ಪ್ರೇರಣೆಯು ಜೀವನದಲ್ಲಿ ಮುಖ್ಯವಾಗಿದೆ.
ಸಾಮಾನ್ಯವಾಗಿ, ನೀವು ಒಂದು ಕಾಲ ಅಥವಾ ಋತುವನ್ನು ಮುಗಿಸುವ ಮಾರ್ಗವು ಮುಂದಿನದನ್ನು ಪ್ರಾರಂಭಿಸುವ ಮಾರ್ಗವಾಗಿದೆ – ಆದ್ದರಿಂದ ನೀವು ಹಿಂದೆ ಹೆಚ್ಚು ತಪ್ಪಿಸಿಕೊಂಡಿದ್ದರೂ ಸಹ ನಿಮ್ಮ ಗುರಿಗಳನ್ನು ಮುಟ್ಟುವುದರೊಂದಿಗೆ ಮುಂದುವರಿಯಿರಿ.
ಪಾಪ, ಅವಮಾನ, ಭಯ, ವಿಷಾದ ಮತ್ತು ನಿರುತ್ಸಾಹವು ನಮ್ಮನ್ನು ಒಂದು ಸ್ತಬ್ಧವಾಗಿ ಇರಿಸಲು ಪ್ರಯತ್ನಿಸುತ್ತದೆ, ಆದರೆ ನಾವು “ಯೇಸುವಿನಲ್ಲಿ” ಉಳಿದಿದ್ದರೆ ಅಥವೇ ನೆಲೆಗೊಂಡಿದ್ದರೆ ಆ ರೀತಿಯಾಗಲು ಸಾಧ್ಯವಿಲ್ಲ..!!
ನಿರಾಶೆ ಅನಿವಾರ್ಯ. ಆದರೆ ನಿರುತ್ಸಾಹಗೊಳ್ಳಲು, ನಾನು ಮಾಡಿಕೊಳ್ಳಬಹುದಾದ ಆಯ್ಕೆ ಇದೆ. ದೇವರು ನನ್ನನ್ನು ಎಂದಿಗೂ ನಿರುತ್ಸಾಹಗೊಳಿಸುವುದಿಲ್ಲ. ಆತನನ್ನು ನಂಬಲು ಅವರು ಯಾವಾಗಲೂ ನನ್ನನ್ನು ಆತನ ಕಡೆಗೆ ತೋರಿಸಲು ಕೇಂದ್ರೀಕರಿಸುತ್ತಾರೆ. ಆದ್ದರಿಂದ, ನನ್ನ ನಿರುತ್ಸಾಹವು ಸೈತಾನನಿಂದ ಬಂದಿದೆ. ವಿಷಾದ, ನಿರಾಶೆ ದೇವರಿಂದ ಬಂದುದಲ್ಲ. ಕಹಿಭಾವನೆ, ಕ್ಷಮೆಕೊಡದಿರುವುದು, ಇವೆಲ್ಲವೂ ಸೈತಾನನ ದಾಳಿಗಳಾಗಿವೆ.
ಧ್ಯಾನಿಸಲು ಅತ್ಯಮೂಲ್ಯವಾದ ಸಹಾಯವೆಂದರೆ ವಾಕ್ಯಗಳನ್ನು ನೆನಪಿನಲ್ಲಿಡುವುದು(ಕಂಠಪಾಠ ಮಾಡುವುದು). ನಿರುತ್ಸಾಹ ಅಥವಾ ಖಿನ್ನತೆಯೊಂದಿಗೆ ಹೋರಾಡುತ್ತಿರುವ ಜನರಿಗೆ ಎರಡು ಪ್ರಶ್ನೆಗಳನ್ನು ಕೇಳಿ: “ನೀವು ಕರ್ತನಿಗಾಗಿ ಹಾಡುತ್ತೀದ್ದೀರಾ?” ಮತ್ತು “ನೀವು ವಾಕ್ಯಗಳನ್ನು ಕಂಠಪಾಠ ಮಾಡುತ್ತಿದ್ದೀರಾ? ಎಂದು. ನಾವು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ನಮ್ಮ ದೃಷ್ಟಿಕೋನ ಮತ್ತು ಮನೋಭಾವವನ್ನು ಬದಲಾಯಿಸಲು ಅವರೂ ಕೂಡ ನಂಬಲಾಗದ ಶಕ್ತಿಯನ್ನು ಹೊಂದಿದ್ದಾರೆ.
ನಿಮ್ಮ ಪರಿಸ್ಥಿತಿಯನ್ನು ನಂಬುವುದನ್ನು ನಿಲ್ಲಿಸಿ. ದೇವರು ನಿಯಂತ್ರಣದಲ್ಲಿದ್ದಾರೆ ಹೊರೆತು ನಿಮ್ಮ ಪರಿಸ್ಥಿತಿಯಲ್ಲ. ಅವರಲ್ಲಿ ಬೇರೂರಿ ನಿಲ್ಲಿ.
‘’ನಾನೇ ದ್ರಾಕ್ಷೇಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ ಅವನೇ ಬಹಳ ಫಲವನ್ನು ಕೊಡುವನು; ಯಾಕಂದರೆ ನಾನಿಲ್ಲದೆ ನೀವು ಏನೂ ಮಾಡಲಾರಿರಿ….’’(ಯೋವಾನ್ನ 15:5)
This post is also available in:
English
Hindi
Tamil
Marathi
Goan Konkani
Malayalam
Punjabi
Telugu
Urdu