“ವಿಶ್ವಾಸ” ಎಂಬ ಪದವನ್ನು ಸುವಾರ್ತೆಗಳಲ್ಲಿ ಹೆಚ್ಚಾಗಿ ಬಳಸಲಾಗಿದೆ.
ಅನಿಶ್ಚಿತತೆ ಮತ್ತು ಕಷ್ಟಕರ ಸಮಯವನ್ನು ನಾವು ಎದುರಿಸುವಾಗ ದೇವರ ಪ್ರಸನ್ನತೆ ಮತ್ತು ಶಕ್ತಿಯನ್ನು ಮರೆಯುವುದು ಬಹಳ ಸುಲಭ.
ನಮ್ಮ ವಿಶ್ವಾಸ ಕುಸಿಯುತ್ತದೆ ಮತ್ತು ದೇವರು ನಮ್ಮೊಂದಿಗಿದ್ದಾರಾ ಎಂದು ನಾವು ಅನುಮಾನಿಸುತ್ತೇವೆ, ಕೆಲವೊಮ್ಮೆ ಆತ ನಿಜವಾಗಿ ಇರುವವರಾಗಿದ್ದಾರಾ ಮತ್ತು ಅವರು ಯಾರೆಂದು ಹೇಳುತ್ತಾರೋ ಅದೇ ಅವರಾಗಿದ್ದಾರಾ ಎಂದು ಕೂಡ ಸಂಶಯಿಸುತ್ತೇವೆ.
ನಾವು ಅವಿಶ್ವಾಸದೊಂದಿಗೆ ಹೆಣಗಾಡುತ್ತೇವೆ ಎಂದು ದೇವರಿಗೆ ತಿಳಿದಿತ್ತು ಮತ್ತು ಅವರು ಬೈಬಲ್ ಮೂಲಕ ನಮಗೆ ಭರವಸೆಯ ಮಾತುಗಳನ್ನು/ವಾಕ್ಯಗಳನ್ನು ನುಡಿದಿದ್ದಾರೆ.
ರೋಗಲಕ್ಷಣಗಳ ಹೊರತಾಗಿಯೂ ಮತ್ತು ಕಣ್ಣಿನಿಂದ ಏನು ನೋಡುತ್ತಿರುವಿರೋ ಅದರ ಹೊರತಾಗಿಯೂ ಜನರಲ್ಲಿ ಮತ್ತು ಸನ್ನಿವೇಶಗಳಲ್ಲಿ ಅತ್ಯುತ್ತಮವಾದುದನ್ನು ನಂಬಲು ಆಯ್ಕೆ ಮಾಡಿಕೊಳ್ಳಿ ಏಕೆಂದರೆ ನಾವು ಹಾಗೆಯೇ ಮಾಡಬೇಕೆಂದು ದೇವರ ವಾಕ್ಯವು ಹೇಳುತ್ತದೆ ಮತ್ತು ಉಳಿದದ್ದನ್ನು ದೇವರು ಮಾಡುತ್ತಾರೆ ಮತ್ತು ನಿಮ್ಮನ್ನು ಗೌರವಿಸುತ್ತಾರೆ.
ವಿಶ್ವಾಸವು ಕಣ್ಣಿಗೆ ಕಾಣದಿರುವುದನ್ನು ನಂಬುವುದಾಗಿದೆ ಮತ್ತು ದೇವರು ವಿಶ್ವಾಸವನ್ನು ಮೆಚ್ಚುತ್ತಾರೆ.
”ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ….(ಮಾರ್ಕ್ 11:24)
May 10
He who heeds discipline shows the way to life, but whoever ignores correction leads others astray. —Proverbs 10:17. Discipline is not only essential for us, but also for those who