ಅನೇಕರು ಸಮಸ್ಯೆಗಳಿಂದ ಬಿಡುಗಡೆ/ಚೇತರಿಕೆ/ಪರಿಹಾರ ಕಾಣಲು; ಪ್ರಾರ್ಥನೆಯಿಂದ ದೇವರ ಕಡೆಗೆ ತಿರುಗದೆ ಅಥವಾ ದೇವರನ್ನು ಅವಲಂಬಿಸದೆ ತಮ್ಮ ಸ್ವಂತ ಶಕ್ತಿಯಿಂದ ಪ್ರಯತ್ನಿಸುತ್ತಾರೆ – ಇದು ಎಂದಿಗೂ ಕಾರ್ಯ ಮಾಡುವುದಿಲ್ಲ ಏಕೆಂದರೆ ಪ್ರಾರ್ಥನೆಯಿಲ್ಲದೆ ಶಾಶ್ವತವಾದ ಪರಿಹಾರ ಇಲ್ಲ.
ನಿಮ್ಮ ಎಲ್ಲಾ ಕಾಳಜಿಗಳನ್ನು, ನಿಮ್ಮ ಎಲ್ಲಾ ಆತಂಕಗಳನ್ನು, ನಿಮ್ಮ ಎಲ್ಲಾ ಚಿಂತೆಗಳನ್ನು ಮತ್ತು ನಿಮ್ಮ ಎಲ್ಲಾ ಭಾರಗಳನ್ನು ಒಮ್ಮೆ ಒಂದೇ ಬಾರಿಗೆ ಆತನ ಮೇಲೆ ಹಾಕಿರಿ/ಎಸೆಯಿರಿ, ಏಕೆಂದರೆ ಆತನು ನಿಮ್ಮ ಬಗ್ಗೆ ಆಳವಾದ ಪ್ರೀತಿಯಿಂದ ಕಾಳಜಿ ವಹಿಸುತ್ತಾರೆ ಮತ್ತು ನಿಮ್ಮನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ/ಕಾಪಾಡುತ್ತಾರೆ
ಆದ ಕಾರಣ ನಾನು ನಿಮಗೆ ಹೇಳುವದೇನಂದರೆ–ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸುತ್ತೀರೋ ಅವು ನಿಮಗೆ ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ.
ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ. (ಫಿಲಿಪ್ಪಿ 4:6-7)
April 2
But God chose the foolish things of the world to shame the wise; God chose the weak things of the world to shame the strong. —1 Corinthians 1:27. The Cross