ದೇವರು ನಿಮಗಾಗಿ 2022 ರ ದರ್ಶನವನ್ನು(Vision) ಹೊಂದಿದ್ದಾರೆ.
ಒಂದು ದರ್ಶನವು ನಿಮ್ಮ ಭವಿಷ್ಯದ ಸ್ಥಿತಿಯ ಮಾನಸಿಕ ಚಿತ್ರಣವಾಗಿದೆ ಎಂಬುದನ್ನು ನೆನಪಿಡಿ – ಅದು ನಿಮ್ಮ ವರ್ತಮಾನವನ್ನು ರೂಪಿಸುತ್ತದೆ, ಆದ್ದರಿಂದ, ದೇವರ ವಾಕ್ಯದ ಮೂಲಕ ನಿಮಗಾಗಿ ದೇವರ ಯೋಜನೆಯನ್ನು ಕಲ್ಪಿಸಿಕೊಳ್ಳಿ.
ನೀವು ದೊಡ್ಡದಾಗಿ ಯೋಚಿಸಲು ಪ್ರಾರಂಭಿಸಿದಾಗ ಶತ್ರುವಿಗೆ ಇಷ್ಟವಾಗುವುದಿಲ್ಲ, ದೇವರ ವಾಕ್ಯದ ಪ್ರಕಾರ ದರ್ಶನಗಳನ್ನು(Vision) ಮಾಡಲು ಪ್ರಾರಂಭಿಸಿ, ಏಕೆಂದರೆ ಆಗ ನೀವು ದೇವರಂತೆ ಯೋಚಿಸುವವರಾಗುತ್ತೀರಿ.
ನಿಮ್ಮ ಜೀವನವು ನೀವು ಜೀವಿಸುತ್ತಿರುವ ಜೀವನಕ್ಕಿಂತ ದೊಡ್ಡದಾದುದಾಗಿದೆ ಅಥವಾ ಮಹತ್ತಾದುದಾಗಿದೆ, ಏಕೆಂದರೆ ದೇವರು ವಾಗ್ದಾನವನ್ನು ಉಳಿಸಿಕೊಳ್ಳುವವರಾಗಿದ್ದಾರೆ.
ನೀವು ಯಾವುದನ್ನು ಸೀಮಿತಗೊಳಿಸಿದ್ದೀರೋ, ಅದರಲ್ಲಿಯೇ ಕರ್ತನನ್ನು ಆಶೀರ್ವದಿಸಲು ಪ್ರಾರಂಭಿಸಿ.
ಏಕೆಂದರೆ ಸ್ತುತಿಸುವ ಆತ್ಮವು ಶತ್ರುವನ್ನು ಸೋಲಿಸುತ್ತದೆ ಮತ್ತು ಪರಿಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಸ್ತುತಿಯು ಸೆರೆಮನೆಯ ಬಾಗಿಲುಗಳನ್ನೂ ಕೂಡ ತೆರೆಯುವಂತೆ ಮಾಡಲು ಕಾರಣವಾಗುತ್ತದೆ.
ಕರ್ತನು ತನ್ನ ಮಕ್ಕಳು ಬಂಧನಕ್ಕೊಳಗಾಗಿರುವುದನ್ನು ಬಯಸುವುದಿಲ್ಲ – ತನ್ನ ಮಕ್ಕಳು ತಮ್ಮ ಆತ್ಮಗಳಲ್ಲಿ ಸ್ವತಂತ್ರರಾಗಿರಬೇಕೆಂದು ಅವರು ಬಯಸುತ್ತಾರೆ.
ದೇವರು ನಮ್ಮನ್ನು ಅವರಲ್ಲಿ ಭರವಸೆ ಇಡುವಂತೆ ಕೇಳಿದಾಗ, ಅದು ನಮ್ಮ ಪ್ರಯೋಜನಕ್ಕಾಗಿಯೇ – ದೇವರಲ್ಲಿ ಭರವಸೆ ಇಡುವುದು ನಮ್ಮಿಂದ ಒತ್ತಡವನ್ನು ತೆಗೆದುಹಾಕುತ್ತದೆ
ಆದ್ದರಿಂದ, ದೊಡ್ಡದಾಗಿ ಯೋಚಿಸಿ, ವಿಶ್ವಾಸವನ್ನು ಹೊಂದಿರುವವರಾಗಿರಿ ಏಕೆಂದರೆ ವಿಶ್ವಾಸವು ಯಾವಾಗಲೂ ಸ್ತುತಿಯನ್ನು ಹೊರತರುತ್ತದೆ ಮತ್ತು ನೀವು ವಿಶ್ವಾಸದಲ್ಲಿ ದೇವರನ್ನು ಸ್ತುತಿಸಲು ಮತ್ತು ಧನ್ಯವಾದ ಸಲ್ಲಿಸಲು ಪ್ರಾರಂಭಿಸಿದಾಗ ಅದ್ಭುತಕಾರ್ಯಗಳು ಸಂಭವಿಸುತ್ತವೆ.
‘’ನಾನು ನಿಮ್ಮನ್ನು ಕುರಿತು ಮಾಡುವ ಆಲೋಚನೆಗಳನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಅವು ಕೇಡಿಗಲ್ಲ, ಸಮಾಧಾನಕ್ಕಿರುವ ಆಲೋಚನೆಗಳು; ನೀವು ನಿರೀಕ್ಷಿಸಿದ್ದ ಸ್ಥಿತಿಯನ್ನು ಕೊಡುವವುಗಳೇ…..’’(ಯೆರೆಮೀಯ 29:11)
This post is also available in:
English
Hindi
Tamil
Marathi
Goan Konkani
Malayalam
Punjabi
Telugu
Urdu