್ದಲ್ಲಿ ಯಾವಾಗಲೂ ದೇವರ ಮಾರ್ಗದರ್ಶನವನ್ನು ಪಡೆಯಿರಿ, ನೀವು ತರಾತುರಿಯಲ್ಲಿ ಸಾಗುವ ಮಾರ್ಗಗಳು ನಾಶ ಮತ್ತು ವಿನಾಶಕ್ಕೆ ಕಾರಣವಾಗಬಹುದು.
ನಮ್ಮ ಜೀವನಕ್ಕಾಗಿ ಇರುವ ದೇವರ ಉದ್ದೇಶಗಳೊಂದಿಗೆ ಧೈರ್ಯದಿಂದ ಮುಂದುವರಿಯಲು ನಾವು ವಿಫಲರಾಗಿದ್ದೇವೆ ಎಂದು ನಾವು ನಂಬಬೇಕೆಂದು ಶತ್ರು ಬಯಸುತ್ತಾನೆ. ನಾವು ಸೋತುಹೋಗಿದ್ದೇವೆ ಎಂದು ಭಾವಿಸಲು ಶತ್ರುವು ಬಯಸುತ್ತಾನೆ.
ಆದರೆ ನೀವು ನಿಮ್ಮ ದೇವರನ್ನು ಅರಿತಾಗ, ನೀವು ಯಾರಾಗಬೇಕೆಂದು ದೇವರು ಬಯಸುತ್ತಾರೋ ಅವೆಲ್ಲವೂ ನೀವಾಗಲು ವಿಶ್ವಾಸ ಮತ್ತು ತಾಳ್ಮೆಯಿಂದ ಪ್ರಕ್ರಿಯೆಯನ್ನು ಮುಂದುವರಿಸುವುದು ಸುಲಭ.
ನಾವು ನಮ್ಮ ಪ್ರಾರ್ಥನೆಯ ಗಮನವನ್ನು ನಮ್ಮ ಚಿತ್ತದಿಂದ ಆತನ ಚಿತ್ತಕ್ಕೆ ಬದಲಾಯಿಸಿದಾಗ, ವಿಷಯಗಳು ಬದಲಾಗುತ್ತವೆ. ನಮ್ಮ ಕಣ್ಣುಗಳು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಪ್ರಾರಂಭಿಸುತ್ತವೆ. ಈ ವರ್ಷ ನಾವು ಹುಡುಕುತ್ತಿರುವ ಹೊಸ ಆರಂಭವನ್ನು ಹಿಡಿದಿಟ್ಟುಕೊಳ್ಳಬಹುದು – ಮತ್ತು ಇದು ನಮ್ಮ ಹೃದಯಗಳನ್ನು ಮರುಹೊಂದಿಸುವುದರೊಂದಿಗೆ ಪ್ರಾರಂಭವಾಗುತ್ತದೆ.
ಹಿಂದೆ ನಾವು ಎಷ್ಟೇ ಬಾರಿ ವಿಫಲರಾಗಿದ್ದರೂ, ಆ ಹೊಸ ಕರುಣೆಗಳನ್ನು ನಂಬಲು ನಾವು ಆಯ್ಕೆಮಾಡಿಕೊಳ್ಳಬೇಕು, ತಂದೆ ದೇವರ ವಿಮೋಚನೆಯ(ಬಿಡುಗಡೆಯ) ಪ್ರೀತಿ, ಮತ್ತು ಪವಿತ್ರಾತ್ಮರು ನಿಜವಾಗಿಯೂ ನಮ್ಮಲ್ಲಿ ನೆಲೆಸಿದ್ದಾರೆ ಮತ್ತು ನಮ್ಮನ್ನು ಬಲಪಡಿಸುತ್ತಾರೆ ಮತ್ತು ವಿಶ್ವಾಸದ ಧೈರ್ಯದಿಂದ ಜೀವಿಸಲು ನಮಗೆ ಶಕ್ತಿ ನೀಡುತ್ತಾರೆ.
‘’ನನ್ನನ್ನು ಹುಡುಕುವಿರಿ; ಪೂರ್ಣ ಹೃದಯದಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ…..’’ (ಯೆರೆಮೀಯ 29:13)
January 15
Know that the Lord is God. It is he who made us, and we are his; we are his people, the sheep of his pasture. —Psalm 100:3. God made us and