ಶೂನ್ಯತೆಯು ದೇವರ ಬಳಿಗೆ ಹೋಗಲು ಎಚ್ಚರಿಕೆಯ ಕರೆಯಾಗಿದೆ, ನಮ್ಮ ಸುತ್ತಮುತ್ತಲಿನ ಎಲ್ಲವೂ ಶೂನ್ಯವಾಗಿ ಉಳಿದಿದ್ದರೂ ಸಹ, ಅವರೊಬ್ಬರೇ, ಆ ಶೂನ್ಯವನ್ನು ಸಂಪೂರ್ಣತೆಗೆ ಪರಿವರ್ತಿಸುವ ಮತ್ತು ಅವರ ಸಂಪೂರ್ಣತೆ ಮತ್ತು ಆಶೀರ್ವಾದದಿಂದ ನಮ್ಮನ್ನು ತುಂಬಿಸುವ ಏಕೈಕ ಮೂಲವಾಗಿದ್ದಾರೆ..
ಆತನು ಬಂದು ನಿಮ್ಮ ಜೀವನದ ಪ್ರತಿಯೊಂದು ಶೂನ್ಯವನ್ನು ತುಂಬುವವರೆಗೂ ದೇವರನ್ನು ಹೆಚ್ಚು ಹೆಚ್ಚು ಅಪೇಕ್ಷಿಸುವವರಾಗಿರಿ/ಬಯಸುವವರಾಗಿರಿ..
ನೀವು ಹುಡುಕುತ್ತಿರುವ/ಅರಸುತ್ತಿರುವ ಪ್ರತಿಯೊಂದು ಉತ್ತರವೂ ಆತನೇ ಆಗಿದ್ದಾನೆ; ನೀವು ಹೊಂದಿರುವ ಪ್ರತಿಯೊಂದು ಅಗತ್ಯಕ್ಕೂ ಆತನೇ ಒದಗಿಸುವವನಾಗಿದ್ದಾರೆ; ನೀವು ಪಡೆಯುವ ಪ್ರತಿಯೊಂದು ಆಶೀರ್ವಾದದ ಮೂಲವು ಆತನೇ ಆಗಿದ್ದಾನೆ; ಮತ್ತು ನಿಮ್ಮ ಜೀವನವನ್ನು ಅಲಂಕರಿಸುವ ಪ್ರತಿಯೊಂದು ಉತ್ತಮ ಉಡುಗೊರೆಯನ್ನು ನೀಡುವವನು ಆತನೇ ಆಗಿದ್ದಾನೆ..!
ಮನುಷ್ಯನು ಆತನಿಗೆ ಸಂಪೂರ್ಣವಾಗಿ ಮಣಿಯಬೇಕು ಮತ್ತು ಆತನೊಂದಿಗೆ ಪೂರ್ಣ ಹೃದಯದಿಂದ ಸಹಕರಿಸಬೇಕು ಎಂಬುದೇ ದೇವರ ಬಯಕೆಯಾಗಿದೆ. ಅಲ್ಲದೆ, ಅವರ ವಾಗ್ದಾನಕ್ಕೆ ಅನುಗುಣವಾಗಿ ತಮ್ಮ ಒಳಿತಿಗಾಗಿ ಮತ್ತು ಅವರ ಮಹಿಮೆಗಾಗಿ ಬಯಸುತ್ತಿದ್ದಾರೆಯೇ ಅಥವಾ ಅದರ ಅಗತ್ಯವಿದೆಯೇ ಎಂದು ತಿಳಿದು ಯಾವುದನ್ನೂ ಮತ್ತು ಎಲ್ಲವನ್ನೂ ಕೇಳುವಾಗ ಅವರನ್ನು ಖಂಡಿಸದೆ ಉದಾರವಾಗಿ ಎಲ್ಲರಿಗೂ ನೀಡುವುದು ದೇವರ ಚಿತ್ತವಾಗಿದೆ.
’’ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿಸು; ನಿನ್ನ ದಾರಿಗಳನ್ನು ನನಗೆ ಕಲಿಸು. ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸುತ್ತೇನೆ…..’’( ಕೀರ್ತನೆ 25:4-5)
January 4
be made new in the attitude of your minds… —Ephesians 4:23 Remember, our verse today comes from Paul’s challenge to put off our old way of life (Ephesians 4:22-24). As