ದೇವರು ಯಾವಾಗಲೂ ನಿಮ್ಮ ಹಿತಾಸಕ್ತಿಯನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೆ ಎಂದು ನೀವು ನಂಬಿದಾಗ, ಆತನು ಮಾಡುವ ಆದರೆ ನಿಮಗೆ ಅರ್ಥವಾಗದಿರುವ ಕಾರ್ಯಗಳನ್ನು ನೀವು ಹೊಸ ಕಣ್ಣುಗಳಿಂದ/ದೃಷ್ಠಿಯಿಂದ ನೋಡಬಹುದು.
ನಿಮ್ಮ ಜೀವನದಲ್ಲಿ ದೇವರ ಕಾರ್ಯವನ್ನು ವಿರೋಧಿಸಬೇಡಿ ಅಥವಾ ಅಸಮಾಧಾನಗೊಳ್ಳಬೇಡಿ – ಯಾವಾಗಲೂ ನಿಮ್ಮ ಒಳಿತಿಗಾಗಿ ಇರುವ ಆ ಸತ್ಯದಲ್ಲಿ ವಿಶ್ರಾಂತಿಯಿಂದಿರಿ.
ಸರಿಯಾದ ಸಮಯ ಬಂದಾಗ, ಅಭಿಷಿಕ್ತನಾದಾತನು ಬಂದು; ತಮ್ಮನ್ನು ತಾವು ಸಂಪೂರ್ಣವಾಗಿ ರಕ್ಷಿಸಿಕೊಳ್ಳಲು ಅಸಹಾಯಕರು, ದುರ್ಬಲರು ಮತ್ತು ಶಕ್ತಿಹೀನರಾಗಿದ್ದ ಪಾಪಿಗಳ(ನೀವು ಮತ್ತು ನಾನು) ಮೇಲೆ ತನ್ನ ಪ್ರೀತಿಯನ್ನು ತೋರಿಸಲು ತಮ್ಮ ಪ್ರಾಣವನ್ನೇ ಕೊಟ್ಟರು. ಅನೀತಿವಂತ ವ್ಯಕ್ತಿಯ ಸಲುವಾಗಿ ಯಾರಾದರೂ ಪ್ರಾಣ ಕೊಡಲು ಧೈರ್ಯ ಮಾಡುತ್ತಾರೆಯೇ? ಒಬ್ಬ ಒಳ್ಳೆಯ ವ್ಯಕ್ತಿಗಾಗಿ ಯಾರಾದರೂ ಸಾಯಲು ಸಿದ್ಧರಿದ್ದರೆ ನಾವೆಲ್ಲರೂ ಅರ್ಥಮಾಡಿಕೊಳ್ಳಬಹುದು. ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾನೆ.
”ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ?…..”(ರೋಮ 8:32)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also