ದೇವರ ವೇಳಾಪಟ್ಟಿ ಅಪರೂಪವಾಗಿ ನಿಮ್ಮಂತೆಯೇ ಇರುತ್ತದೆ; ನೀವು ಆಗಾಗ್ಗೆ ಅವಸರಪಡುತ್ತೀರಿ – ಆದರೆ ದೇವರು ಹಾಗಲ್ಲ.
ನಿಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೀವು ಮಾಡುತ್ತಿರುವ ಪ್ರಗತಿಯು ನಿಧಾನವಾಗಿದ್ದಾಗ ಅದು ನಿರಾಶಾದಾಯಕವಾಗಿರುತ್ತದೆ, ಆದರೆ ನೆನಪಿಡಿ, ದೇವರು ಯಾವಾಗಲೂ ಸಮಯಕ್ಕೆ ಸರಿಯಾಗಿ ಇರುತ್ತಾರೆ.
ಶಾಶ್ವತ ಜೀವನದಲ್ಲಿನ ನೀವು ನಿರ್ವಹಿಸಬೇಕಾದ ಪಾತ್ರಕ್ಕಾಗಿ ನಿಮ್ಮನ್ನು ಸಿದ್ಧಪಡಿಸಲು ಅವರು ನಿಮ್ಮ ಇಡೀ ಜೀವಿತಾವಧಿಯನ್ನು ಬಳಸುತ್ತಾರೆ – ಅವರನ್ನು ನಂಬಿರಿ/ಭರವಸೆ ಇಡಿ.
ನೀವು ಯಾರಾಗಬೇಕಾಗಿದ್ದೀರೋ ಅದನ್ನು ಮಾಡಲು ಅವರು ಇನ್ನೂ ನಿಮ್ಮ ಮೇಲೆ ಕಾರ್ಯ ಮಾಡುತ್ತಿದ್ದಾರೆ.
ನಾವು ದೊಡ್ಡ ಚಿತ್ರಣವನ್ನು ನೋಡದಿದ್ದರೂ ಆದರೆ ಅದರ ಒಂದೇ ಒಂದು ಸಣ್ಣ ತುಣುಕನ್ನು ಮಾತ್ರ ಕಂಡರೂ ಸಹ; ದೇವರ ಸಮಯವು ಯಾವಾಗಲೂ ಪರಿಪೂರ್ಣವಾಗಿದೆ.
ದೇವರ ಪರಿಪೂರ್ಣ ಸಮಯವು ಎರಡು ಕಾರ್ಯಗಳನ್ನು ಮಾಡುತ್ತದೆ: ದೇವರಲ್ಲಿ ಭರವಸೆಯಿಡಲು ಕಾಯಲು ನಮ್ಮನ್ನು ನಾವು ಬಲವಂತಗೊಳಿಸಿಕೊಂಡಾಗ ಅದು ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವರು ಮತ್ತು ಅವರು ಮಾತ್ರ ನಮ್ಮನ್ನು ಇದರಲ್ಲಿ ಎಳೆದುತಂದಿದಕ್ಕಾಗಿ ಮಹಿಮೆ ಮತ್ತು ಹೊಗಳಿಕೆಯನ್ನು ಹೊಂದುತ್ತಾರೆ.
ದೇವರು ಶಾಶ್ವತವಾದ ದೃಷ್ಟಿಕೋನ ಹೊಂದಿದ್ದಾರೆ! ದೇವರು ಮಹಾನ್ ಶಕ್ತರು “ನಾನು” (ಯಾವೇ) ಅವರು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ತಿಳಿದಿದ್ದಾರೆ.
ಮತ್ತು ನಮಗೇನು ಗೊತ್ತು? ನಿಜವಾಗಿಯೂ ಏನೂ ಇಲ್ಲ. ದೇವರಿಗೆ ಹೋಲಿಸಿದರೆ ಯಾವುದೂ ಗೊತ್ತಿಲ್ಲ.
ಯೇಸುವಾಗಿದ್ದರೆ, ನಾನು ಈಗಲೇ ಲಾಜರನನ್ನು ಗುಣಪಡಿಸುತ್ತಿದ್ದೆ. ಆದರೆ ಯೇಸು ತನ್ನ ಶಿಷ್ಯರ ವಿಶ್ವಾಸವನ್ನು ವಿಸ್ತರಿಸಲು ಬಯಸಿದ್ದರು, ಅವರ ಮರಣದ ನಂತರ ಕ್ರಿಸ್ತನ ಸಂದೇಶವನ್ನು ಜಗತ್ತಿಗೆ ಕೊಂಡೊಯ್ಯುವ ಕ್ರಿಯಾವರ್ಧಕಗಳಾಗಿ. ಯೇಸು ಜನರನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದಾರೆಂದು ಅವರಿಗೆ ತಿಳಿದಿತ್ತು – ಆದರೆ 4 ದಿನಗಳ ಹಳೆಯ ಶವವನ್ನು ಎಬ್ಬಿಸಲು? ಅರಿಯಿರಿ, ಅದು ವಿಶ್ವಾಸವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.
”ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ” (ಪ್ರಸಂಗಿ 3:1)
May 10
He who heeds discipline shows the way to life, but whoever ignores correction leads others astray. —Proverbs 10:17. Discipline is not only essential for us, but also for those who