ದೇವರು ತನ್ನ ವಾಕ್ಯದಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಏನೆಂದು ಹೇಳಿರುವರೋ ಅದರ ಕಡೆಗೇ ನೀವು ನಿಮ್ಮ ಗಮನವನ್ನು ಕೇಂದ್ರೀಕರಿಸುವುದಾದರೆ; ಅದು ಪ್ರಕಟಗೊಳ್ಳಲು/ಅದ್ಭುತವನ್ನು ಕಾಣಲು ಆ ಗಮನ, ಆ ದರ್ಶನ(Vision), ಆ ನಂಬಿಕೆ ಮತ್ತು ಕ್ರಿಯೆ ಅಥವಾ ಕಾರ್ಯದಿಂದ ತೋರ್ಪಡಿಸುವುದನ್ನು ಅದು ಬಯಸುತ್ತದೆ.
ಅಡೆತಡೆಗಳನ್ನು ಲೆಕ್ಕಿಸದೆ ಕೇಂದ್ರೀಕೃತ ಮನೋಭಾವವನ್ನು ಕಾಪಾಡಿಕೊಳ್ಳುವುದು; ನೀವು ಯಶಸ್ವಿಯಾಗುವವರೆಗೂ ಅದನ್ನು ಬಿಟ್ಟುಕೊಡದಂತೆ ನಿಮ್ಮನ್ನು ಬಲಪಡಿಸಲು ಕಾರಣವಾಗುತ್ತದೆ.
ನಿಜವಾದ ನಂಬಿಕೆ ಎಂದರೆ ನಿಮ್ಮ ಸುತ್ತಲಿರುವ ಲೋಕ ಕುಸಿದು ಹೋಗುತ್ತಿರುವಾಗಲೂ ನಿಮ್ಮ ಗಮನವನ್ನು ಅಥವಾ ದೃಷ್ಟಿಯನ್ನು ದೇವರ ಮೇಲೆ ಇರಿಸುವುದಾಗಿದೆ.
ನಿಮ್ಮ ಆಲೋಚನೆಗಳನ್ನು ನೀವು ದೇವರ ಮೇಲೆ ಸ್ಥಿರಪಡಿಸುವುದಾದರೆ, ದೇವರು ನಿಮ್ಮ ಆಲೋಚನೆಗಳನ್ನು ಸರಿಪಡಿಸುತ್ತಾರೆ/ಸ್ಥಿರಪಡಿಸುತ್ತಾರೆ
ದೇವರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ, ನಿಮ್ಮ ಸಮಸ್ಯೆಯ ಕಡೆಗಲ್ಲ. ದೇವರು ಹೇಳುವುದನ್ನು ಆಲಿಸಿ, ನಿಮ್ಮ ಅಭದ್ರತೆಯನ್ನಲ್ಲ. ದೇವರನ್ನು ಅವಲಂಬಿಸಿಕೊಳ್ಳಿ, ನಿಮ್ಮ ಸ್ವಂತ ಶಕ್ತಿಯನಲ್ಲ.
ನೀವು ಸಿಂಹದಂತೆ ಘರ್ಜಿಸಬಹುದು ಆದರೆ ದೇವರಿಗೆ ಒಂದೇ ಒಂದು ವಿಷಯವನ್ನೂ ಹೇಳಲಾಗದು. ನೀವು ಧೈರ್ಯದಿಂದ ಕಿರುಚಾಡಿ ಕೂಗಾಡಿ ಪ್ರಾರ್ಥಿಸಬಹುದು, ಆದರೂ ನಿಮ್ಮ ಪ್ರಾರ್ಥನೆಯು ಇನ್ನೂ ಸ್ವರ್ಗವನ್ನು ಮುಟ್ಟಲಾರದು/ತಲುಪಲಾರದು. ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ! ನೀವು ಕೇವಲ ಪ್ರಾರ್ಥನೆಯ ನುಡಿಗಳನ್ನು ಎಲ್ಲೆಡೆ ಎಸೆಯುತ್ತಿದ್ದೀರಾ ಅಥವಾ ನೀವು ಅದರ ಕಡೆ ಗಮನವನ್ನು ಕೊಡುತ್ತಿದ್ದೀರಾ? ದೇವರು ಹೃದಯವನ್ನು ನೋಡುವವರಾಗಿದ್ದಾರೆ. ಅಸಂಬದ್ಧ ಮತ್ತು ಪುನರಾವರ್ತಿತ ವಿಷಯಗಳನ್ನು ಹೇಳುವ ಆದರೆ ದೇವರ ವಿಷಯವಾಗಿ ಒಮ್ಮೆಯೂ ಯೋಚಿಸದ ಜನರಿದ್ದಾರೆ. ನಿಮ್ಮ ಬಾಯಿಯಿಂದ ಹೊರಬರುವ ನುಡಿಗಳೊಂದಿಗೆ/ಮಾತಿನೊಂದಿಗೆ ನಿಮ್ಮ ಹೃದಯವು ಹೊಂದಾಣಿಕೆಯಲ್ಲಿದೆಯೇ?
ಆತನ ಮೇಲೆ ಹೆಚ್ಚಾಗಿ ಗಮನಹರಿಸಲು ಹೋರಾಡಿ! ಹಣಕಾಸಿನ ಮೇಲಲ್ಲ, ಕುಟುಂಬದ ಮೇಲಲ್ಲ ಸಭೆಯ ಮೇಲಲ್ಲ, ಆದರೆ ಆತನ ಮೇಲೆ.
ದೇವರೊಂದಿಗಿನ ನನ್ನ ಸಂಬಂಧವೇ ನನ್ನ ಮೊದಲ ಆದ್ಯತೆ/ಗಮನವಾಗಿದೆ. ನಾನು ಅದನ್ನು ಮಾಡುವುದಾದರೆ, ಉಳಿದೆಲ್ಲವನ್ನೂ ದೇವರು ನೋಡಿಕೊಳ್ಳುತ್ತಾರೆ ಎಂದು ನನಗೆ ತಿಳಿದಿದೆ.
ನನ್ನ ಬಲವೂ ನನ್ನ ವಿಮೋಚಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.
”ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು. ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು. ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.”….”(ಕೀರ್ತನೆ 91:14-16)
January 15
Know that the Lord is God. It is he who made us, and we are his; we are his people, the sheep of his pasture. —Psalm 100:3. God made us and