Welcome to JCILM GLOBAL

Helpline # +91 6380 350 221 (Give A Missed Call)

ವಿಶ್ವಾಸದ ಘೋಷಣೆಗಳು

ಅನಿರೀಕ್ಷಿತ ಆಶೀರ್ವಾದಗಳು ಇಲ್ಲಿ ಇದೀಗ ನನ್ನ ಹಾದಿಯಲ್ಲಿವೆ ಎಂದು ನಾನು ಘೋಷಿಸುತ್ತೇನೆ. ಕೇವಲ ಇರುವುದರಿಂದ; ಸಾಕಷ್ಟು ಹೆಚ್ಚಿನದನ್ನು ಹೊಂದಿರುವ ಕಡೆಗೆ ನಾನು ಮುಂದುವರೆದಿದ್ದೇನೆ. ದೇವರು ನನಗೆ ಅಲೌಕಿಕವಾದ ಬಾಗಿಲುಗಳನ್ನು ತೆರೆದಿದ್ದಾರೆ. ಅವರು ನನ್ನ ಬಗ್ಗೆ ಸರಿಯಾದ ವ್ಯಕ್ತಿಗಳೊಂದಿಗೆ ಮಾತನಾಡಿದ್ದಾರೆ. ಎಫೆಸಿ 3:20 ರ ಪ್ರಕಾರ ನಾನು ಹೆಚ್ಚಾಗಿ, ಹೇರಳವಾಗಿ, ಮಿತಿಮೀರಿದ ದಯೆ ಹೊಂದಿದವನಾಗಿ ನನ್ನ ಜೀವನದಲ್ಲಿ ಅಭಿವೃದ್ಧಿಯಾಗಿದ್ದು ಇದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇದೇ ನನ್ನ ಘೋಷಣೆ.

ದೈವ ಆರೋಗ್ಯದ ಘೋಷಣೆಗಳು

ನನ್ನಲ್ಲಿರುವ ಕ್ರಿಸ್ತನು ನಿರಂತರ ಆರೋಗ್ಯ ಮತ್ತು ಜೀವಶಕ್ತಿಗೆ ನನ್ನ ಭರವಸೆಯಾಗಿದ್ದಾರೆ. ಅವರೇ ನನ್ನ ಜೀವನದ ಮಹಿಮೆಯಾಗಿದ್ದಾರೆ. ಆದ್ದರಿಂದ, ಯೇಸು ಕ್ರಿಸ್ತನು ನನಗಾಗಿ ವಿನ್ಯಾಸಗೊಳಿಸಿದಂತೆ ನಾನು ಎಲ್ಲದಕ್ಕೂ ಯೋಗ್ಯನಾಗಿ ಜೀವಿಸುತ್ತೇನೆ. ನಾನು ಸುಂದರತೆ ಮತ್ತು ವೈಭವದಲ್ಲಿ ಜೀವಿಸುತ್ತಿದ್ದೇನೆ ಮತ್ತು ನನ್ನ ಲೋಕದಲ್ಲಿ ಕ್ರಿಸ್ತನ ಪರಿಪೂರ್ಣತೆ ಮತ್ತು ಶ್ರೇಷ್ಠತೆಗಳನ್ನು ನಾನು ಪ್ರದರ್ಶಿಸುತ್ತೇನೆ. ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ ಆಮೆನ್

ನಾನು ಹೇಳುವುದನ್ನು ನಾನು ಹೊಂದಿಕೊಳ್ಳುತ್ತೇನೆ, ಯೇಸುವಿನ ನಾಮದಲ್ಲಿ
ನಾನು ಬಲಶಾಲಿಯಾಗಿದ್ದೇನೆ 
ನಾನು ಆರೋಗ್ಯಶಾಲಿಯಾಗಿದ್ದೇನೆ
ನಾನು ಆಶೀರ್ವದಿಸಲ್ಪಟ್ಟಿದ್ದೇನೆ 
ನಾನು ಶಕ್ತಿಶಾಲಿಯಾಗಿದ್ದೇನೆ
ನಾನು ಅಭಿಷೇಕಿಸಲ್ಪಟ್ಟಿದ್ದೇನೆ  
ನಾನು ಬಿಡುಗಡೆ ಹೊಂದಿದವನಾಗಿದ್ದೇನೆ
ನಾನು ದೇವರ ಪ್ರಿಯನಾದವನಾಗಿದ್ದೇನೆ
ನಾನು ದೇವರಿಂದಲೂ ಮತ್ತು ಜನರಿಂದಲೂ ಸಹಾಯವನ್ನು ಹೊಂದಿದವನಾಗಿದ್ದೇನೆ
ನಾನು ಏನನ್ನು ಕಾಣಲು ಬಯಸುತ್ತೇನೊ ಅದನ್ನು ನುಡಿಯುತ್ತೇನೆ ನಾನು ಏನನ್ನು ನೋಡುತ್ತಿದ್ದೇನೊ ಅದನ್ನಲ್ಲ
ನಾನು ಅಮೂಲ್ಯವಾದ ಬೀಜವಾಗಿದ್ದೇನೆ
ನಾನು ನನ್ನ ದೇವರ  ಮನೆಯ ಒಳ್ಳೆಯ ನೆಲದಲ್ಲಿ ಬಿತ್ತಲ್ಪಟ್ಟಿದ್ದೇನೆ  
ನಾನು ನನ್ನ ಪ್ರಭುವಿನ ಅಂಗಳದಲ್ಲಿರುವ ತಾಳೆ ಮರದ ಹಾಗೆ ಫಲಭರಿತನಾಗಿರುತ್ತೇನೆ 
ನಾನು ಸಕಾಲದಲ್ಲಿ ಫಲ ನೀಡುವವನಾಗಿದ್ದೇನೆ
ನಾನು ಪ್ರಭುವಿನಲ್ಲಿ ಪಚ್ಚೆ ಪಸಿರುಗಳಿಂದ ತುಂಬಿರುವವನಾಗಿದ್ದೇನೆ
ನಾನು ವೃದ್ಧಾಪ್ಯದಲ್ಲಿಯೂ ತಾಜಾ ಹಾಗೂ ಸಮೃದ್ಧಿಯುಳ್ಳವನಾಗಿರುತ್ತೇನೆ
ನನ್ನ ಎಲೆಗಳು ಒಣಗುವುದಿಲ್ಲ ಮತ್ತು ನಾನು ಮಾಡುವ ಎಲ್ಲಾ ಕಾರ್ಯಗಳು ಸಮೃದ್ಧಿಯನ್ನು ಹೊಂದುತ್ತವೆ,ಯೇಸುವಿನ ನಾಮದಲ್ಲಿ. 
ಎಲ್ಲಾ ಕಾರ್ಯಗಳು ನನ್ನ ಒಳಿತಿಗಾಗಿ ಆಗುತ್ತಿವೆ,ಯೇಸುವಿನ ನಾಮದಲ್ಲಿ.
ಕ್ರಿಸ್ತಯೇಸುವಿನಲ್ಲಿ ನಾನು ಎಲ್ಲಾ ಆಧ್ಯಾತ್ಮಿಕ ಆಶೀರ್ವಾದಗಳನ್ನು ಸ್ವೀಕರಿಸಿರುವವನಾಗಿದ್ದೇನೆ

ನಾನು ಜೀವಿಸುವ ಆತ್ಮನಾಗಿದ್ದೇನೆ
ನನ್ನ  ಆತ್ಮವು ಪ್ರಾಣವನ್ನು ಹೊಂದಿದೆ
ನನ್ನ ಆತ್ಮ ಮತ್ತು ಪ್ರಾಣಗಳು ಭೌತಿಕ ಶರೀರದಲ್ಲಿ ನೆಲೆಸಿವೆ
ನನ್ನ ಆತ್ಮವು ನನ್ನ ಪ್ರಾಣಕ್ಕೆ ಆದೇಶಿಸುತ್ತದೆ, ನನ್ನ  ಪ್ರಾಣವು ಅದಕ್ಕೆ  ಕಿವಿಗೊಡುತ್ತದೆ, ಅದನ್ನು ಸ್ವೀಕರಿಸುತ್ತದೆ ಮತ್ತು  ನನ್ನ ದೇಹಕ್ಕೆ ಸೂಚನೆಗಳನ್ನು ನೀಡುತ್ತದೆ ಮತ್ತು  ಆಗ ನನ್ನ ಶರೀರವು ಅದಕ್ಕೆ ವಿಧೇಯವಾಗುತ್ತದೆ

ಯೇಸುವಿನ ನಾಮದಲ್ಲಿ,   ನಾನು ನನ್ನ ದೇಹಕ್ಕೆ ದೇವರ ಅಮರವಾದ ಜೀವವು ಸ್ಪಷ್ಟವಾದುದು ಮತ್ತು ಅದು ಯಾವಾಗಲೂ ನನ್ನ ಜೀವನದಲ್ಲಿ ವ್ಯಕ್ತವಾಗುತ್ತಿದೆ ಎಂದು  ನುಡಿಯುತ್ತೇನೆ,
ನಾನು ನನ್ನ ಶರೀರದ ಪ್ರತಿಯೊಂದು ವಿವರಣೆಗಳಿಗೆ  ಜೀವವನ್ನು ನುಡಿಯುತ್ತೇನೆ
ನಾನು ನನ್ನ ಮನಸ್ಸಿಗೆ ಕ್ರಿಸ್ತರ ಮನಸ್ಸಿನ ಹಾಗೆ ಪರಿಪೂರ್ಣವಾಗಿರುವಂತೆ ನುಡಿಯುತ್ತೇನೆ ಮತ್ತು ನೀನು ದೇವರ ವಾಕ್ಯದಿಂದ  ಸರಿ ಹೊಂದು ಎಂದು ನಿನಗೆ ಆದೇಶಿಸಿತ್ತೇನೆ
ನಾನು ನನ್ನ ಟೆಂಡನ್ ಗಳು ಮತ್ತು ನರಗಳಿಗೆ ಜೀವವನ್ನು ನುಡಿಯುತ್ತೇನೆ
ನಾನು ನನ್ನ ಸ್ನಾಯಗಳು  ಮತ್ತು ಸ್ನಾಯುಪದರಗಳಿಗೆ ಶಕ್ತಿಯನ್ನು ನುಡಿಯುತ್ತೇನೆ 
ನಾನು ನನ್ನ ಹೃದಯಕ್ಕೆ ಹುರುಪನ್ನು ನುಡಿಯುತ್ತೇನೆ 
ನಾನು ನನ್ನ ಶ್ವಾಸಕೋಶ ಮತ್ತು ಅದರ ಅಂಗಾಂಶಗಳಿಗೆ ಸರಿಯಾದ ಉಸಿರಾಟ ಮತ್ತು ಸಂಚಲನೆಯ ಅನುಪಾತವನ್ನು ಪಾಲಿಸಲು ನುಡಿಯುತ್ತೇನೆ
ನನ್ನ ಮೂತ್ರಕೋಶ, ಲಿವರ್ ಮತ್ತು ಪ್ಯಾಂಕ್ರಿಯಾಸ್ ಗಳಿಗೆ ಪರಿಪೂರ್ಣತೆಯನ್ನು ನುಡಿಯುತ್ತೇನೆ
ನನ್ನ ರಕ್ತದ ಪ್ರತಿಯೊಂದು ಕಣದಲ್ಲಿಯೂ ಜೀವವಿದೆ
ನನ್ನ ಮೂಳೆಗಳು, ಕೀಲುಗಳು ಮತ್ತು ಅಸ್ಥಿಮಜ್ಜೆಗಳು ಜೋಡಣೆಗೊಂಡಿವೆ, ಹಾಗೂ  ಶಕ್ತಿಭರಿತವಾಗಿಯೂ ಮತ್ತು ಸದೃಢವಾಗಿಯೂ ಇವೆ
ನನ್ನ ಬೆರಳುಗಳು ಅತ್ಯುತ್ತಮವಾಗಿ ಕಾರ್ಯ ಮಾಡುತ್ತವೆ.
ನನ್ನ  ಕಣ್ಣುಗಳು ಸ್ಪಷ್ಟವಾದ ಹಾಗೂ ಪರಿಪೂರ್ಣವಾದ ದೃಷ್ಟಿಯನ್ನು ಹೊಂದಿವೆ ಮತ್ತು 
ನನ್ನ ಕಿವಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ
ನನ್ನ ಚರ್ಮವು ಈಗ ತಾನೆ ಹುಟ್ಟಿದ ಮಗುವಿನ ಹಾಗೆಯೂ ಹಾಗೂ ದೇವರ ಸೌಂದರ್ಯದ ಹಾಗೆಯೂ  ಕೋಮಲವಾಗಿ ಹಾಗೂ ಆರೋಗ್ಯವಾಗಿಯೂ ಇದೆ
ನನ್ನ ಕೂದಲಿನ ಅಂಗಾಂಶಗಳು ಬಲವಾಗಿವೆ. ನನ್ನ  ಕೂದಲಿಗೆ ಸೂಕ್ತ ಸ್ಥಳದಲ್ಲಿ ಇರುವಂತೆ ಆದೇಶಿಸುತ್ತೇನೆ ಮತ್ತು ಎಲ್ಲಿ ಬೆಳವಣಿಗೆಯ ಅವಶ್ಯಕತೆ ಇದೆಯೋ ಆ ಅಂಗಾಂಶಗಳಿಗೆ ನಾನು ಬೆಳವಣಿಗೆಯನ್ನು ಆದೇಶಿಸುತ್ತೇನೆ
ನನ್ನ ಹಲ್ಲುಗಳು, ವಸಡುಗಳು,ದವಡೆ ಮೂಳೆಗಳು ಮತ್ತು ಅಲ್ಲಿನ ರಕ್ತ ಸಂಚಲನೆಗಳೆಲ್ಲವೂ ಆರೋಗ್ಯವಾಗಿಯೂ, ಬಲವಾಗಿಯೂ ಮತ್ತು  ಪರಿಪೂರ್ಣವಾಗಿಯೂ ಇವೆ
ನನ್ನ ಎಲ್ಲಾ ಹಾರ್ಮೋನುಗಳು ಮತ್ತು ನರಗಳ ರಾಸಾಯನಿಕ ವಾಹಕಗಳು ಪರಸ್ಪರ ಪರಿಪೂರ್ಣವಾದ  ಸೌಹಾರ್ದತೆಯಲ್ಲಿ ಇವೆ ಮತ್ತು ತಮ್ಮ ಕಾರ್ಯಗಳನ್ನು ಸಾಧಾರಣವಾಗಿ ನಿರ್ವಹಿಸುತ್ತಾ ಇವೆ.
ನನ್ನ ಜೀರ್ಣ ವ್ಯವಸ್ಥೆಯು ಜೀರ್ಣಿಸಲು, ,ಹೀರಲು ಮತ್ತು ಸೇವಿಸಿದ ಎಲ್ಲಾ  ಆಹಾರವನ್ನು  ಸಂಯೋಜಿಸಲು ಸಮರ್ಥವಾಗಿದೆ ಮತ್ತು ಜೀರ್ಣಕ್ರಿಯೆಯ ತ್ಯಾಜ್ಯ ವಸ್ತುಗಳು ನಿಯಮಿತವಾಗಿ ವಿಸರ್ಜಿಸಲ್ಪಡುತ್ತವೆ 
ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಬೇಕಾದಷ್ಟು ಮತ್ತು ಉತ್ತಮವಾದ ಚಲನೆಯನ್ನು ಹೊಂದಿರುವ ಒಳ್ಳೆಯ ವೀರ್ಯಾಣುಗಳನ್ನು ಉತ್ಪಾದಿಸಿ ಶೇಖರಿಸುತ್ತಾ ಇದೆ/ ನನ್ನ ಸಂತಾನೋತ್ಪತ್ತಿಯ ವ್ಯವಸ್ಥೆಯು ಸಮಯಕ್ಕೆ ಸರಿಯಾಗಿ ಅಂಡಾಶಯಗಳನ್ನು ಉತ್ಪಾದಿಸುತ್ತದೆ, ಭ್ರೂಣವನ್ನು ಹೆರಿಗೆಯ ಸಮಯದವರೆಗೂ ಸಂರಕ್ಷಿಸಿ ಪೋಷಿಸುತ್ತದೆ                                                                                                        
ನನ್ನ ಶರೀರದ ಪ್ರತಿಯೊಂದು ಅಂಗಾಂಗವೂ,ಪ್ರತಿಯೊಂದು ಅಂಗಾಂಶವೂ ಅದನ್ನು ದೇವರು ಯಾವ ಕಾರ್ಯವನ್ನು ಮಾಡಲು ಸೃಷ್ಟಿಸಿದರೊ ಆ ಕಾರ್ಯವನ್ನು ಅದು ಪರಿಪೂರ್ಣವಾಗಿ  ಮಾಡುತ್ತಿದೆ ಮತ್ತು ನಾನು ನನ್ನ ದೇಹದಲ್ಲಿ  ಯಾವುದೇ ರೀತಿಯ  ಅಸಮರ್ಪಕವಾದ ಕ್ರಿಯೆ ಮತ್ತು ಅಸಮರ್ಪಕವಾದ ರಚನೆಯನ್ನು ವರ್ಜಿಸುತ್ತೇನೆ,ಯೇಸುವಿನ ನಾಮದಲ್ಲಿ. 
ನನ್ನ ಸಂಪೂರ್ಣ ಮಾನವ ಅಂಗರಚನೆ ಮತ್ತು ಶರೀರ ರಚನೆಯು ಕ್ರಿಸ್ತ ಯೇಸುವಿನಲ್ಲಿ ಪರಿಪೂರ್ಣವಾಗಿದೆ. ಅಲ್ಲೇಲ್ಲೂಯ! ಆಮೆನ್.     
                        
ಪಿತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಸುತ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ
ಪವಿತ್ರಾತ್ಮ ದೇವರು ನನ್ನನ್ನು ಪ್ರೀತಿಸುತ್ತಾರೆ,ಇದನ್ನು ನಾನು ಅರಿತಿದ್ದೇನೆ,ಇದನ್ನು ನಾನು ಅರಿತಿದ್ದೇನೆ

?ಮಹೋನ್ನತದಿ ದೇವರಿಗೆ ಸ್ತುತಿಯೂ ಮತ್ತು ಮಹಿಮೆಯೂ ಸಲ್ಲಲಿ?

Archives

April 23

FAITH DECLARATIONS I DECLARE I am a people builder. I look for opportunities to encourage others to bring out the best in them and to help them accomplish their dreams.

Continue Reading »

April 22

FAITH DECLARATIONS I DECLARE I live victoriously. I am created in the Image of God. I have the DNA of a winner. I am wearing a Crown of Favor. Royal

Continue Reading »

April 21

FAITH DECLARATIONS I DECLARE God’s Supernatural Favor over my life. What I could not make happen on my own, God has made happen for me. Supernatural opportunities, healing, restoration, and

Continue Reading »

April 20

FAITH DECLARATIONS I DECLARE that I am calm and peaceful. I do not let people or circumstances upset me. I rise above every difficulty, knowing that God has given me

Continue Reading »

April 19

FAITH DECLARATIONS I DECLARE there is an anointing of ease on my life. God is ever before me, He has made crooked places straight. His yoke is easy and His

Continue Reading »

April 18

FAITH DECLARATIONS I DECLARE breakthroughs are here and now in my life. Sudden bursts of God’s Goodness, not a trickle, not a stream, but a flood of God’s Power, a

Continue Reading »

April 17

FAITH DECLARATIONS I DECLARE I put actions behind my faith. I demonstrate my faith by taking bold steps to move towards what God has put in my heart. My faith

Continue Reading »

April 16

FAITH DECLARATIONS I DECLARE that I live as a healer I am sensitive to the needs of those around me. I lift the fallen, restore the broken, and encourage the

Continue Reading »

April 15

FAITH DECLARATIONS I DECLARE that I have a sound mind filled with good thoughts, not thoughts of defeat. By faith, I am well able. I am anointed. I am equipped.

Continue Reading »