ರೂಪಾಂತರ/ಮಾನಸಾಂತರ ಕೇವಲ ಸ್ವಾಭಾವಿಕವಾಗಿ ಆಗುವುದಿಲ್ಲ.
ನಮ್ಮ ಮನಸ್ಸಿನಲ್ಲಿ ಸಹಜವಾಗಿ ಪ್ರವೇಶಿಸುವ ಆಲೋಚನೆಗಳ ಮೇಲೆ ನಮಗೆ ನಿಯಂತ್ರಣವಿಲ್ಲದಿರಬಹುದು, ಆದರೆ ಅವು ಅಲ್ಲೇ ಉಳಿಯುವಂತೆ ನಾವು ಅನುಮತಿಕೊಡುವ ಆಲೋಚನೆಗಳ ಮೇಲೆ ನಮಗೆ ಖಂಡಿತವಾಗಿಯೂ ನಿಯಂತ್ರಣವಿರುತ್ತದೆ – ಪರಿವರ್ತನೆ ನಡೆಯುವ ಸ್ಥಳ ಯಾವುದೆಂದರೆ ಮನಸ್ಸಾಗಿದೆ.
ನಮ್ಮ ಭಾವನೆಗಳು ಮತ್ತು ಕ್ರಿಯೆಗಳ ಮೇಲೆ ನಮ್ಮ ಆಲೋಚನೆಗಳು ಶಕ್ತಿಯುತವಾದ ಪ್ರಭಾವ ಬೀರುತ್ತವೆ. ಚಕ್ರವು ಹೀಗೆ ಸಾಗುತ್ತದೆ.
ನಾವು ಒಂದು ಆಲೋಚನೆಯನ್ನು ಹೊಂದಿರುತ್ತೇವೆ (ಅದನ್ನು ನಾವು ನಿಜವಾದುದು ಎಂದು ಪರಿಗಣಿಸುತ್ತೇವೆ), ಅದು ನಮ್ಮಲ್ಲಿ ಭಾವನೆಗಳನ್ನು ಉಂಟುಮಾಡುತ್ತದೆ ಮತ್ತು ನಾವು ಏನನ್ನಾದರೂ ಮಾಡುವ ಮೂಲಕ(ಕ್ರಿಯೆಯ) ಆ ಭಾವನೆಗಳಿಗೆ ಪ್ರತಿಕ್ರಿಯಿಸುತ್ತೇವೆ.
ಮೂಲ ಆಲೋಚನೆಯು ಸುಂದರವಾಗಿದ್ದರೆ, ಸಂತೋಷಕರವಾಗಿದ್ದರೆ ಅಥವಾ ನಿಜವಾಗಿದ್ದರೆ, ಅದು ಸಂತೋಷದ ಭಾವನೆಗಳು ಮತ್ತು ಕ್ರಿಯೆಗಳನ್ನು ಹೊರತರುತ್ತದೆ. ಅದೇ ಆಲೋಚನೆಯು ಆತಂಕ, ಖಿನ್ನತೆ ಅಥವಾ ನಕಾರಾತ್ಮಕತೆ ಇತ್ಯಾದಿಗಳಾಗಿದ್ದಾಗ, – ನಾವು ಒಳ್ಳೆಯದಾಗಿ ಭಾವಿಸುವುದಿಲ್ಲ ಮತ್ತು ನಮ್ಮ ಕ್ರಿಯೆಗಳು ಅದನ್ನು ಅನುಸರಿಸುತ್ತವೆ.
ನಮ್ಮ ಅತಿ ದೊಡ್ಡ ಕುಸಿತವೆಂದರೆ ನಮ್ಮ ಆಲೋಚನೆಗಳನ್ನು ನಮ್ಮ ಸ್ವಂತ ಶಕ್ತಿಯಲ್ಲಿ ನಿಯಂತ್ರಿಸಲು ಪ್ರಯತ್ನಿಸುವುದು. ಪರಿಣಾಮವಾಗಿ ನಾವು ಪ್ರಾರಂಭಿಸುತ್ತೇವೆ, ಕಡಿಮೆಮಾಡುತ್ತೇವೆ ಮತ್ತು ಬಿಟ್ಟುಬಿಡುತ್ತೇವೆ.
ಆದ್ದರಿಂದ, ನಾವು ದೇವರಿಂದ ಮಾನಸಾಂತರಗೊಳ್ಳಲು/ಪರಿವರ್ತನೆಯಾಗಲು ಹುಡುಕಬೇಕು ಮತ್ತು ದೇವರು ನಮ್ಮನ್ನು ಆತನ ಹೋಲಿಕೆಗೆ ಪರಿವರ್ತಿಸುವಂತೆ ಪ್ರತಿದಿನವೂ ಒಂದು ಅವಕಾಶವನ್ನು ಸೃಷ್ಟಿಸಬೇಕು.
ಕೃಪೆಯನ್ನು ಯೆಥೇಚ್ಛವಾಗಿ ನೀಡುವ ದೇವರ ಬಳಿಗೆ ನಮ್ಮ ಬಲಹೀನತೆಗಳನ್ನು ತರುವುದು ಹೆಚ್ಚು ಪರಿಣಾಮಕಾರಿಯಾಗಿದೆ. ನಾವು ಪರಿಪೂರ್ಣರಲ್ಲ ಅಥವಾ ನಮ್ಮ ಆಲೋಚನಾ ಜೀವನವೂ ಪರಿಪೂರ್ಣವಲ್ಲ – ಆದರೆ ಕ್ರಿಸ್ತನ ಕೃಪೆಯೇ ಸಾಕು. ನಿಮ್ಮನ್ನು ನೀವೇ ಹೊಡೆದುಕೊಳ್ಳುವುದನ್ನು ನಿಲ್ಲಿಸಿ ಮತ್ತು ಆತನಿಗೆ ನೀಡಿ
ನಮ್ಮ ಆಲೋಚನೆಗಳು ನಿಜವಾಗಿಯೂ ಏನೆಂದು (ಯಾವ ರೀತಿಯಾಗಿದೆ ಎಂದು) ಮತ್ತು ಅವುಗಳ ಮೇಲೆ ಹೇಗೆ ವರ್ತಿಸಬೇಕು (ಅಥವಾ ವರ್ತಿಸಬಾರದು) ಎಂಬುದನ್ನು ಗುರುತಿಸಲು ದೇವರ ವಾಕ್ಯವು ನಮಗೆ ಸಹಾಯ ಮಾಡುತ್ತದೆ.
ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ! ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.(ರೋಮ 7:25)
Day 30
God is not limited by the economy, your job, or the stock market – GOD owns it all..! Keep your hope in Him, & you will not just make it,