Welcome to JCILM GLOBAL

Helpline # +91 94453 51292 (Give A Missed Call)

ಋತುಗಳು ಮಾರ್ಪಾಡಾಗುತ್ತವೆ ಹಾಗು ಬದಲಾಗುತ್ತವೆ, ಇದರಿಂದ ಜೀವನ ಮತ್ತು ಜೀವನದ ಸಂದರ್ಭಗಳು ಬದಲಾವಣೆಗಳನ್ನು ತರುತ್ತವೆ ಆದರೆ ಒಳ್ಳೆಯ ಸುದ್ದಿ ಏನೆಂದರೆ ದೇವರು ಬದಲಾಗುವುದಿಲ್ಲ! ದೇವರು ನಿನ್ನೆ, ಇಂದು ಮತ್ತು ಎಂದೆಂದಿಗೂ ಹಾಗೆಯೇ ಇರುತ್ತಾರೆ.
ಆತನು ಎಂದೆಂದಿಗೂ ನಂಬಿಗಸ್ಥ..!!
ಈ ಸತ್ಯವನ್ನು ನೆನಪಿಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ ಏಕೆಂದರೆ ಇದು ಪರಿವರ್ತನೆ ಮತ್ತು ಬದಲಾವಣೆಯ ಸಮಯದಲ್ಲಿ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ.
ನಿಮ್ಮ ಪ್ರಸ್ತುತ ಋತುವು(ಪರಿಸ್ಥಿತಿಯು) ನಿಮ್ಮ ಶಾಶ್ವತ ಋತುವಲ್ಲ. ಚಿಂತಿಸಬೇಡಿ!..
ಇಂದು ನಾವು ಯಾವ ಋತುವಿನಲ್ಲಿ ನಮ್ಮನ್ನು ಕಂಡುಕೊಳ್ಳಬಹುದು ಎಂಬುದರ ಹೊರತಾಗಿಯೂ, ಋತುಗಳು ಬದಲಾಗುತ್ತವೆ ಎಂಬುದನ್ನು ನೆನಪಿಡಿ. ಈ ಪ್ರಕ್ರಿಯೆಯಲ್ಲಿ ದೇವರನ್ನು ನಂಬಿರಿ ಮತ್ತು ಜೀವನದ ಋತುಗಳ ಬದಲಾವಣೆಯನ್ನು ಲೆಕ್ಕಿಸದೆಯೇ, ನಮ್ಮ ದೇವರಾದ ಕರ್ತನು ತನ್ನ ವಾಕ್ಯಕ್ಕೆ ನಂಬಿಗಸ್ತನಾಗಿ ಮತ್ತು ಸತ್ಯವಾಗಿ ಉಳಿಯುತ್ತಾರೆ ಎಂಬುದನ್ನು ನೀವು ನೋಡುತ್ತೀರಿ..
ದೇವರು ನಿಮಗೆ ಏನು ವಾಗ್ದಾನ ಮಾಡಿದ್ದಾರೆಯೋ ಅದನ್ನು ಅವರು ನೆರವೇರಿಸುತ್ತಾರೆ!
ಅವರ ಯೋಜನೆಗಳು ಮತ್ತು ವಾಗ್ದಾನಗಳು ಎಂದಿಗೂ ಬದಲಾಗುವುದಿಲ್ಲ! ಅವರ ವಾಗ್ದಾನಗಳು ಅಬ್ರಹಾಮ, ಮೋಶೆ ಮತ್ತು ದಾವೀದನಿಗೆ ಸತ್ಯವಾಗಿದ್ದವು ಮತ್ತು ಅದೇ ರೀತಿ ಅವು ನಿಮಗೂ ನನಗೂ ಸತ್ಯವಾಗಿವೆ..
ಇದು ಸಾಂತ್ವನವನ್ನು ತರುತ್ತದೆ ಮತ್ತು ನಮಗೆ ನಿರೀಕ್ಷೆಯನ್ನು ನೀಡುತ್ತದೆ ಏಕೆಂದರೆ ಇದರರ್ಥ ನಾವು ಆತನ ಮೇಲೆ ಅವಲಂಬಿತರಾಗಬಹುದು ಎಂದು. ಆತನು ನಂಬಿಗಸ್ಥ, ಪ್ರೀತಿ ಮತ್ತು ದಯೆ, ಕರುಣಾಮಯಿ, ನ್ಯಾಯಯುತ, ಒಳ್ಳೆಯ ಅಥವಾ ಬುದ್ಧಿವಂತನಾಗಿರುವುದನ್ನು ನಿಲ್ಲಿಸುವುದಿಲ್ಲ..
ಅದು ಆಗುವುದಿಲ್ಲ ಏಕೆಂದರೆ ಅದು ಅವರಿಗೆ ಸಾಧ್ಯವಿಲ್ಲ!
ಆದ್ದರಿಂದ, ನಾವು ಬೈಬಲ್ ಅಲ್ಲಿ ಅವರ ವಾಕ್ಯಗಳನ್ನು ಓದಿದಾಗ, ಅದು ಹೇಳುತ್ತದೆ ”ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ ಎಂದು.”, ( ಧರ್ಮೋ 31:8 )ಆದ್ದರಿಂದ ನಾವು ಈ ಹಾದಿಯಲ್ಲಿ ಏಕಾಂಗಿಯಾಗಿ ನಡೆಯುತ್ತಿಲ್ಲ ಎಂದು ನಾವು ಖಚಿತವಾಗಿ ಹೇಳಬಹುದು..
ಬದಲಾವಣೆಯ ಋತುಗಳಲ್ಲಿ, ದೇವರಿಗೆ ಕಿವಿಗೊಡುವುದು ಮತ್ತು ಆತನ ವಾಕ್ಯದಲ್ಲಿ ನಂಬಿಕೆ ಇಡುವುದು ನಮ್ಮ ಕೆಲಸ. ನಾವು ಬಿಟ್ಟುಕೊಡಲು ಬಯಸಿದಾಗಲೂ ನಂಬಿಗಸ್ತರಾಗಿಯೇ ಉಳಿಯುವುದು ನಮ್ಮ ಕರೆಯಾಗಿದೆ..
ದೇವರು ತನ್ನ ಮಕ್ಕಳಾದ ನಮ್ಮಿಂದ ಬಯಸುವುದು ಏನೆಂದರೆ, ನಾವು ಆತನ ವಾಕ್ಯವನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು ಮತ್ತು ದೇವರು ಏನನ್ನಾದರೂ ಮಾಡಲು ಉದ್ದೇಶಿಸಿದಾಗಲೆಲ್ಲಾ ತಪ್ಪುಗಳನ್ನು ಮಾಡುವುದಿಲ್ಲ ಅಥವಾ ಅವರ ಮನಸ್ಸನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ನಮಗೆ ನಾವೇ ನೆನಪಿಸಿಕೊಳ್ಳಬೇಕು ಎಂದು..
’’ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ….’’( ಯೆಶಾಯ 43:2,5)

Archives

May 12

There is now no condemnation for those who are in Christ Jesus, because through Christ Jesus the law of the Spirit of life in Christ has set me free from

Continue Reading »

May 11

If your brother sins against you, go and show him his fault, just between the two of you. If he listens to you, you have won your brother over. —Matthew

Continue Reading »

May 10

If your brother sins against you, go and show him his fault, just between the two of you. If he listens to you, you have won your brother over. —Matthew

Continue Reading »