ದೇವರು ಮಿತಿಯಿಲ್ಲದ ದೇವರಾಗಿರುವುದರಿಂದ, ಆತನಿಗೆ ಮಾಡಲು ಬಹಳ ಕಷ್ಟಕರವಾದುದು ಯಾವುದೂ ಇಲ್ಲ.
ನಿಮ್ಮ ಯುದ್ಧಗಳನ್ನು ದೇವರು ತೆಗೆದುಕೊಳ್ಳುತ್ತಾರೆ ಮತ್ತು ನಿಮ್ಮ ಪರವಾಗಿ ಅವುಗಳನ್ನು ಜಯಿಸುತ್ತಾರೆ – ನಿಮ್ಮ ಅತ್ಯಗತ್ಯದ ಹಂತದಲ್ಲಿ ನೀವು ಎಂದಿಗೂ ನಿರೀಕ್ಷಿಸದ ರೀತಿಯಲ್ಲಿ ಆತನು ನಿಮ್ಮನ್ನು ಸಂಧಿಸುತ್ತಾರೆ ಏಕೆಂದರೆ ಆತನ ಸ್ವಂತಕ್ಕೆ ಸೇರಿದವರ ಕಡೆಗಿರುವ ಅಸಾಮಾನ್ಯ ಸಹಾಯದಿಂದ.
ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತುಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು.
ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.
ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.
ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ.
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
”ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು….”(ಯೆಶಾಯ 43:2)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,